- Advertisement -
ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಭೂ ಮಾಪನ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ 2ನೇ ಹಂತದ ಪೋಡಿ ಮುಕ್ತ ಅಭಿಯಾನ ಜರುಗಿತು.
ಈ ಸಂದರ್ಭದಲ್ಲಿ ಭೂ ಮಾಪನ ಇಲಾಖೆಯ ಅಧಿಕಾರಿ ಎಸ್ ಎಸ್ ಅಗಸಬಾಳ ಮಾತನಾಡಿ, ಸರಕಾರದಿಂದ ಪೋಡಿಮುಕ್ತ ಗ್ರಾಮವನ್ನಾಗಿಸಲು ನೇರವಾಗಿ ರೈತರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸಿ ಕೊಡಲಾಗುತ್ತಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ಶಿವಯೋಗಿ ಮೂಡಗಿ, ಗ್ರಾಮದ ಮುರಳಿ ಹೊಸಮನಿ, ಗೊಲ್ಲಾಳಪ್ಪ ಮಾಗಣಗೇರಿ, ಯಮನಪ್ಪ ಚೌದರಿ, ಎಸ್ ಜಿ ಚೌದರಿ, ಭಾಸ್ಕರ್ ನಾಲ್ಕಮಾನ, ಭೂ ಮಾಪನಕರ ಸಂಘದ ಅಧ್ಯಕ್ಷ ಬಿ ಜಿ ಪದ್ಮಾ, ಭೂ ಮಾಪನ ಇಲಾಖೆಯ ಎಸ್ ಎಂ ಬಳುoಡಗಿ, ಪೋಡಿ ಮುಕ್ತ ಅಭಿಯಾನದ ಭೂ ಮಾಪನಕರಾದ ಎಚ್ ಎಸ್ ರಾಠೋಡ್, ಎಚ್ ಎಸ್ ರೇವಣ್ಣನವರ, ಎಂ ಎಂ ಬಾವಿಮನಿ, ಶ್ರೀಕಾಂತ್ ಚವ್ಹಾಣ, ಲಕ್ಶ್ಮೀ ಪಾಟೀಲ, ರಾಜಶೇಖರ್ ಬಿರಾದಾರ, ಶಂಕರಲಿಂಗೇಗೌಡ, ಮಹ್ಮದಆಜೂರುದ್ದಿನ ಯಾಳಗಿ ಸೇರಿದಂತೆ ಅನೇಕರಿದ್ದರು.