ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

Must Read

ಲಯನ್ಸ್ ಕ್ಲಬ್ ಕ್ರಿಕೆಟ್; ಅಪ್ಪಣ್ಣ ಬಡಿಗೇರಗೆ ‘ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ’

ಮೂಡಲಗಿ: ಜಮಖಂಡಿಯ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜರುಗಿದ ಲಯನ್ಸ್ ಕ್ಲಬ್ ಪ್ರಾಂತೀಯ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಸದಸ್ಯ ಅಪ್ಪಣ್ಣ ಬಡಿಗೇರ ಬೆಸ್ಟ್...

ನೀರಾವರಿ ಸೌಲಭ್ಯ ಒದಗಿಸಿದ ಭಗೀರಥ ಎಮ್ ಬಿ ಪಾಟೀಲರು – ರಾಜಶೇಖರ ಕೂಚಬಾಳ

ಸಿಂದಗಿ: ಬರದ ನಾಡು ವಿಜಯಪುರದಲ್ಲಿ ಚಿಮ್ಮಲಗಿ ತುಬುಚಿ ಏತನೀರಾವರಿ ಯೋಜನೆಯಿಂದ ಸಂಪೂರ್ಣ ನೀರಾವರಿ ಮಾಡಿದ ಶ್ರೇಯಸ್ಸು ಮಾಜಿ ಸಚಿವ ಎಂ.ಬಿ.ಪಾಟೀಲರಿಗೆ ಸಲ್ಲುತ್ತದೆ ಆದರೆ ಸರಕಾರದ ಅಂಕಿ-ಅಂಶ...

75 ಅಡಿ ರಂಗೋಲಿ ಬಿಡಿಸಿದ ದೀಕ್ಷಾ ವಿದ್ಯಾರ್ಥಿಗಳು

ಮೂಡಲಗಿ: ದಾಲ್ಮಿಯಾ ಭಾರತ್ ಫೌಂಡೇಶನದ ಮೂಡಲಗಿ ತಾಲೂಕಿನ ಯಾದವಾಡದ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಇನ್ಸಿಟ್ಯೂಟ್ ಆಫ್ ನಾಲೆಜ್ ಅಂಡ್ ಸ್ಕಿಲ್ ಹಾರ್ನೆಸಿಂಗ್(ದೀಕ್ಷಾ) ವಿದ್ಯಾರ್ಥಿಗಳು ಬೆಳಗಾವಿಯ ಎಸ್.ಜಿ.ಬಿ.ಐ.ಟಿ...

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294 ಕೋಟಿ ರೂ. ಅನುದಾನ ಬಳಕೆ ಆಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಹೇಳಿದರು.

ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕರ್ನಾಟಕದಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಕುರಿತು ಸಂಸದ ಈರಣ್ಣ ಕಡಾಡಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಬೆಳಗಾವಿ, ಬೆಂಗಳೂರು, ದಾವಣಗೆರೆ, ಹುಬ್ಬಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಸೇರಿದಂತೆ 7 ನಗರಗಳಲ್ಲಿ ಸ್ಮಾಟ್ ಸಿಟಿ ಮಿಷನ್ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಇದುವರೆಗೆ ರಾಜ್ಯಕ್ಕೆ ಒಟ್ಟು 2213 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ 1682.48 ಕೋಟಿ ರೂ ಅನುದಾನದ ಬಳಕೆ ಆಗಿದೆ ಎಂದರು.

ಕೇಂದ್ರ ಸರ್ಕಾರ ಅಮೃತ ಯೋಜನೆಯಡಿ ರಾಜ್ಯಕ್ಕೆ 1660.98 ಕೋಟಿ ರೂ ಬಿಡುಗಡೆ ಮಾಡಿದ್ದು, ಇದರಲ್ಲಿ 1540.79 ಕೋಟಿ ರೂ ಅನುದಾನದ ಬಳಕೆ ಆಗಿದೆ. ಬೆಳಗಾವಿ ಜಿಲ್ಲೆಗೆ 184.28 ಕೋಟಿ ರೂ ಯೋಜನಾ ವೆಚ್ಚವನ್ನು ಅಂದಾಜಿಸಲಾಗಿದೆ ಎಂದ ಸಚಿವರು ಸ್ವಚ್ಚ ಭಾರತ ಮಿಷನ್ (ನಗರ) ಯೋಜನೆಯಡಿ ರಾಜ್ಯಕ್ಕೆ 820.96 ಕೋಟಿ ರೂ ಅಂದಾಜಿಸಲಾಗಿದ್ದು, ಮೊದಲ ಹಂತದ ಅನುದಾನದಲ್ಲಿ 199.01 ಕೋಟಿ ರೂ ಬಿಡುಗಡೆಯಾಗಿದೆ ಎಂದರು. ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆಗೆ ರಾಜ್ಯಕ್ಕೆ ಕಳೆದ ಮೂರು ವರ್ಷದಲ್ಲಿ 5246.22 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ 4685.61 ಕೋಟಿ. ರೂ ಅನುದಾನದ ಬಳಕೆ ಆಗಿದೆ. ಬೆಂಗಳೂರು ಮೆಟ್ರೋ ಯೋಜನೆಗೆ ಪ್ರಸಕ್ತ 2021-22 ಸಾಲಿಗೆ 2982 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ 2328 ಕೋಟಿ ರೂ ಅನುದಾನದ ಬಳಕೆ ಆಗಿದೆ ಎಂದರು.

- Advertisement -
- Advertisement -

Latest News

ಲಯನ್ಸ್ ಕ್ಲಬ್ ಕ್ರಿಕೆಟ್; ಅಪ್ಪಣ್ಣ ಬಡಿಗೇರಗೆ ‘ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ’

ಮೂಡಲಗಿ: ಜಮಖಂಡಿಯ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜರುಗಿದ ಲಯನ್ಸ್ ಕ್ಲಬ್ ಪ್ರಾಂತೀಯ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಸದಸ್ಯ ಅಪ್ಪಣ್ಣ ಬಡಿಗೇರ ಬೆಸ್ಟ್...
- Advertisement -

More Articles Like This

- Advertisement -
close
error: Content is protected !!