spot_img
spot_img

ಡಾ. ಪಂ. ಪುಟ್ಟರಾಜ ಕೃಪಾಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

Must Read

spot_img

ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ೨೩ ವರ್ಷಗಳಿಂದ ಗೌರವಿಸುತ್ತಾ ಬಂದಿರುವ ಡಾ. ಪಂ. ಪುಟ್ಟರಾಜ ಕೃಪಾಭೂಷಣ ರಾಷ್ಟ್ರೀಯ ಪ್ರಶಸ್ತಿಗೆ, ಖ್ಯಾತ ಹಿಂದೂಸ್ಥಾನಿ ಗಾಯಕ, ಪುಟ್ಟರಾಜರ ಪರಮ ಶಿಷ್ಯ, ರೇವಣಸಿದ್ಧಯ್ಯ ಹಿರೇಮಠ ಚಿಂಚೋಳಿ, ಆಕಾಶವಾಣಿ ಸುಗಮಸಂಗೀತ ಕಲಾವಿದೆ ಶ್ರೀಮತಿ ಡಾ. ಸುಮಾ ಹಡಪದ ಹಳಿಯಾಳ, ಸಾಹಿತಿ, ಸಂಘಟಕ, ಬಹುಮುಖ ಪ್ರತಿಭಾನ್ವಿತ ಶಿಕ್ಷಕ, ಡಾ. ನಿಂಗು ಸೊಲಗಿ ಮುಂಡರಗಿ, ಸಮಾಜ ಸೇವಕ, ವೈದ್ಯ, ಪರಿಸರ ಪೇಮಿ, ಡಾ. ಪಿ. ಬಿ. ಹಿರೇಗೌಡ್ರ ಮುಂಡರಗಿ, ರಂಗ ನಿರ್ದೇಶಕ ರಂಗಭೂಮಿ ಹಿರಿಯ ಕಲಾವಿದ, ಗ್ರಾಮೀಣ ಪ್ರತಿಭೆ ಮಳ್ಳಪ್ಪ ಮಾಸ್ತರ ಗುಡಿಸಲಮನಿ ಸಾ|| ಗುಡ್ಡದ ಬೂದಿಹಾಳ ಮತ್ತು ಹಿರಿಯ ಸಂಗೀತ ಗುರು, ಸಾವಿರಾರು ಶಿಷ್ಯ ಪರಂಪರೆ ಹೊಂದಿರುವ ರೇವಣಸಿದ್ಧಪ್ಪ ಎಂ. ಕೆ. ದಾವಣಗೆರೆ ಇವರುಗಳು ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಹಾವಣ್ಣವರ ಬೆಳಗಾವಿ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ದಿನಾಂಕ ೧೩ ಮಾರ್ಚ್ ೨೦೨೩ ರಂದು ಗದಗ ಜಿಲ್ಲಾ ಮುಂಡರಗಿಯ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನಮಠ ಕೃಪಾಶ್ರಯದಲ್ಲಿ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನಾಡೋಜ’ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಪರಮ ಪೂಜ್ಯ ಡಾ. ಕಲ್ಲಯ್ಯ ಅಜ್ಜನವರು ವೀರೇಶ್ವರ ಪುಣ್ಯಾಶ್ರಮ ಇವರ ಸಮ್ಮುಖದಲ್ಲಿ ಹಮ್ಮಿಕೊಂಡಿರುವ ಡಾ. ಪಂ. ಪುಟ್ಟರಾಜ ಕವಿ, ಗವಾಯಿಗಳವರ ಜಯಂತ್ಯುತ್ಸವ ಮಾಸಾಚರಣೆ ಪಂ. ಪುಟ್ಟರಾಜ ಉತ್ಸವ-೨೦೨೩ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯು ಸುಮಾರು ವರ್ಷಗಳಿಂದ ಪೂಜ್ಯರ ಹುಟ್ಟುಹಬ್ಬವನ್ನು ಆಚರಿಸುತ್ತಾ ಬಂದಿದ್ದು ರಾಜ್ಯಾದ್ಯಂತ ತನ್ನ ಅಸ್ತಿತ್ವವನ್ನು ಹೊಂದಿದೆ ರಾಜ್ಯಾದ್ಯಂತ ಬೇರೆ ಸಂದರ್ಭದಲ್ಲಿ ಬೇರೇ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದೆ. ಇದೇ ಕಾರ್ಯಕ್ರಮವನ್ನು ಹಿಂದಿನ ವರ್ಷ ಸಾಣೆಹಳ್ಳಿಯ ಸಿರಿಗೆರೆಯ ಶಾಖಾಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ವರ್ಷ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಸಂಗೀತ, ನೃತ್ಯ, ಜಾನಪದ ಕಲಾ ಪ್ರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಆಸಕ್ತರು ಸಂಗೀತ ನೃತ್ಯ ಕಲಾ ಸೇವೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ದೇವು ಹಡಪದ ಮುಂಡರಗಿ ತಿಳಿಸಿದ್ದಾರೆ

ವಿಶಾಲ ಮಲ್ಲಾಪೂರ ಯೋಜನಾಧಿಕಾರಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆ ನೇತೃತ್ವದಲ್ಲಿ ಪೂಜ್ಯ ಗುರು ಪುಟ್ಟರಾಜರ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿದೆ ಈ ಮೆರವಣಿಗೆಯಲ್ಲಿ ಸ್ಥಳೀಯ ಕಲಾ ತಂಡಗಳು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಬೇಕು ಭಾಗವಹಿಸುವವರು ಜಿಲ್ಲಾ ಸಂಚಾಲಕರಾದ ಶಿವು ವಾಲಿಕಾರ ಮಕ್ತುಂಪೂರ ಇವರಲ್ಲಿ ಹೆಸರು ನೊಂದಾಯಿಸಿಕೊಳ್ಳ ಬೇಕೆಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮುಧೋಳ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!