spot_img
spot_img

ಸಾಹಿತ್ಯ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸುತ್ತೇನೆ – ಹಾಸಿಂಪೀರ

Must Read

- Advertisement -

ಸಿಂದಗಿ: ಸಾಹಿತ್ಯ ನಿಂತ ನೀರಾಗಬಾರದು ಅದು ಹರಿಯುವ ನೀರಿನಂತೆ ಎಲ್ಲರ ಸ್ವತ್ತಾಗಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ಜಿಲ್ಲೆಯ  ಎಲ್ಲ ಸ್ವಾಮೀಜಿಯವರ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದ ಸಾಹಿತ್ಯ ಪ್ರತಿಭೆಯುಳ್ಳವರಿಗೆ ವೇದಿಕೆ  ಸೃಷ್ಟಿಸುವ  ಪ್ರಾಮಾಣಿಕ ಪ್ರಯತ್ನ  ಮಾಡುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಹಾಸಿಂಪೀರ ವಾಲೀಕಾರ ಹೇಳಿದರು.

ತಾಲೂಕಿನ  ಯರಗಲ್.ಬಿ.ಕೆ ಗ್ರಾಮದಲ್ಲಿ ಪ್ರಚಾರ ಹಾಗು ನೂತನವಾಗಿ ಸದಸ್ಯತ್ವ ಅಭಿಯಾನದಲ್ಲಿ  ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು  ಮುಂದೂಡಿರುವದರಿಂದ ಪ್ರತಿ ಪರಿಷತ್ತಿನ ಸದಸ್ಯರೊಂದಿಗೆ ಸಾಹಿತ್ಯ ಚಟುವಟಿಕೆಗಳ ಪರಿಣಾಮಕಾರಿ ಕಾರ್ಯಕ್ರಮ ಕುರಿತು ಚರ್ಚಿಸುವ ಮೂಲಕ ಸಾಹಿತ್ಯ ಕ್ಷೇತ್ರದ  ಘನತೆ ಹಾಗು  ಮೌಲ್ಯ  ಬರುವಂತೆ ಎಲ್ಲ ವರ್ಗದ ಸಾಹಿತಿಗಳಿಗೆ ಅವಕಾಶ ನೀಡುವ ಮೂಲಕ ಸಾಹಿತ್ಯ ಕ್ಷೇತ್ರವನ್ನು  ಶ್ರೀಮಂತಗೊಳಿಸುವ  ಸಂಕಲ್ಪ  ನನ್ನದಾಗಿದೆ ಕಾರಣ ಪ್ರತಿಯೊಂದು ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಪ್ರತಿ ಗ್ರಾಮಗಳ ಮೂಲಕ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಅಭಿಮತ ವ್ಯಕ್ತಪಡಿಸಿದರು.

ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ ಮಾತನಾಡಿ, ಕೆಲವು ವರ್ಷಗಳಿಂದ ಸಾಹಿತ್ಯ ಪರಿಷತ್ತು ಕೆಲವರ ಸ್ವತ್ತಾಗಿ ಪರಿಣಮಿಸಿದ್ದರಿಂದ ಯುವ ಪ್ರತಿಭೆಗಳ ಮನೆ ಬಾಗಿಲಿಗೆ ಸಾಹಿತ್ಯ ಪಸರಿಸುತ್ತಿಲ್ಲ ಆ ಕಾರಣಕ್ಕೆ ಸಾಹಿತ್ಯ ಪರಿಷತ್ತಿನ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲಿ ಪರಿಣಿತಿ ಪಡೆದ ಪ್ರತಿಭಾನ್ವಿತರನ್ನು ಗುರುತಿಸುವ ಕಾರ್ಯದಲ್ಲಿ ವಿಜಯಪುರದ ಸಾಹಿತ್ಯ ಪರಿಷತ್ತಿನ ಪ್ರಬಲ ಆಕಾಂಕ್ಷಿ ಹಾಸೀಂಪೀರ ವಾಲೀಕಾರ ಅವರು ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೆ ಬೇಟಿ ನೀಡಿ ಯುವ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ ಅದಕ್ಕೆ ಅವರಿಗೆ ಸಹಕಾರಿ ನೀಡಿ ಎಂದರು.

- Advertisement -

ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ, ಸಿದ್ದಣ್ಣ  ಪೂಜಾರಿ, ಗುಂಡಪ್ಪ  ಮಲಘಾಣ, ಗುರಸಿದ್ದಪ್ಪ ಬಿರಾದಾರ, ಶಿವು  ಬದರಿ, ಅಣ್ಣಪ್ಪಾ  ಕಡ್ಲಗೊಂಡ, ಸಾಹೇಬಪಟೇಲ ಅವಟಿ, ರಮೇಶ ಪಾರಗೊಂಡ, ಹಾಸಿಮಸಾಬ ಅವಟಿ, ಅಡಿವೆಪ್ಪ ಪರಗೊಂಡ, ರಾಜಹಮ್ಮದ ಮುಲ್ಲಾ, ಸಿದಗೊಂಡಪ್ಪಾ  ಕಡ್ಲಗೊಂಡ, ಮಲ್ಲನಗೌಡ  ಬಿರಾದಾರ, ಮಹಾದೇವ  ಪರಗೊಂಡ, ಭೀಮಣ್ಣಾ  ಶಿವೂರ. ಶಂಕರಪ್ಪಾ  ಪರಗೊಂಡ, ಮಲ್ಲಿಕಾರ್ಜುನ ಕಡ್ಲಗೊಂಡ ಸೇರಿದಂತೆ ಮುಂತಾದವರು  ಉಪಸ್ಥಿತರಿದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group