Homeಸುದ್ದಿಗಳುಬೆಂಕಿ ಆಕಸ್ಮಿಕ; ರೈತನಿಗೆ ಸಾಂತ್ವನ ಹೇಳಿದ ಕೊಳ್ಳೂರ

ಬೆಂಕಿ ಆಕಸ್ಮಿಕ; ರೈತನಿಗೆ ಸಾಂತ್ವನ ಹೇಳಿದ ಕೊಳ್ಳೂರ

spot_img

ಸಿಂದಗಿ: ತಾಲೂಕಿನ ಗುಬ್ಬೆವಾಡ ಗ್ರಾಮದ ರೈತ ವೀರಭದ್ರಪ್ಪ ಗೊಲ್ಲಾಳಪ್ಪ ರಾವೂರ ರವರ ತೋಟದಲ್ಲಿರುವ ದನದ ಪತ್ರಾಸ ಶೆಡ್ಡಿಗೆ ಆಕ್ಮಸಿಕ ಬೆಂಕಿ ತಗುಲಿ ಎರಡು ಎತ್ತುಗಳು, ಒಂದು ಆಕಳು, ಒಂದು ಕರು ಮತ್ತು ರಾಸಾಯನಿಕ ಗೊಬ್ಬರ ಹಾಗೂ ಒಕ್ಕಲುತನದ ಇತರೆ ಸಾಮಾನುಗಳು ಸೇರಿದಂತೆ ಸುಮಾರು 9 ಲಕ್ಷ ರೂಪಾಯಿಗಳ ಮೌಲ್ಯದ ವೆಚ್ಚದ ಹಲವಾರು ಸಲಕರಣೆಗ¼ ಬೆಂಕಿಗೆ ಆಹುತಿಯಾಗಿ ಹಾನಿಯಾಗಿರುತ್ತದೆ. ಆದ್ದರಿಂದ ಗ್ರಾಮಕ್ಕೆ ಭೇಟಿ ನೀಡಿ ಬ್ಲಾಕ ಕಾಂಗ್ರೆಸ ಸಮಿತಿ ಅಧ್ಯಕ್ಷ ವಿಠ್ಠಲ ಜಿ. ಕೊಳ್ಳೂರ ರವರು ರೈತನ ಕುಂಟುಬಕ್ಕೆ ಸಾಂತ್ವನ ಹೇಳಿ ದೈರ್ಯ ತುಂಬಿ ವೈಯಕ್ತಿಕವಾಗಿ 20000/- ರೂಪಾಯಿಗಳ ಧನಸಹಾಯ ಮಾಡಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಿಕಾರ್ಡ ಬ್ಯಾಂಕಿನ ನಿರ್ದೇಶಕ ಮಹಾದೇವ ಕೊಂಡಗುಳಿ, ಗ್ರಾಪಂ ಉಪಾಧ್ಯಕ್ಷ ಸಿದ್ದಲಿಂಗ ಗುಂಡಾಪೂರ, ಮಹ್ಮದಪಟೇಲ ಬಿರಾದಾರ, ಅಂಬಣ್ಣ ಗೊಲ್ಲರ ಆಲಮೇಲ, ಮಾಬುಬಪಟೇಲ ಕೆ ಬಿರಾದಾರ, ನಿಂಗಣ್ಣ ಸುಂಗಠಾಣ, ಡಾ. ಮಳಗೇದ, ಶ್ರೀಶೈಲ ಮಳ್ಳಿ, ಸದ್ದಾಮಪಟೇಲ ಬಿರಾದಾರ, ರಜಾಕಪಟೇಲ ಬಿರಾದಾರ, ಗದಗೆಪ್ಪ ರಾವೂರ, ಮಲ್ಲಪ್ಪ ರಾವೂರ, ಸಿದ್ದಾರಾಮ ಮಳ್ಳಿ, ಮಲ್ಲು ನಾಯ್ಕೋಡಿ, ರಾಯಪ್ಪ ನಾಯ್ಕೋಡಿ ರಮೇಶ ಗುಬ್ಬೇವಾಡ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇತರರು ಉಪಸ್ತಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group