spot_img
spot_img

ಸ್ವಾಮಿ ವಿವೇಕಾನಂದರು, ನೇತಾಜಿ ಅವರ ವಿಚಾರ ಅಳವಡಿಸಿಕೊಳ್ಳಿ – ಸ್ವಾಮೀಜಿ ಕರೆ

Must Read

spot_img
- Advertisement -

ನಿಂಗಾಪುರ ಶ್ರೀ ಸಾಯಿ ನಿತ್ಯೋತ್ಸವ ಲೋಕಾಸೇವಾ ಟ್ರಸ್ಟ್ ವತಿಯಿಂದ ತಪಸಿ ವಾಜಪೇಯಿ ವಸತಿ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಸಂಪನ್ನ

ಮೂಡಲಗಿ : ತಪಸಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿಯುತ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಜಯಂತ್ಯುತ್ಸ ವವನ್ನು ಶ್ರೀ ರಾಮಕೃಷ್ಣ ಮಿಷನ್ ಬೆಳಗಾವಿ ಸ್ವಾಮೀಜಿ ಪರಮ ಪೂಜ್ಯ ಮೋಕ್ಷಾತ್ಮಾನಂದ ಜೀ ಮಹಾರಾಜ್ ಅವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಶುಕ್ರವಾರ ಶ್ರೀ ಸಾಯಿನಿತ್ಯೋತ್ಸವ ಲೋಕಸೇವಾ ಟ್ರಸ್ಟ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿಯುತ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪರಮಪೂಜ್ಯ ಸ್ವಾಮೀಜಿಯವರು ವಿದ್ಯಾರ್ಥಿಗಳನ್ನು ಕುರಿತು ಗುರಿ ಸಾಧಿಸಲು ಆಲೋಚನೆ, ಸಂಕಲ್ಪ,ಗಮನ ಇವುಗಳ ಪಾತ್ರ ತುಂಬಾ ಮುಖ್ಯ ಎಂದರು.

- Advertisement -

ಮಹಾವಿದ್ಯಾಲಯದ ಪ್ರಾಂಶುಪಾಲ ಗೋವಿಂದ ಅವರು ತಮ್ಮ ಪ್ರಾಸ್ಥಾವಿಕ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಆರ್.ಆರ್‌.ನಾಡಗೌಡರ ಅವರು ಶ್ರೀಸಾಯಿನಿತ್ಯೋತ್ಸವ ಲೋಕಸೇವಾ ಟ್ರಸ್ಟ್‌ನ ಉದ್ದೇಶಗಳಾದ ಸಾಯಿಮಂದಿರ, ಗೋಶಾಲೆ, ಸಾವಯವ ಕೃಷಿ, ಔಷಧಿ ಸಸ್ಯಗಳನ್ನು ಉಳಿಸಿ ಬೆಳೆಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರ ಸ್ಥಾಪನೆ ಕುರಿತು ಮಾತನಾಡಿ ಜೀವನದಲ್ಲಿ ಪ್ರಾಮಾಣಿಕತೆ ತುಂಬಾ ಮುಖ್ಯ ಎಂದರು.

ಉಪಾಧ್ಯಕ್ಷ ದುಂಡಪ್ಪ ಬೀರಗೌಡ್ರ ಕಾರ್ಯದರ್ಶಿ ಸಚಿನ್ ಬಾಗೋಜಿ ಖಜಾಂಚಿ ವಿನಾಯಕ ಪರವಿನಾಯ್ಕರ ಮತ್ತು ಟ್ರಸ್ಟ್ ಸದಸ್ಯರುಗಳಾದ ನಾಮದೇವ ಉಮರಾಣಿ, ಭೀಮಶಿ ಹುಲಕುಂದ, ಈರಣ್ಣ ಬೆಳವಿ, ರಮೇಶ ಬಿಎಲ್, ಸಲಹಾ ಮಂಡಳಿ ಸದಸ್ಯರಾದ ಯಲ್ಲಪ್ಪ ಮಿಚ್ಯಾಗೋಳ್, ಮಹೇಶ್ ಅಂತರಗಟ್ಟಿ ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿಯುತ ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗದವರು ಮತ್ತು ತಾಲೂಕಾ ಪಂಚಾಯತಿಯ ವ್ಯವಸ್ಥಾಪಕ ಸಂಜು ಹುದ್ದಾರ ಅವರು ಉಪಸ್ಥಿತರಿದ್ದರು.
ಭೀಮಶಿ ಹುಲಕುಂದ ನಿರೂಪಿಸಿದರು ದುಂಡಪ್ಪ ಬೀರಗೌಡರ ಸ್ವಾಗತ ಮತ್ತು ಪರಿಚಯಿಸಿದರು.ಈರಣ್ಣ ಬೆಳವಿ ವಂದಿಸಿದರು.

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group