spot_img
spot_img

ಬೆಳ್ಳುಳ್ಳಿ; ಅಪಾರ ಗುಣಗಳ ಪದಾರ್ಥ

Must Read

- Advertisement -

ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ.

  1. ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ.
  2. ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ.
  3. ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು.
  4. ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು ಮತ್ತು ಲೇಪಿಸುವುದರಿಂದ ಗಾಯ ಗುಣಪಡಿಸಬಹುದು.
  5. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಜ್ವರ ಗುಣವಾಗುವುದು.
  6. ಬೆಳ್ಳುಳ್ಳಿ ರಸವನ್ನು ನಿಂಬೆ ರಸದೊಂದಿಗೆ ಬೆರೆಸಿ ಸ್ವಲ್ಪ ಬೆಲ್ಲ ಹಾಕಿ ಶರಭತ್ ಮಾಡಿ ಎರಡರಿಂದ ಮೂರು ಗಂಟೆಗೆ ಒಮ್ಮೆ ಕೊಡುತ್ತಿದ್ದರೆ ಮಕ್ಕಳ ಬಿಡದೆ ಇರುವ ಕೆಮ್ಮು ಗುಣವಾಗುತ್ತದೆ.
  7. ಬೆಳ್ಳುಳ್ಳಿ ಹೊಳಪನ್ನು ಸ್ವಲ್ಪ ಬೆಲ್ಲದೊಂದಿಗೆ ಅರೆದು ಗಂಟಲಿಗೆ ಹಚ್ಚುವುದರಿಂದ ಗಂಟಲುಗಳಲೆ ಗುಣವಾಗುತ್ತದೆ.
  8. ಬೆಳ್ಳುಳ್ಳಿಯ ರಸಕ್ಕೆ ಸಮ ಪ್ರಮಾಣದಲ್ಲಿ ಜೇನುತುಪ್ಪ ಸೇರಿಸಿ ಹಚ್ಚುವುದರಿಂದ ಅರೆದಲೆ ಸೂಲೆ ಗುಣವಾಗುತ್ತದೆ.
  9. ಬೆಳ್ಳುಳ್ಳಿಯ ರಸವನ್ನು ಬೆಚ್ಚಗೆ ಮಾಡಿ ಎರಡರಿಂದ ಮೂರು ಹನಿ ಕಿವಿಗೆ ಬಿಡುವುದರಿಂದ ಕಿವಿ ನೋವು ಗುಣವಾಗುತ್ತದೆ ಮತ್ತು ಕಿವಿಯಲ್ಲಿ ಯಾವುದೇ ಹುಳು ಸೇರಿಕೊಂಡರು ಹೊರಗೆ ಬರುತ್ತದೆ.
  10. ಸ್ವಲ್ಪ ತುಪ್ಪ ಹಾಕಿ ಬೆಳ್ಳುಳ್ಳಿಯನ್ನು ಹುರಿದು ತುಪ್ಪವನ್ನು ಸೇರಿಸಿ ಅರೆದು ಒಂದು ಚಮಚ ಜೇನು ಸೇರಿಸಿ ತಿನ್ನುತ್ತಿದ್ದರೆ ಉಬ್ಬಸ ಗುಣವಾಗುತ್ತದೆ.
  11. ಬೆಳ್ಳುಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಚರ್ಮರೋಗಕ್ಕೆ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ.
  12. ಬೆಳ್ಳುಳ್ಳಿ ರಸಕ್ಕೆ ಉಪ್ಪು ಸೇರಿಸಿ ಹಚ್ಚಿದರೆ ಚೇಳಿನ ವಿಷ ಇಳಿಯುತ್ತದೆ.
  13. ಬೆಳ್ಳುಳ್ಳಿ ಎಸಳಿಗೆ ಎಳ್ಳೆಣ್ಣೆ ಸೇರಿಸಿ ಸೈಂಧವ ಲವಣ ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ ವಾತ ಜ್ವರ ಗುಣವಾಗುತ್ತದೆ.
  14. 20 ಗ್ರಾಂ ಬೆಳ್ಳುಳ್ಳಿ ಸಮ ಪ್ರಮಾಣದ ಶುಂಠಿ ಲಕ್ಕಿ ಸೊಪ್ಪು ಸಮ ಪ್ರಮಾಣ 8 ಪಾಲು ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ ಸೋಸಿ ಎರಡು ಹತ್ತು ಸೇವಿಸುವುದರಿಂದ ವಾತರೋಗ ಗುಣವಾಗುತ್ತದೆ.
  15. ದುಷ್ಟ ಹುಣ್ಣಿನ ಮೇಲೆ ಬೆಳ್ಳುಳ್ಳಿ ರಸವನ್ನು ಹಚ್ಚುವುದರಿಂದ ಹುಳು ಆಗುವುದಿಲ್ಲ.
  16. ದುಷ್ಟ ಜಂತುಗಳು ಕಚ್ಚಿದಾಗ ಬೆಳ್ಳುಳ್ಳಿಯನ್ನು ಹಚ್ಚುವುದು ಮತ್ತೆ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ವಿಷ ಇರುವುದಿಲ್ಲ.
  17. ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಂಡಿ ನೋವು ಗುಣವಾಗುತ್ತದೆ.
  18. ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಚಚ್ಚಿ ಕುದಿಸಿ ಕಪ್ಪಾದ ಮೇಲೆ ಬೆಳ್ಳುಳ್ಳಿಯನ್ನು ತೆಗೆದು ಎಣ್ಣೆಯನ್ನು ಸೀಸೆಯಲ್ಲಿ ಭದ್ರವಾಗಿಟ್ಟು ನೋವಿರುವ ಜಾಗದಲ್ಲಿ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
  19. ಆರು ಏಳು ಎಸಳು ಬೆಳ್ಳುಳ್ಳಿಯನ್ನು ಅಕ್ಕಿಯಲ್ಲಿ ಹಾಕಿ ಅನ್ನ ಮಾಡಿ ತಿನ್ನುವುದರಿಂದ ವಾತರೋಗಗಳು ನಿವಾರಣೆಯಾಗುತ್ತದೆ ಮತ್ತು ತಡೆಯಲಾಗದ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
  20. ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಾಲಿನಲ್ಲಿ ಬೇಯಿಸಿ ತುಪ್ಪದಲ್ಲಿ ಕೆಂಪಾಗಿ ಹುರಿದು ಇತರೆ ಸಾಮಗ್ರಿಗಳನ್ನು ಸೇರಿಸಿ ನಾನು ತಯಾರಿಸಿದ ಔಷಧಿ ಪಾರ್ಶ್ವ ವಾಯು ಮತ್ತು ವಾತರೋಗಕ್ಕೂ ತುಂಬಾ ಒಳ್ಳೆಯ ಔಷಧಿಯಾಗಿದೆ.
  21. ಬೆಳ್ಳುಳ್ಳಿ ಮತ್ತು ಶುಂಠಿ ಪುಡಿಯನ್ನು ಶುಂಠಿ ಪೇಸ್ಟ್ ಸೇರಿಸಿ ಹಚ್ಚಿದರೆ ತಲೆನೋವು ಗುಣವಾಗುತ್ತದೆ.
  22. ಚಳಿಗಾಲದಲ್ಲಿ ಹೆಚ್ಚು ಉಪಯೋಗಿಸುವುದರಿಂದ ಶಾಖ ಹೆಚ್ಚಿಸಿ ದೇಹದ ನೋವು ನಿವಾರಣೆ ಮಾಡುತ್ತದೆ.
  23. ಪ್ರತಿ ದಿನ ಎರಡು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಬಿಪಿ ಹತೋಟಿಗೆ ಬರುತ್ತದೆ.
  24. ಬೆಳ್ಳುಳ್ಳಿ ಹೆಣ್ಣುಮಕ್ಕಳ ತಿಂಗಳ ಮುಟ್ಟಿನ  ಹೊಟ್ಟೆ ನೋವು ನಿವಾರಿಸುತ್ತದೆ.
  25. ಬೆಳ್ಳುಳ್ಳಿಯ ಉಪಯೋಗದಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.
  26. ಇನ್ನೂ ಹೆಚ್ಚಿನ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುವ ಬೆಳ್ಳುಳ್ಳಿ, ತಾಮಸಿಕ ಮತ್ತು ಕಾಮ ಆಸಕ್ತಿ ಗುಣವನ್ನು ಹೆಚ್ಚಿಸುತ್ತದೆ ಮೆದುಳಿನ ಮೇಲೆ ಹೆಚ್ಚಿನ ಪರಿಣಾಮ ಬೀರುವ ಇದು ಮಾನಸಿಕ ಒತ್ತಡವನ್ನು ತರುತ್ತದೆ. ಈ ಕಾರಣಕ್ಕಾಗಿ ನಮ್ಮ ಹಿರಿಯರು ಬೆಳ್ಳುಳ್ಳಿಯನ್ನು ಪೂಜೆ ಪುನಸ್ಕಾರ ದೇವಿ ಕಾರ್ಯ ತಪಸ್ಸು ಜಪ ಮಾಡುವ ಸಮಯದಲ್ಲಿ ನಿಶಿದ್ಧ ಎಂದಿದ್ದಾರೆ.

ಸುಮನಾ ಮಳಲಗದ್ದೆ.9980182883.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group