spot_img
spot_img

ಪತ್ರಿಕೆ ಏಜೆಂಟ್‌ನಿಂದ ಸಂಪಾದಕನಾದ ಪೇಪರ್‌ ಬಾಯ್‌ನ ರೋಚಕ ಕಥೆ

Must Read

- Advertisement -

50 ಪೈಸೆಗೆ ಮನೆ ಮನೆಗೆ ಪೇಪರ್ ಹಾಕಿ,ಬದುಕು ಕಟ್ಟಿಕೊಂಡು, ಓದುಗರ ನಾಡಿಮಿಡಿತ ಅರಿತ ಹುಡುಗ ಪತ್ರಿಕೆ ಸಂಸ್ಥೆಯನ್ನ ಹುಟ್ಟುಹಾಕಿ ಅದರ ಮೂಲಕ ಓದುಗರಿಗೆ ಉಚಿತ ಜ್ಞಾನ ಉಣಬಡಿಸುತ್ತಿರುವ ಸಾಧಕನ ರೋಚಕ ಕಥೆ.

ಎಲ್ಲಾ ಅನುಕೂಲಗಳು ಇದ್ದರೂ ಎಷ್ಟೊ ಯುವಕರು ಶಿಕ್ಷಣದಲ್ಲಿ ಆಸಕ್ತಿ ತೋರಿದಿಲ್ಲ, ಶಿಕ್ಷಣ ಪಡೆದರು ಸಿಕ್ಕ ಕೆಲಸ/ಉದ್ಯೋಗ ಮಾಡಬೇಕು ಎನ್ನುವತ್ತ ಒಲವು ತೋರಿಸುವುದಿಲ್ಲ, ಸರಕಾರಿ ಹುದ್ದೆ ಬಂದಿದ್ದರೆ ಮಾಡುವುದು, 5000,10000 ರೂಪಾಯಿಗೆ ನಾನು ಯಾಕೆ ಕೆಲಸ ಮಾಡಬೇಕು? ನಾನು ಡಿಗ್ರಿ /ಪಿಜಿ ಮಾಡಿದ ಹುಡುಗ ನನಗೆ ಹೊಂದಿಕೊಳ್ಳುವ ನೌಕರಿ ಸಿಗಬೇಕು ಅಂದುಕೊಂಡೆ ಇತ್ತ ಕಡೆ ನೌಕರಿಯು ಇಲ್ಲ, ಈ ಕಡೆ ಕೃಷಿಯಲ್ಲಿಯೂ ಕುಟುಂಬಕ್ಕೆ ಸಹಕರಿಸದ ಯುವಕರು ತಮ್ಮ ಸಮಯ ವ್ಯರ್ಥ ಮಾಡಿಕೊಂಡು ಜೀವನ ನಡೆಸುತ್ತಿರುವುದು ದುಃಖದ ಸಂಗತಿ, ಯುವಜನತೆ ತಮ್ಮನ್ನು ತಾವು ಒಂದಿಲ್ಲ ಒಂದು ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು, ಆರ್ಥಿಕವಾಗಿಯೂ ಸಮರ್ಥರಾದಾಗ ತಾನೆ ಸಮಾಜದಲ್ಲಿ ಒಳ್ಳೆಯ ಜೀವನ ನಡೆಸಲು ಸಾಧ್ಯ.

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಯ ನಂತರ ಅನುದಾನಿತ ವಿಜಯನಗರ ಕಾಲೇಜಿನಲ್ಲಿ 1996 ರಲ್ಲಿ ಬಿಎ ಡಿಗ್ರಿ ಪಡೆದು, ಬೇಸಿಕ್ ಕಂಪ್ಯೂಟರ್ ಕಲಿತ ಯುವಕ, ಆರ್ಥಿಕ ಸಮಸ್ಯೆ ಇಂದ ಮುಂದೆ ಓದದೆ, ಕೆಲಸ ಮಾಡುವ ಅನಿವಾರ್ಯತೆ ಎದುರಾಯಿತು.ಕೆಲಸ ಯಾವುದಾದರು ಸರಿ ದುಡುಕೊಂಡು ತಿನ್ನೋಕ್ಕೆ ಎನ್ನುವ ವಿಶಾಲ ಮನೋಭಾವನೆ ಇರುವ ಯುವಕನಿಗೆ ಸಿಕ್ಕಿದ್ದು ತಿಂಗಳಿಗೆ 800 ರೂಪಾಯಿ ಸಂಬಳ ಇರುವ, ಊರ ಹೊರಗಡೆ ಜನವಸತಿ ಇರದ ಸ್ಥಳದಲ್ಲಿ ಕಟ್ಟಡ ಕನ್ಸ್ಟ್ರಕ್ಷನ್ ಮೆಟೀರಿಯಲ್ ಕಾಯುವ ರಾತ್ರಿ ಪಾಳಿಯ ಕೆಲಸ.
ಹೀಗೆ ಕೆಲವು ದಿನ ಕೋಳಿಫಾರಂನಲ್ಲಿ ಕೆಲಸ, ಕೆಲವು ದಿನ ಬೇಕರಿಯಲ್ಲಿ, ಇನ್ನೂ ಕೆಲವು ದಿನ ಗಣಿಗಾರಿಕೆಯಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿರುವಾಗ, ವಿಜಯ ಸಂಕೇಶ್ವರ್ ನೇತೃತ್ವದ VRL ನಲ್ಲಿ ಟಿಕೆಟ್ ಬುಕ್ಕಿಂಗ್‌ ಏಜೆನ್ಸಿಯಲ್ಲಿ ಕೆಲಸ ಸಿಕ್ಕಿತು. 2000 ರಲ್ಲಿ ವಿಜಯಕರ್ನಾಟಕ ಪೇಪರ್ ಆರಂಭವಾದಾಗ ಪೇಪರ್ ಹಂಚಿಕೆ ಮಾಡುವ ಕೆಲಸದಲ್ಲಿ ತೊಡಗಿದ್ದಾಗ, ಈತನ ಪರಿಶ್ರಮಕ್ಕೆ ಮೆಚ್ಚಿ ವಿಆರ್‌ಎಲ್‌ ಮ್ಯಾನೇಜರ್‌ ಶ್ಯಾನವಾಡ್ ಅವರ ರೆಫರೆನ್ಸ್‌ ಮೇರೆಗೆ ಎಜನ್ಸಿಯೂ ಕೊಡಲು ಒಪ್ಪಿಗೆ ದೊರೆಯಿತು. ಆದರೆ ಅಷ್ಟು ಸುಲಭದ ಕೆಲಸ ಇರಲ್ಲಿಲ್ಲ 10,000 ರೂಪಾಯಿ ಡೆಪಾಸಿಟ್ ಕಟ್ಟಿದರೆ ಮಾತ್ರ ಏಜನ್ಸಿ ಸಿಗುವುದು, ಆ ಸಮಯದಲ್ಲಿ ಅಷ್ಟು ಹಣ ಜೋಡಿಸುವುದು ಸಾಮಾನ್ಯ ವಿಷಯ ಇರಲಿಲ್ಲ. ಆ ಸಂದರ್ಭದಲ್ಲಿ ತನ್ನ ಆತ್ಮೀಯ ಗೆಳೆಯ ಆನಂದ ಹತ್ತಿರ ಹಣ ಕೇಳಿದಾಗ ಹಣಕ್ಕೆ ಏನು ಗ್ಯಾರಂಟಿ ಎಂದಾಗ,ಆನಂದ ಬಿ ಬಸವರಾಜ್ ಎನ್ನುವ ಏಜನ್ಸಿ ನಮ್ಮಿಬರ ಹೆಸರಲ್ಲಿ ಪ್ರಾರಂಭಿಸುವೆ ಎಂದಾಗ ಸಾಕಾರ ಸಿಕ್ಕಿತ್ತಾದರೂ, ವಿಜಯ ಕರ್ನಾಟಕ ಜನರಲ್‌ ಮ್ಯಾನೇಜರ್‌ ಅವರು ಮಾರುಕಟ್ಟೆಯಲ್ಲಿ ಈಗಿರುವ ಓದಗರನ್ನು ಬಿಟ್ಟು ಪ್ರತ್ಯೇಕ ಓದುಗರನ್ನು ಸೃಷ್ಟಿಸಿಕೊಳ್ಳಬೇಕು, ಈಗಿರುವ ಪತ್ರಿಕೆಯಲ್ಲಿ ಒಂದು ಪತ್ರಿಕೆ ಕಡಿಮೆಯಾದರೂ ಪತ್ರಿಕೆ ಏಜೆನ್ಸಿಯನ್ನು ಸ್ಥಗಿತಗೊಳಿಸಲಾಗುವುದು ಎಂಬ ಷರತ್ತು ವಿಧಿಸಿದರು. ಆ ಕ್ಷಣದಲ್ಲಿ ವಿಚಲಿತನಾಗದೇ, ಷರತ್ತು ಒಪ್ಪಿಕೊಂಡ ಬಳಿಕವಷ್ಟೇ ಯುವಕನಿಗೆ ಪತ್ರಿಕೆ ಏಜೆನ್ಸಿ ನೀಡಲಾಯಿತು. ಆರಂಭದಲ್ಲಿ 100 ಪತ್ರಿಕೆಯಿಂದ ಆರಂಭಿಸಿದ ಯುವಕ ಪ್ರಸಾರ ಸಂಖ್ಯೆ ಹೆಚ್ಚಿಸುವಲ್ಲಿ ಪಟ್ಟ ಅವಿರತಶ್ರಮದಿಂದಾಗಿ ಹಿಂದೆ ನೋಡಲೇ ಇಲ್ಲ. ನಂತರ ಉಷಾಕಿರಣ, ವಿಜಯವಾಣಿ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ವಿಶ್ವವಾಣಿ ಪತ್ರಿಕೆಗಳ ವಿತರಕರಾದರು. ಪತ್ರಿಕೆಯನ್ನೆ ಉಸಿರಾಗಿಸಿಕೊಂಡ ಇವರು ಅದರೊಳಗಿನ ಜಾಹೀರಾತು ಡಿಸೈನಿಂಗ್, ಫೋಟೋಗ್ರಫಿ, ವರದಿಗಾರಿಕೆಯಲ್ಲಿ ತೊಡಗಿಸಿಕೊಂಡರು. ಪದವಿ ನಂತರ ಸ್ಥಗಿತಗೊಂಡಿದ್ದ ಓದನ್ನು 12 ವರ್ಷಗಳ ನಂತರ ಪುನರಾರಂಭಿಸಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ., ಪತ್ರಿಕೋದ್ಯಮ, ಪ್ರವಾಸೋದ್ಯಮ ಮತ್ತು ಪುರಾತತ್ವ ಡಿಪ್ಲೋಮ ಕೋರ್ಸ್‌ ಪೂರ್ಣಗೊಳಿಸಿ ಓದಬೇಕೆಂದಿದ್ದ ಪದವಿಯನ್ನು ತಡವಾಗಿಯಾದರೂ ಪಡೆದರು.
ಹೊಸಪೇಟೆಯ ನಾಲ್ಕು ದಶಕಗಳ ಸ್ಥಳೀಯ ಪತ್ರಿಕೆ ಹೊಸಪೇಟೆ ಟೈಮ್ಸ್‌ನ ಸಂಪಾದಕನಾಗಿ ಎರಡು ವರ್ಷ ಸಂಪೂರ್ಣವಾಗಿ ಯಶಸ್ವಿ ನಿರ್ವಹಣೆ ನಂತರ, ಇವರ ಸಾರಥ್ಯದಲ್ಲಿ ಹಂಪಿ ಟೈಮ್ಸ್ ದಿನಪತ್ರಿಕೆ ಕಳೆದ 21 ಜೂನ್ 2023 ರಲ್ಲಿ ಲೋಕಾರ್ಪಣಗೊಂಡಿತು. ಆ ಸಂದರ್ಭದಲ್ಲಿ ಪತ್ರಿಕೆ ಒಡೆತನ ನಿಭಾಯಿಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ, ಪತ್ರಿಕಾರಂಗದ ಸ್ಥಿತಿಗತಿಗಳು ಸರಿ ಇಲ್ಲ, ಇದರಲ್ಲಿ ಕೈ ಹಾಕಬೇಡ ಎಂದು ಅನೇಕರುಸಲಹೆ ನೀಡಿದರು, ಕೆಲಸಕ್ಕೆ ಕೆಲಸವೆ ಪ್ರೋತ್ಸಾಹ, ಇಲ್ಲಿ ಟಿಕೆಗಳು ಸಲ್ಲದು, ಆತ್ಮವಿಶ್ವಾಸ, ಛಲ, ನಂಬಿಕೆ ಇದೆ ಎಂದು ದಿಟ್ಟ ಹೆಜ್ಜೆ ಹಾಕಿದಾಗ ಹಿತೈಷಿಗಳಾದ  ರವಿಶಂಕರ್, ಡಿ. ವೆಂಕಟೇಶ್, ಎಂ.ರಾಜಶೇಖರ, ಸಾಲಿ ಬಸವರಾಜ, ಬಿ.ಎಂ.ಸೋಮಶೇಖರ, ಎಚ್.ವಿ.ಶರಣುಸ್ವಾಮಿ ಪ್ರತಿಫಲಾಪೇಕ್ಷೆ ಇಲ್ಲದೆ ನೀಡಿದ ಆರ್ಥಿಕ ನೆರವು ಸ್ಮರಣೆ ಮಾಡುತ್ತಾರೆ. ಪತ್ರಿಕೆ ಲೋಕಾರ್ಪಣೆಯಂದೆ ಹೊರ ತಂದ QR ಕೋಡ್ ನೊಂದಿಗೆ ಎಲ್ಲಾ ಇಲಾಖೆಗಳ ಮಾಹಿತಿ ದೊರೆಯುವವಂತೆ ವಿಶೇಷಾಂಕ ಬಿಡುಗಡೆ ಮಾಡಿದ್ದೂ ವಿಶೇಷ. ಆರಂಭದಲ್ಲಿ ದೊರೆತ ಆರ್ಥಿಕ ನೆರವು ವಿಶೇಷಾಂಕಕ್ಕೆ ಖಾಲಿಯಾಯಿತು. ಆದರೂ ಮಾರುಕಟ್ಟೆಯ ಅನುಭವದೊಂದಿಗೆ ಇವರ ಪತ್ರಿಕೆ ಕಾರ್ಯ ಮುನ್ನಡೆಸುತ್ತಿರುವುದು ಶ್ಲಾಘನೀಯ.

- Advertisement -

ಆಶ್ಚರ್ಯ ಎಂದರೆ ವಿಶ್ವದ ವಿವಿಧೆಡೆ ಇರುವ ಸುಮಾರು 70,000ಕ್ಕೂ ಅಧಿಕ ಕನ್ನಡ ಓದುಗರನ್ನು ಒಳಗೊಂಡ ಹಂಪಿ ಟೈಮ್ಸ್ 21 ಜೂನ್ 2024 ರಂದು ತನ್ನ ಮೊದಲ ವರ್ಷದ ವಾರ್ಷಿಕೋತ್ಸವದ ಸಂಭ್ರಮ. ವಿಶೇಷ ಎಂದರೆ ಇಲ್ಲಿ ಹೊರದೇಶ ಓದುಗರು ಕೂಡ ಪ್ರಪಂಚದ ಮೂಲೆ ಮೂಲೆ ಗಳಿಂದ ತಮ್ಮಅನಿಸಿ ಅಭಿಪ್ರಾಯ ತಿಳಿಸುತ್ತಾರೆ. ಪ್ರತಿ ಕ್ಷೇತ್ರದಲ್ಲಿಯೂ ಅನುಭವ ಹೊಂದಿದವರಿಗೆ ಮಾತ್ರ ಅವಕಾಶ ಕೂಡುವ ಈ ಸಮಯದಲ್ಲಿ ಇವರ ಪತ್ರಿಕೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಒದಗಿಸಿದ್ದು ಸಾಹಸದ ಕೆಲಸವೇ ಅಲ್ಲವೆ. ಹೊಸ ಬರಹಗಾರರಿಗೆ ಅವಕಾಶ ಕಲ್ಪಿಸಿದ್ದು ಮೆಚ್ಚುವಂತಹದು. ಜ್ಞಾನಕ್ಕೆ, ಅರ್ಥಪೂರ್ಣ ಬರಹಕ್ಕೆ ಸದಾ ಬೆಂಬಲಿಸಿ ಪ್ರೋತ್ಸಾಹ ನೀಡುತ್ತಿರುವ.ಕನ್ನಡ ಓದುಗರ ಕೈಯಲ್ಲಿ ಹಂಪಿ ಟೈಮ್ಸ್, ಕನ್ನಡ ಬೆಳೆಸಿ ಉಳಿಸುವದು ನನ್ನ ಗುರಿ, ಎಲ್ಲರಿಗೂ ಜ್ಞಾನ ಉಣಬಡಿಸುವ ಮಹತ್ವಕಾಂಕ್ಷೆಯಿಂದ ಮನೆ ಮನೆಗೆ ಉಚಿತ ಪತ್ರಿಕೆ ವಿತರಿಸುತ್ತಿರುವರು. ಬಂದ ಜಾಹೀರಾತುಗಳಿಂದ ಖರ್ಚು ವೆಚ್ಚಗಳ ನಿರ್ವಹಣೆ ಮಾಡಿಕ್ಕೊಳುವರು. “ಜೋಳಿಗೆ ಹಿಡಿದು ಆದರೂ ಜ್ಞಾನ ತಲುಪಿಸಲು ಸಿದ್ದ,ಕೊಡುವುದನ್ನು ಕಲಿಯೋಣ, ಕೇಳುವುದು ಬೇಡ, ಕೊಡುವವನು ಭಗವಂತನಿದ್ದಾಎ ಎನ್ನುವ ಬಲವಾದ ನಂಬಿಕೆ ಬಸವರಾಜ್ ಬಸಾಪುರ ಹೊಂದಿದ್ದಾರೆ.

ವರ್ಷದುದ್ದಕ್ಕೂ ಬಸವರಾಜ್ ಬಸಾಪುರ, “ಒಂಟಿ ಸಲಗ” ದಂತೆ ಎಡಿಟಿಂಗ್, ಜಾಹೀರಾತು ಡಿಸೈನ್‌, ಪೇಜ್ ಸೆಟ್ಟಿಂಗ್ ಹೀಗೆ ಸಂಪೂರ್ಣ ಜವಾಬ್ದಾರಿಯನ್ನು ಬೇಸರಿಸಿಕೊಳ್ಳದೇ ಒಬ್ಬರೆ ನಿಭಾಯಿಸುತ್ತಿದ್ದಾರೆ. ಇವರ ಪತ್ರಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಬರಹಗಳು ಪ್ರಕಟವಾಗುತ್ತಿವೆ. ನನಗೆ ಪರಿಚಯ ಇಲ್ಲದಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಬರೆಯುತ್ತಿರುವ ನನ್ನ ಬರಹಕ್ಕೆ ಹಿರಿಯ ಪತ್ರಕತ್ರರಾದ ಶರಣು ಪಾ ಹಿರೇಮಠ ಇವರು ನನ್ನ ಬರಹಕ್ಕೆ ಪ್ರೋತ್ಸಾಹಿಸಿ, ಬರಹದ ಮೇಲೆ ನಂಬಿಕೆ ಇಟ್ಟು ಪ್ರೋತ್ಸಾಹಿಸಿ ಹಂಪಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಿಸಿ ನನ್ನ ಬರಹಕ್ಕೆ ಬೆಂಬಲಿಸುತ್ತಿದ್ದಾರೆ. ಶರಣು ಪಾ ಹಿರೇಮಠ ಸರ್ ಹಾಗೂ ಬಸವರಾಜ ಬಸಾಪುರ ಸರ್ ಇವರಿಗೆ ಚಿರಋಣಿಯಾಗಿದ್ದೇನೆ.
ಏಳು ಬೀಳುಗಳ ನಡುವೆ ಏಜನ್ಸಿಯಿಂದ ಹಂಪಿ ಟೈಮ್ಸ್ ಪತ್ರಿಕಾ ಸಂಸ್ಥೆಯ ಸಾರಥ್ಯವಹಿಸಿಕೊಂಡ ನಿಮಗೂ ನಿಮ್ಮ ಕುಟುಂಬಕ್ಕೂ ದೇವರ ಕೃಪೆ ಹೀಗೆಯೆ ಇರಲಿ ಎಂದು ಬಯಸುವ……

ಶ್ರೀಮತಿ ನಂದಿನಿ ಸುರೇಂದ್ರ ಸನಬಾಳ, ಶಿಕ್ಷಕಿ
ಪಾಳಾ, ಕಲಬುರಗಿ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group