ಮುನವಳ್ಳಿ: ಪಟ್ಟಣದ ವ್ಹಿ.ಪಿ.ಜೇವೂರ ಶ್ರವಣನ್ಯೂನತೆ ಮಕ್ಕಳ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ, ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ, ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ವಿಚಾರಧಾರೆಗಳು, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಅವರನ್ನು ಕೇವಲ ಜಯಂತಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಬೆಳಗಾವಿ ಜಿಲ್ಲಾ ಮಟ್ಟದ ವಿಕಲಚೇತನರ ಸಬಲೀಕರಣ ಇಲಾಖೆಯಿಂದ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಶಿವೂ ಕಾಟೆ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಧಾನ ಗುರುಗಳಾದ ಎನ್ ಹರ್ಷಿತಾ, ಬಾಬು ಜಗಜೀವನರಾಂ ಅವರ ಜೀವನ ಕುರಿತು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವೂ ಕಾಟೆ ವಿಕಲಚೇತನ ಮಕ್ಕಳ ಸೇವೆಗೆ ಕಾರಣ ಈ ಶಾಲೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ದಿಲೀಪ್ ಜಂಬಗಿಯವರು ಕಾರಣ ಅವರು ನಮಗೆ ನೀಡಿದ ಪ್ರೋತ್ಸಾಹ ಮರೆಯಲಾಗದು. ಇಂತಹ ಪ್ರಶಸ್ತಿ ಗಳು ನಮ್ಮ ಮೇಲೆ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಲಾಲಸಾಬ ವಟ್ನಾಳ ಅವರು ಶಿವೂ ಕಾಟೆ ಯವರ ಸೇವೆ ಕುರಿತು ಮಾತನಾಡಿ ವಿಕಲಚೇತನ ಮಕ್ಕಳ ಸೇವೆ ನಿಜಕ್ಕೂ ಸ್ಮರಣಾರ್ಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಅತ್ತಾರ, ಸುಜಾತಾ ಶಿವೂ ಕಾಟೆ, ಮಂಜುಳಾ ಎಂ ಗೋಪಶೆಟ್ಟಿ, ಮಂಜುನಾಥ ಮಾವಿನ ಕಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸುಜಾತಾ ಬಡ್ಡಿ ಸ್ವಾಗತಿಸಿದರು. ಮಂಜುನಾಥ ಮಾವಿನ ಕಟ್ಟಿ ನಿರೂಪಿಸಿದರು. ಮಂಜುಳಾ ಎಂ ಗೋಪಶೆಟ್ಟಿ ವಂದಿಸಿದರು.