ಶಿವಮೊಗ್ಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0
439

ಶಿವಮೊಗ್ಗ– ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ಸರ್ಜಿ ಫೌಂಡೇಶನ್ ವತಿಯಿಂದ ಇದೇ ದಿ.೨೬ ರಂದು ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ವೆಂಕಟೇಶ ನಗರದ ಅನಕೃ ರಸ್ತೆಯ ೩ ನೇ ತಿರುವಿನಲ್ಲಿರುವ ಬಸವಕೇಂದ್ರದಲ್ಲಿ ಚಿಂತನ ಕಾರ್ತಿಕ – ೨೦೨೨ ಸಮಾರೋಪ, ಗಣಪರ್ವ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಜನರಲ್ ಫಿಜಿಶಿಯನ್, ಸ್ತ್ರೀ ರೋಗ ತಜ್ಞರು, ಮೂಳೆ ರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಮಧುಮೇಹ ತಜ್ಞರು ತಪಾಸನೆ ಮಾಡುವರು.

ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ವಹಿಸುವರು.

ನೇತೃತ್ವವನ್ನು ಸರ್ಜಿ ಸಮೂಹ ಆಸ್ಪತ್ರೆಗಳ ಚೇರ್ಮನ್ ಡಾ.ಧನಂಜಯ ಸರ್ಜಿ ವಹಿಸುವರು.

ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ- ೮೮೬೭೯೧೯೮೫೯ ಹಾಗೂ ೯೯೬೪೧೭೬೩೦೨ ಸಂಪರ್ಕಿಸಲು ಕೋರಲಾಗಿದೆ.