- Advertisement -
ಬೀದರ – ಮಾನವ ಮತ್ತು ಪ್ರಾಣಿಗಳ ನಂಟು ಬಹಳ ಪುರಾತನವಾದದ್ದು ತನ್ನ ಪ್ರೀತಿಯ ನಾಯಿ, ಬೆಕ್ಕು, ಮುಂತಾದ ಸಾಕು ಪ್ರಾಣಿಗಳಿಗಾಗಿ ಮಾನವರು ಅನೇಕ ರೀತಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಮಾಡುವ ಅನೇಕ ಘಟನೆಗಳನ್ನು ನಾವು ನೋಡುತ್ತೇವೆ
ಶ್ವಾನ ಅಂದರೆ ಅನೇಕರಿಗೆ ಅಚ್ಚುಮೆಚ್ಚು. ಮನೆಯ ಸದಸ್ಯರಂತೆ ಅವುಗಳನ್ನು ನೋಡಿಕೊಂಡು ಸಾಕುತ್ತಾರೆ. ಬೀದರ ಜಿಲ್ಲೆಯ ಹುಮನಾಬಾದ ಪಟ್ಟಿಣ ಝರಾಪೇಟ ನಗರದಲ್ಲಿ ರಾಹುಲ್ ಖನ್ನಾ ಎಂಬ ಶ್ವಾನ ಪ್ರಿಯರೊಬ್ಬರು ತಾವು ಸಾಕಿರುವ ನಾಯಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಚಾರ್ಲಿ ಎಂದು ಕರೆಯಲ್ಪಡುವ ಈ ನಾಯಿಗೆ ಮೂರು ವರ್ಷಕ್ಕೆ ತುಂಬಿದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಹಾಗು ಬಡಾವಣೆ ಸದಸ್ಯರಿಗೆ ಸೇರಿ ಖನ್ನಾ ಕುಟುಂಬದವರು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿ ಸಂಭ್ರಮದಿಂದ ಕೇಕ್ ಕಟ್ ಮಾಡಿ ಹ್ಯಾಪಿ ಚಾರ್ಲಿ ಎಂದು ಹಾಡು ಹಾಡಿದ್ದಾರೆ.