spot_img
spot_img

‘ಪ್ರಶ್ನಾರ್ಥಕ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಉತ್ತರ ಕರ್ನಾಟಕದ ನಟರು ಎತ್ತರಕ್ಕೆ ಬೆಳೆಯಲಿ: ಶಾಸಕ ರಮೇಶ ಭೂಸನೂರ

Must Read

spot_img

ಸಿಂದಗಿ: ಉತ್ತರ ಕರ್ನಾಟಕದ ಯುವಕರು ಸಿಂದಗಿಯ ಪ್ರತಿಭೆಗಳು ಹೊಸ ಚಿತ್ರ “ಪ್ರಶ್ನಾರ್ಥಕ” ಚಲನಚಿತ್ರದಲ್ಲಿ ನಟಿಸಿ ಚಿತ್ರರಂಗ ಭೂಮಿಗೆ ಮೊದಲ ಹೆಜ್ಜೆ ಇಡುತಿದ್ದಾರೆ. ಉತ್ತರ ಕರ್ನಾಟಕದ ಯುವ ನಟರು ಎತ್ತರಕ್ಕೆ ಬೆಳೆಯಲಿ ಎಂದು ನೂತನ ಶಾಸಕ ರಮೇಶ ಭೂಸನೂರ ಹೇಳಿದರು.

ಗುರುವಾರ ಶಾಸಕರ ಸ್ವ ನಿವಾಸದಲ್ಲಿ “ಪ್ರಶ್ನಾರ್ಥಕ” ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಗಳಿಸಿದ ಆಸ್ತಿ ಅಂತಸ್ತು ಬಂಗಾರ ಒಡವೆಗಳನ್ನು ಕಸಿದುಕೊಳ್ಳಬಹುದು ಆದರೆ ಕಲೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಮನುಷ್ಯ ತಾನು ಕಂಡಿದ್ದನ್ನು ಭಾವನೆಗಳಿಂದ ಕಲ್ಪನೆಗಳಿಂದ ಅಡಗಿಕೊಂಡಿರುವ ಕಲಾ ಪ್ರಜ್ಞೆಯನ್ನು ಹೊರಗೆ ತರುವುದೇ ನಿಜವಾದ ಕಲೆ. ಆ ಸಾಧನೆಗೆ ಮುಂದಾಗಿರುವ ನಿರ್ದೇಶಕರು ನಿರ‍್ಮಾಪಕರು ತಮ್ಮ ಸ್ವಂತ ದುಡ್ಡಿನಿಂದ ವಿಶೇಷವಾಗಿ ಉತ್ತರ ಕರ್ನಾಟಕದ ನಟರನ್ನು ಬೆಳಕಿಗೆ ತರುವ ಉದ್ದೇಶದಿಂದ ಕಷ್ಟಪಟ್ಟು ಚಿತ್ರ ಹೊರ ತಂದಿದ್ದಾರೆ ಸಾರ್ವಜನಿಕರು ಯುವ ಪ್ರತಿಭೆಗಳಿಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ನಂತರ ಈ ಚಿತ್ರದಲ್ಲಿ ನಟಿಸಿರುವ ಎಲ್ಲ ಪ್ರತಿಭೆಗಳಿಗೆ ಶಾಸಕ ಭೂಸನೂರ ವೈಯಕ್ತಿಕವಾಗಿ ಸನ್ಮಾನಿಸಿ ಗೌರವಿಸಿ ಹರಸಿ ಹಾರೈಸಿದರು.

ಈ ಸಂದರ್ಭದಲ್ಲಿ ಚಿತ್ರ ತಂಡದವರಾದ ಸಿಂದಗಿಯ ಯುವ ನಟ ವಿಶ್ವಪ್ರಕಾಶ ಟಿ. ಮಲಗೊಂಡ, ಯಂಗ್ ಟೈಗರ್ ರವಿ ಜಾಲವಾದಿ, ನಿರ್ದೇಶಕ ಸಿದ್ದು ಮಾಡಗಿ, ಆರ್ ಕೆ ಪ್ರೊಡಕ್ಷನ್ ಮಾಲೀಕರು ಹಾಗೂ ಛಾಯಾಗ್ರಾಹಕ ರವಿ ಕುಂಟೋಜಿ, ಸಹ ನಿರ್ದೇಶಕ ಅಮರೇಶ, ಹಾಸ್ಯ ಕಲಾವಿದ ವಿರೇಶ, ನೀನಾಸಂ ಯಶವಂತ್ ಕುಚಬಾಳ, ನಾಗರಾಜ್ ಸಂಗಮ, ಆಸಿಫ್ ಗುಂದಗಿ, ಮನೋಜ ಡೋಣುರ, ಸಾಹೇಬಗೌಡ ಪಾಸೋಡಿ, ಸಿದ್ದು ತಳ್ಳೋಳ್ಳಿ, ಶಿವು ಚೌರ, ಸಿಂದಗಿ ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ, ರವಿ ನಾಯ್ಕೋಡಿ, ಹೊನ್ನಪ್ಪಗೌಡ ಬಿರಾದಾರ ಸೊಮಜಾಳ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಪ್ರಶ್ನಾರ್ಥಕ ಚಿತ್ರ ತಂಡ:

ಮೊದಲ ಬಾರಿಗೆ ಚಿತ್ರದಲ್ಲಿ ಅಭಿನಯಿಸಿರುವ ರವಿ ಜಾಲವಾದಿ ಅವರ ಚೊಚ್ಚಲ ನಟಿಸಿರುವ ಹಾಗೂ ಸಿದ್ದು ಮಾಡಗಿ ಅವರ ನಿರ್ದೇಶನವಿರುವ ಈ ಚಿತ್ರಕ್ಕೆ ಮಹಾಂತೇಶ ತಳವಾರ ಛಾಯಾಗ್ರಹಣವಿದೆ.

ಆರ್ ಕೆ ಸ್ಟೂಡಿಯೋಸ್ ಹಾಗೂ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ಈ ಚಿತ್ರಕ್ಕೆ ಕಾಚಾಪುರ ಗೆಳೆಯರ ಬಳಗದವರ ಸಹಕಾರ ಇದೆ. ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಮಲಗೊಂಡ ಅವರದಿದೆ. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದಂತಹ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಖತ್ ವೈರಲ್ ಆಗಿದೆ.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!