ಘಟಪ್ರಭಾ: ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ರಸ್ತೆ ಸಂಪರ್ಕ ಸರಳವಾಗಲಿದೆ ಮತ್ತು ಸ್ಥಳೀಯ ರೈತರಿಗೆ ಪರೋಕ್ಷ ನೀರಾವರಿ ಸೌಲಭ್ಯದ ಜೊತೆಗೆ ಭೂಮಿಯಲ್ಲಿನ ಅಂತರ್ಜಲ ಮಟ್ಟವು ಹೆಚ್ಚಾಗುತ್ತದೆ. ಬರಗಾಲದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಒಳ್ಳೆಯ ಕೃಷಿ ಮಾಡಲು ಅನುಕೂಲಕರವಾಗುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಮಾ-24 ರಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅನುದಾನದಡಿ ಕಲ್ಲೋಳಿಯಿಂದ ರಾಜಾಪೂರ ರಸ್ತೆ ಕರೆಮ್ಮನ ಗುಡಿ ಹತ್ತಿರ ಹಳ್ಳಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು 1 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣವಾಗಲಿದೆ ಈ ಕಾಮಗಾರಿಯಿಂದ ಎರಡು ಗ್ರಾಮಗಳ ರೈತರಿಗೆ ಅನುಕೂಲವಾಗಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ರಾಜಾಪೂರ ಗ್ರಾಮ ಪಂಚಾಯತ ಅಧ್ಯಕ್ಷ ಕೆಂಪಣ್ಣ ಗಡಹಿಂಗ್ಲೆಜ್, ಗ್ರಾ.ಪಂ ಸದಸ್ಯ ಸಿದ್ರಾಯ ಮರಿಸಿದ್ದಪ್ಪಗೋಳ, ರಾವಸಾಬ ಬೆಳಕೂಡ, ಬಸವರಾಜ ಕಡಾಡಿ, ಅಜಿತ್ ಬೆಳಕೂಡ, ಈರಪ್ಪ ಮ ಬೆಳಕೂಡ, ಶಿವಪ್ಪ ಬಿ ಪಾಟೀಲ್, ಶಿವಾನಂದ ಹೆಬ್ಬಾಳ, ಅಜಿತ್ ಚಿಕ್ಕೋಡಿ, ಹಣಮಂತ ಕೌಜಲಗಿ, ರಾಮಚಂದ್ರ ಕೊಡ್ಲಿ, ಅಡಿವೆಪ್ಪ ಮುತ್ನಾಳ, ಲಗಮಣ್ಣ ದಂಡಿನವರ, ಕೆಂಪಣ್ಣ ಜಿವನಿ, ರಾಮಪ್ಪ ಮುತ್ನಾಳ, ಅಪ್ಪಾಸಾಬ ನದಾಫ್, ದಸಗೀರಸಾಬ್ ಮಸ್ತಿಹೊಳಿ, ಕರೆಪ್ಪ ಅಲಕನೂರ್, ಬಸು ಹಿಟ್ಟನಗಿ, ಸಿದ್ದಪ್ಪ ಗಡಹಿಂಗ್ಲೆಜ್, ಅಡಿವೆಪ್ಪ ಕುರಬೇಟ, ಪಂಚಣ್ಣ ಹೆಬ್ಬಾಳ, ಜಗದೀಶ ಗೊರಗುದ್ದಿ, ಮಲ್ಲಿಕಾರ್ಜುನ ಗೋರೋಶಿ, ಶ್ರೀಶೈಲ ಕಡಾಡಿ, ಕಿರಣ ಕಡಾಡಿ, ಗುತ್ತಿಗೆದಾರ ಈರಣ್ಣ ಮುನ್ನೋಳಿಮಠ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.