ನೂತನ ಬಿ ಇ ಓ ದಾಸಪ್ಪನವರನವರಿಗೆ ಸ್ವಾಗತ

Must Read

ಬೆಳಗಾವಿ– ತಾಲೂಕಿನ ಗ್ರಾಮೀಣ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿರುವ ಎಸ್ ಪಿ ದಾಸಪ್ಪನವರ ಅವರನ್ನು ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.

ದಾಸಪ್ಪ ನವರ ಅವರು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವಿವಿಧ ಹಂತದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ, ಹಿರಿಯ ಅಧಿಕಾರಿಗಳು, ಸರಳ ಸಜ್ಜನಿಕೆಯ ಹೆಸರಾದ, ಜೊತೆಗೆ ಶಿಕ್ಷಕರ ಪ್ರಿಯರಾದ ಎಸ್ ಪಿ ದಾಸಪ್ಪನವರ ರನ್ನು ಬೆಳಗಾವಿ ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಪರವಾಗಿ ಸನ್ಮಾನ ಮಾಡಿ ಅಭಿನಂದನೆಗಳನ್ನು ಸಲ್ಲಿಸಿ ಸ್ವಾಗತಿಸಲಾಯಿತು.

ಜೊತೆಗೆ ಇಲ್ಲಿಯವರೆಗೆ ದಕ್ಷತೆಯಿಂದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಿರುವ ಡಾ ಎಮ್ ಎಸ್ ಮೇದಾರ ರವರನ್ನೂ ಅಭಿನಂದಿಸಲಾಯಿತು.

ತಾಲೂಕು ಸಂಘದ ಅಧ್ಯಕ್ಷರಾದ ಬಸವರಾಜ ಸುಣಗಾರ ಹಾಗೂ ನಗರ ಘಟಕದ ಅಧ್ಯಕ್ಷರಾದ ಅರ್ಜುನ ಡಿ ಸಾಗರ ರವರ ಮುಂದಾಳತ್ವದಲ್ಲಿ ಸ್ವಾಗತಿಸಲಾಯಿತು.

ಪದಾಧಿಕಾರಿಗಳಾದ ಅಶೋಕ ಕೋಲಕಾರ ಶ್ರೀಮತಿ ಎಲ್ ಬಿ ಲೋಬೊ, ಶ್ರೀಮತಿಕಾಂಬಳೆ, ನದಾಫ್ ರವರು ಸೇರಿದಂತೆ ಪದಾಧಿಕಾರಿಗಳು,ಇತರೆ ಸಂಘ ಸಂಸ್ಥೆಯ ಪದಾಧಿಕಾರಿಗಳಾದ ಎಸ್ ಡಿ ಗಂಗಣ್ಣವರ, ಆಸೀಫ್ ಅತ್ತಾರ,ಆಯ್ ಆರ್ ಮೆಟ್ಯಾಲ ಮಠ, ಐ ಇ ಆರ್ ಟಿ ಶಬ್ಬೀರ್ ಖುದ್ದನವರ,ಶಿಕ್ಷಣ ಸಂಯೋಜಕ ರಾಜೇಂದ್ರ ಕುಮಾರ್ ಚಲವಾದಿ, ಎಸ್ ಆರ್ ದಂಡಿನ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group