spot_img
spot_img

ಮಹಾಮಾನವತಾವಾದಿ ನಾಲ್ವಡಿ ಕೃಷ್ಣರಾಜ ಒಡೆಯರ್

Must Read

- Advertisement -

  ಶ್ರಾವಣ ಮಾಸದ ಗೂಗಲ್ ಮೀಟ್ ನಲ್ಲಿ ಮಹಾರಾಜರ ಸ್ಮರಣೆ

ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ ವಚನ ಅಧ್ಯಯನ ವೇದಿಕೆ ಪುಣೆ ಇದರ ಅಡಿಯಲ್ಲಿ ಡಾ. ಶಶಿಕಾಂತ ಪಟ್ಟಣ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರಾವಣ ಮಾಸದ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಕ್ಷ ಆಡಳಿತದ ಕುರಿತು ಚಿಂತನೆ ನಡೆಯಿತು.

ಗೂಗಲ್ ಮೀಟ್ ದಿ. 04 / 08 / 2024 ರಿಂದ 05 / 09 / 2024 ರವರೆಗೆ ಸತತವಾಗಿ ಒಂದು ತಿಂಗಳ ಕಾಲ ನಡೆಯಲಿದ್ದು ಇದು ಕಳೆದ ನಾಲ್ಕು ವರ್ಷಗಳಿಂದಲೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಪ್ರತಿ ಶನಿವಾ ಸಾ.೫ ಗಂಟೆಗೆ ಹಾಗೂ ಪ್ರತಿ ರವಿವಾರ ಬೆ.೧೧.೨೫ ಕ್ಕೆ ಗೂಗಲ್ ಮೀಟ್ ನಡೆಯುತ್ತದೆ.

- Advertisement -

ಇಂದು ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆಯ ಸಾಮೂಹಿಕ ಸಂವಾದ ಚಿಂತನೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇಂದು ಅನುಭಾವ ಹಂಚಿಕೊಳ್ಳಲು ಬಂದವರು ಪ್ರೊಫೆಸರ್ ಎನ್ ಚಿನ್ನಸ್ವಾಮಿ ಸೋಸಲೆ,  ಸಮಾಜಮುಖಿ ಚಿಂತಕರು ಹಾಗೂ  ಕನ್ನಡ ವಿಶ್ವವಿದ್ಯಾಲಯ ಹಂಪಿಯ ಹಿರಿಯ ಪ್ರಾಧ್ಯಾಪಕರು

ಮೊದಲಿಗೆ ವಿದ್ಯಾ ಮುಗ್ದುಂ ಅವರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಡಾ. ಶಶಿಕಾಂತ್ ಪಟ್ಟಣ ಅವರು ತಮ್ಮ ಪ್ರಾಸ್ತಾವಿಕ ನುಡಿಗಳನ್ನು ತಮ್ಮದೇ ಆದ ಶೈಲಿಯಲ್ಲಿ ನಮ್ಮ ವೇದಿಕೆಯ ಉದ್ದೇಶ, ಇವತ್ತಿನ ವಿಷಯವಾದ ” ನಾಲ್ವಡಿ ಕೃಷ್ಣರಾಜರ ಜನಮುಖಿ ಆಡಳಿತ ” ವಿಷಯದ ಬಗೆಗೆ ಸಂಕ್ಷಿಪ್ತ ಮಾಹಿತಿ, ಚಿನ್ನಸ್ವಾಮಿ ಸೋಸಲೆ ಅವರ ಪರಿಚಯ ಮತ್ತು ಶಾರದಮ್ಮ ಪಾಟೀಲ್ ಅವರ ದತ್ತಿ ಉಪನ್ಯಾಸದ ಪ್ರಯುಕ್ತ ಅವರ ಬಗೆಗೂ ಮೆಚ್ಚುಗೆಯ ನುಡಿಗಳನ್ನು ಮಾತನಾಡಿದರು.

ಚಿನ್ನಸ್ವಾಮಿ ಸೋಸಲೆಯವರು ತಮ್ಮ ಮಾತಿನಿಂದ ಇಡೀ ಮೈಸೂರು ಮನೆತನವನ್ನು, ಮೈಸೂರು ನಗರವನ್ನು, ಅಂದಿನ ಕಾಲದ ಆಡಳಿತವನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸಿದರು. ಯಾವುದೇ ಪುಸ್ತಕ ಓದುವ ಅಗತ್ಯವಿಲ್ಲ ಎನ್ನುವ ಅನುಭವ ಎಲ್ಲರಿಗೂ ಆಯಿತು ಎಂದರೆ ತಪ್ಪಾಗಲಾರದು.

- Advertisement -

ನಾಲ್ವಡಿ ಕೃಷ್ಣರಾಜ ಒಡೆಯರು ಮಾಡಿದ ಜನಮುಖಿ ಕೆಲಸಗಳು ಒಂದೇ ಎರಡೇ, ಮಹಾರಾಣಿ ಕಾಲೇಜು, ಮಿಂಟೋ ಹಾಸ್ಪಿಟಲ್, ಮೈಸೂರು ಮೆಡಿಕಲ್ ಕಾಲೇಜು, ನಿಮ್ಹಾನ್ಸ್, ಕೆ. ಅರ್. ಮಾರ್ಕೆಟ್, ಭದ್ರಾವತಿ ಉಕ್ಕು ಕಾರ್ಖಾನೆ, ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಬ್ಯಾಂಕ್ ಸ್ಥಾಪನೆ, ಎಲ್ಲದಕ್ಕಿಂತ ಹೆಚ್ಚು ಕನ್ನಂಬಾಡಿ ಆಣೆಕಟ್ಟು… ಹೀಗೆ ನೂರಾರು ಕೆಲಸಗಳನ್ನು ಮಾಡಿದ ಮಹಾರಾಜರ ಅಗಾಧವಾದ ಕಾರ್ಯಕ್ಷೇತ್ರವನ್ನು ಅತ್ಯಂತ ಹೆಮ್ಮೆಯಿಂದ ಹೇಳುತ್ತಾ ಹೋದರು. ಅವೆಲ್ಲವುಗಳಿಗೆ ಈಗ 100 ವರ್ಷದ ಶತಮಾನೋತ್ಸವ ಎನ್ನುವದನ್ನು ನೆನಪು ಮಾಡಿಕೊಟ್ಟರು.

ಶಿವನಸಮುದ್ರದಿಂದ ವಿದ್ಯುಚ್ಚಕ್ತಿ ಉತ್ಪಾದನೆ ಅದರಿಂದ ಮನೆ ಮನೆಗೆ ಬೆಳಕು ಬಂದಿದ್ದು, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ, 1916 ರಲ್ಲಿ ಮಹತ್ತರವಾದ ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿದ್ದು, ಅದರಿಂದ ಎಲ್ಲರೂ ಉನ್ನತ ಶಿಕ್ಷಣ ಪಡೆದು ಜ್ಞಾನದೀಪ ಮತ್ತು ಶಿಕ್ಷಣದೀಪವನ್ನು ಬೆಳಗಿ ” ನಾಲ್ವಡಿ ಭೂಪ – ಮನೆ ಮನೆಯ ದೀಪ ” ಎನ್ನುವ ಪ್ರೀತಿಯ ಬಿರುದನ್ನು ಕೊಟ್ಟರು ಎಂದು ಅಭಿಮಾನದಿಂದ ಹೇಳಿದರು.

ಅವರ ಯೋಜನೆಗಳನ್ನು ಪ್ರತಿಹಂತದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಅವರ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು, ಮಿರ್ಜಾ ಇಸ್ಮಾಯಿಲ್ ಅವರು, ಕಾಂತರಾಜು ಅರಸು ಅವರು ಶ್ರಮಪಟ್ಟಿದ್ದು ಒತ್ತಿ ಹೇಳಿದರು.

ಹೀಗೆ ನಾಲ್ವಡಿ ಕೃಷ್ಣರಾಜರು ಕೃಷಿಕ್ರಾಂತಿ, ಶಿಕ್ಷಣ ಕ್ರಾಂತಿ, ಕೈಗಾರಿಕಾ ಕ್ರಾಂತಿ, ಆಡಳಿತದ ಸರ್ವೋತ್ತಮ ಬೆಳವಣಿಗೆ, ಕೆರೆ ಅಭಿವೃದ್ಧಿ, ದೇಸಿ ತಳಿ ಆಕಳುಗಳ ಸಂರಕ್ಷಣೆ, ಮಹಿಳಾ ಶಿಕ್ಷಣಕ್ಕೆ ಆದ್ಯತೆ, ಎಲ್ಲ ಜನಾಂಗದವರಿಗೆ ಬೇರೆ ಬೇರೆ ಶಾಲೆಗಳು, ಪಂಚಮ ಶಿಕ್ಷಣ ವ್ಯವಸ್ಥೆ ಹೀಗೆ ನೂರಾರು ಯೋಜನೆಗಳನ್ನು ನಾಡಿನ ಜನತೆಗೆ ಕಲ್ಪಿಸಿಕೊಟ್ಟರು.

ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಕತ್ತಿ ಹಿಡಿಯದೆ ಪೆನ್ನು ಮೂಲಕ ಆಡಳಿತವನ್ನು ನಡೆಸಿದರು ಎನ್ನುವದನ್ನು ಅತ್ಯಂತ ಗೌರವದಿಂದ ಸೋಸಲೆಯವರು ನೆನೆಸಿಕೊಂಡರು. ಬಹಳಷ್ಟು ಅಮಾನವೀಯ ಪದ್ಧತಿಗಳನ್ನು ನಿರ್ಮೂಲನೆ ಮಾಡಿದ್ದು ಅತ್ಯಂತ ಶ್ಲಾಘನೀಯ ಕಾರ್ಯ ಎನ್ನುವದನ್ನು ಅತ್ಯಂತ ಕಾಳಜಿಪೂರ್ವಕವಾಗಿ ತಿಳಿಸಿದರು. ಸಾವಿರಾರು ಮೈಲಿ ಕಾಲುವೆ ನಿರ್ಮಿಸಿದ್ದು, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ, ಸ್ಕೌಟ್ ಗೈಡ್ ಸ್ಥಾಪನೆ, ರೇಲ್ವೆ ಹಳಿ ನಿರ್ಮಾಣ, ಹೀಗೆ ಹೇಳುವುದು ಮುಗಿಯುವುದೇ ಇಲ್ಲವೇನೋ ಅನ್ನುವಷ್ಟು ಅವರ ಕಾರ್ಯಬಾಹುಳ್ಯದ ಪರಿಯನ್ನು ಎಳೆ ಎಳೆಯಾಗಿ ನಮ್ಮ ಮುಂದೆ ತೆರೆದುಕೊಟ್ಟರು. ಮೈಸೂರಿನ ಅರಮನೆ ಮತ್ತು ಇತರ ರಾಜ ಮಹಲುಗಳು, ಬೆಂಗಳೂರಿನ ಅರಮನೆಯನ್ನು ಕಟ್ಟಿದ್ದು ನೆನಪಿಸಿಕೊಟ್ಟರು.

ಉಪನ್ಯಾಸದ ನಂತರ ಡಾ. ಶಶಿಕಾಂತ ಪಟ್ಟಣ ಅವರು ನಾಲ್ವಡಿ ಕೃಷ್ಣ ರಾಜರ ಬಗೆಗೆ ಇನ್ನೊಂದಿಷ್ಟು ಮಾಹಿತಿ ಹೇಳುತ್ತಾ, ಮಹಾರಾಜರು ಜಗಜ್ಯೋತಿ ಬಸವೇಶ್ವರ ಅವರ ಚರಿತ್ರೆ ಓದಿ, ನಾಟಕ ಬರೆಸುತ್ತಾರೆ ಎನ್ನುವ ಅಭಿಮಾನದ ಸಂಗತಿಯನ್ನು ನಮ್ಮೊಂದಿಗೆ ಹಂಚಿಕೊಂಡರು. ಶರಣರ ವಚನಗಳನ್ನು ಮಧ್ಯದಲ್ಲಿ ನೆನಪು ಮಾಡಿಕೊಳ್ಳುತ್ತಾ, ಪ್ರಕ್ಷಿಪ್ತ ವಚನಗಳ ಪರಿಷ್ಕರಣೆ ಎಷ್ಟು ಅಗತ್ಯ ಮತ್ತು ಅನಿವಾರ್ಯವಿದೆ ಎನ್ನುವ ಕಳಕಳಿಯನ್ನು ವ್ಯಕ್ತಪಡಿಸಿದರು

ಇವತ್ತಿನ ಸಂವಾದದಲ್ಲಿ ಶ್ರೀಮತಿ ವೀಣಾ ಎಲಿಗಾರ, ಶಶಿಕಾಂತ ನೆಲ್ಲೂರ , ಆಸ್ಟ್ರೇಲಿಯಾದಿಂದ ಲಿಂಗಪ್ಪಣ್ಣ ಕಲ್ಬುರ್ಗಿ, ದತ್ತಿ ದಾಸೋಹಿ ಶಾರದಮ್ಮ ಪಾಟೀಲ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇಸ್ರೋ ದ ವಿಜ್ಞಾನಿ ಸಂಜೀವ ಗೌರ್ ಅವರು ಮಹಾರಾಜರು ರಾಮನ್ ರಿಸರ್ಚ್ ಸೆಂಟರ್, ನಿಮ್ಹಾನ್ಸ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬಿಲ್ಡಿಂಗ್ ಗಳಿಗೆ ನೂರಾರು ಎಕರೆ ಜಾಗವನ್ನು ಕೊಟ್ಟಿದ್ದು ನಮಗೆಲ್ಲರಿಗೆ ನೆನಪು ಮಾಡಿಕೊಟ್ಟರು.

ಪ್ರೇಮಕ್ಕ ಹೊರಟ್ಟಿ ಅವರ ವಚನ ಮಂಗಳದಿಂದ ಕಾರ್ಯಕ್ರಮ ಮುಕ್ತಾಯವಾಯಿತು. ಇವತ್ತು ನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಮಾನಮನಸ್ಕರು ನಮ್ಮ ವಚನ ಅಧ್ಯಯನ ವೇದಿಕೆಯಲ್ಲಿ ಸೇರಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡ ಶ್ರೇಯಸ್ಸು  ಡಾ. ಶಶಿಕಾಂತ ಪಟ್ಟಣ  ಅವರಿಗೆ ಸಲ್ಲಬೇಕು.

ಸುಧಾ ಪಾಟೀಲ, ವಿಶ್ವಸ್ಥರು                                       ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ, ಪುಣೆ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಬೇಕುಬೇಕೆಂಬುವ ಬಾವಿಜಲ‌ ಬತ್ತುವುದು ಸಾಕೆಂಬ ಸಾಗರವು ಬತ್ತಬಹುದೆ ? ಬೇಕೆನಲು ಭಿಕ್ಷುಕನು ಸಾಕೆನಲು‌ ಸಿರಿವಂತ ಸಂತೃಪ್ತಿಯಿಂದ ಸುಖ‌- ಎಮ್ಮೆತಮ್ಮ. ಶಬ್ಧಾರ್ಥ ಸಾಗರ = ಸಮುದ್ರ. ತಾತ್ಪರ್ಯ ಬಾವಿಯ ನೀರು ಮಳೆಗಾಲದಲ್ಲಿ‌ ಮಾತ್ರ ತುಂಬಿರುತ್ತದೆ.ಆದರೆ ಬೇಸಿಗೆಕಾಲ‌ ಬಂದಾಗ...
- Advertisement -

More Articles Like This

- Advertisement -
close
error: Content is protected !!
Join WhatsApp Group