ಹಾಸನದ ಹೇಮಾವತಿ ನಗರದ ಶ್ರೀಮತಿ ಮಂಗಳಾ ಜಯರಾಂರವರ ನಿವಾಸ ಗಹನ ಯೋಗ ಕೇಂದ್ರದಲ್ಲಿ ಎಸ್ ಎಸ್ ಪುಟ್ಟೇಗೌಡರ ಪ್ರಾಯೋಜಕತ್ವದಲ್ಲಿ 324ನೇ ಮನೆ ಮನೆ ಕವಿಗೋಷ್ಟಿ ಸಾಹಿತಿ, ಸಂಘಟಕ ಗೊರೂರು ಅನಂತರಾಜು ರವರ ಸಂಚಾಲಕತ್ವದಲ್ಲಿ ಅರ್ಥಪೂರ್ಣವಾಗಿ ಮೂಡಿಬಂತು.
ಎಸ್ ಎಸ್ ಪುಟ್ಟೇಗೌಡರ ಶಿವಶರಣ ರಾವಣ ನಾಟಕ ಕೃತಿ ಕುರಿತು ಮಾತನಾಡಿದ ಚಿಂತಕಿ ಉಪನ್ಯಾಸಕಿ ಜಿ.ಎಸ್ ಅನಸೂಯರವರು, ನಾಟಕಗಳು ಸಂಸ್ಕೃತಿ, ಸಂಸ್ಕಾರದ ಪ್ರತಿಬಿಂಬಗಳಾಗಿವೆ. ಆದರೆ ಪೋಷಕರು ಅವುಗಳನ್ನು ಮಕ್ಕಳಿಗೆ ನೀಡುವಲ್ಲಿ ಎಡವುತಿದ್ದಾರೆ. ಇತ್ತೀಚೆಗೆ ಬಹುತೇಕರಲ್ಲಿ ಸಂಸ್ಕೃತಿ, ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಇಂತಹ ಕೊರತೆ ನೀಗಿಸಲು ನಟ, ಕಲಾವಿದ, ನಾಟಕ ರಚನೆಕಾರರಾದ ಡಾ.ಎಸ್.ಎಸ್ ಪುಟ್ಟೇಗೌಡರ ಶಿವಶರಣರ ರಾವಣದಂತಹ ನಾಟಕಗಳು ಕೈಗನ್ನಡಿಯಂತಿವೆ ಎಂದರು. ನಾಟಕ ರಚನೆ ಅಂದುಕೊಂಡಷ್ಟು ಸುಲಭವಲ್ಲ. ಪಾತ್ರರಚನೆ, ಸಂಭಾಷಣೆ, ಪೌರಾಣಿಕ ಸನ್ನಿವೇಶ, ಧಾರ್ಮಿಕ ಸೂಕ್ಷ್ಮತೆ ಇವೆಲ್ಲವೂ ಈ ಕೃತಿಯಲ್ಲಿ ಅಡಕಗೊಂಡಿವೆ ಎಂದರು. ಕೃತಿ ವಿಮರ್ಶೆ ಚರ್ಚೆ ಯಲ್ಲಿ ಸಾಹಿತಿಗಳಾದ ಎನ್.ಎಲ್ ಚನ್ನೇಗೌಡ, ಉಮೇಶ್ ಹೊಸಹಳ್ಳಿ ಭಾಗವಹಿಸಿ ಮಾತನಾಡಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಎಚ್.ಎಸ್ ಬಸವರಾಜು, ಎನ್.ಎಲ್ ಚನ್ನೇಗೌಡ, ಉಮೇಶ್ ಹೊಸಹಳ್ಳಿ, ರಾಣಿ ಚರಶ್ರೀ, ಗಿರಿಜಾ ನಿರ್ವಾಣಿ , ಪದ್ಮಾವತಿ ವೆಂಕಟೇಶ ಕವಿತೆ ವಾಚಿಸಿದರು. ಸಮುದ್ರವಳ್ಳಿ ವಾಸು ಗೊರೂರು ಅನಂತರಾಜು ಚುಟುಕು ವಾಚಿಸಿದರು.
ಹಾಡುಗಾರಿಕೆಯಲ್ಲಿ ಎಸ್.ಎಸ್. ಪುಟ್ಟೇ ಗೌಡ, ಜಗದೀಶ ರಾಮಘಟ್ಟ, ರಾಮಲಿಂಗೇಗೌಡ, ಮಾಳಿಗೆ ಗೌಡರು, ಪೊಲೀಸ್ ಎ.ನಂಜಪ್ಪ ರಂಗಗೀತೆಗಳಿಂದ ರಂಜಿಸಿದರು. ಶ್ರೀಮತಿ ಜಯಶ್ರೀ ಬಾಲಕೃಷ್ಣ ತಂಡದ ಗಾಯಕಿಯರು ಮಂಜುಳ, ಕೆ.ಎಂ.ಲಕ್ಷಿ,, ಪದ್ಧ ಅಶ್ವಥ್ ಸಮೂಹ ಜಾನಪದ ಗೀತೆ ಹಾಡಿದರು. ವೀರಭದ್ರಾಚಾರ್ ಕೀಬೋರ್ಡ್, ಬೇಲೂರು ನಾಗೇಶ್ ತಬಲ, ಹೆಚ್ ವಿ.ಬಾಲಕೃಷ್ಣ ತಾಳ ಸಹಕಾರ ನೀಡಿದರು. ಡಾ. ಜಗದೀಶ್, ಯಶೋದಮ್ಮ, ನಳಿನಿ ಟಿ, ಅನಿತಾ ಹೆಚ್.ಆರ್, ಎನ್.ಕೆ ಶ್ರೀನಿವಾಸ ಶೆಟ್ಟಿ, ಎಮ್ ಎಸ್ ಲೀಲಾ ಧರ್ಮಪ್ಪ ಇನ್ನಿತರ ಸಾಹಿತ್ಯಾಸಕ್ತರು ಹಾಜರಿದ್ದರು. ತಮ್ಮಣ್ಣಯ್ಯ ರವರ ಹಾಸ್ಯ ಜಾನಪದ ಹಾಡು ನೃತ್ಯ ಖುಷಿ ನೀಡಿತು.