ಸಿಂದಗಿ: ಮಕ್ಕಳಲ್ಲಿ ಒಂದಿಲ್ಲ ಒಂದು ಪ್ರತಿಭೆಗಳು ಇದ್ದೆ ಇರುತ್ತವೆ ಅವರಿಗೆ ವೇದಿಕೆ ಸಿಗದ ಕಾರಣ ಮುಂದೆ ಬರಲು ಸಾಧ್ಯವಾಗಿಲ್ಲ ಅಂತಹ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವದ ಜೊತೆಗೆ ಕ್ರಿಯಾಶೀಲತೆ ಬೆಳೆಸಲು ಶಿಕ್ಷಕ ಸಮುದಾಯ ಮುಂದಾಗಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಕೆ ಬಿರಾದಾರ ಹೇಳಿದರು.
ಪಟ್ಟಣದ ನಾವೆಲ್ ಕನ್ನಡ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಸಂಶೋಧಕನಾಗಬೇಕು ಪ್ರತಿ ವಿಷಯಗಳನ್ನು ವಿನೂತನ ರೀತಿಯಲ್ಲಿ ಅಭ್ಯಸಿಸಿ ಪ್ರಗತಿ ಸಾಧಿಸಬೇಕು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ವೈಜ್ಞಾನಿಕ ತಳಹದಿ ಮೇಲೆ ಬದುಕು ರೂಪಿಸಿಕೊಳ್ಳಲು ಸಹಕಾರ ನೀಡಬೇಕು. ಮಕ್ಕಳು ಸಹ ತಾಂತ್ರಿಕತೆಗೆ ಹೊಂದಿಕೊಂಡು ವಿದ್ಯಾರ್ಜನೆ ಮಾಡಬೇಕು. ಕ್ರಿಯಾಶೀಲತೆಯಿಂದ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಮಕ್ಕಳು ಮಾಡಿದ ವಿಜ್ಞಾನ ಉಪಕರಣಗಳನ್ನು ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್ ಬಿ ಯಲಗೋಡ,ಕಾರ್ಯದರ್ಶಿ ಎಸ್ ಕೆ ನಾಗಠಾಣ, ಜ್ಯೋತಿ ಬಿರಾದಾರ, ವೀರಣ್ಣ ಬಿರಾದಾರ, ಅಂಬಾಜಿ ದೇವಗಿರಿ, ಬಿಆರ್‍ಪಿ ಎಸ್ ಎಸ್ ಬುರಾನಗೋಳ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.