spot_img
spot_img

ಸಿಂದಗಿ ಪಟ್ಟಣದ ಹಸಿರೀಕರಣ ಕಾರ್ಯ ಶ್ಲಾಘನೀಯ – ಅಶೋಕ ಮನಗೂಳಿ

Must Read

- Advertisement -

ಸಿಂದಗಿ; ಪರಿಸರ ವಿನಾಶದಿಂದ ನಾವೆಲ್ಲರು ಕೊವಿಡ್‍ನಂತಹ ರೋಗಕ್ಕೆ ತುತ್ತಾಗಬೇಕಾದ ದುಸ್ಥಿತಿ ಬಂದೊದಗಿದೆ ಅದಕ್ಕೆ ಪರಿಸರ ಸಂರಕ್ಷಣೆ ನಮ್ಮೆಲರ ಆದ್ಯ ಕರ್ತವ್ಯವಾಗಿದೆ. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಪಟ್ಟಣದ ಹಸಿರೀಕರಣಕ್ಕೆ ಮುಂದಾಗಿರುವದು ಶ್ಲಾಘನೀಯ ಕಾರ್ಯ ಎಂದು ಶಾಸಕ ಅಶೋಕ ಮನಗೂಳಿ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಕನಕದಾಸ ವೃತ್ತದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ವಲಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚಾರಣೆಯ ನಿಮಿತ್ತ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿ, ಬರೀ ವೃತ್ತ ಹಾಗೂ ಮುಖ್ಯ ರಸ್ತೆಗಳ ಮಧ್ಯದ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಕಾರ್ಯ ನಡೆಸದೇ ಪಟ್ಟಣದಲ್ಲಿ ಅನೇಕ ಬಡಾವಣೆಗಳಲ್ಲಿ ಉದ್ಯಾನವನಗಳಿದ್ದು ಆ ಜಾಗೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಸಸ್ಯ ಅಭಿವೃದ್ದಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ದಶಕದಿಂದ ಇತ್ತಿಚೆಗೆ ಹುಟ್ಟಿಕೊಂಡಿರುವ ಪರಿಸರ ಸಂರಕ್ಷಣಾ ಸಂಘಟನೆಗಳು ಪರಿಸರದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿವೆ. ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಹಸನವಾಗುತ್ತದೆ. ಪರಿಸರದ ಬಗ್ಗೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ವಲಯ ಅರಣ್ಯವಲಯಾಧಿಕಾರಿಗಳಾದ ರಾಜೀವ ಬಿರಾದಾರ, ಎಂ.ವೈ.ಮಲಕಣ್ಣವರ, ಉಪವಲಯ ಅರಣ್ಯಾಧಿಕಾರಿ ಎಂ.ಎನ್.ಮುಲ್ಲಾ, ರಾಜೇಸಾಬ ಜಮಾದಾರ, ಸಿಬ್ಬಂದಿಗಳಾದ ಶಿವಾನಂದ ಮಾಡಗೊಂಡ, ಎಂ.ಬಿ.ಕಂತಿಕರ, ಮುತ್ತು ಹಾಗೂ ಮುಖಂಡರಾದ ಸಿದ್ದಣ್ಣ ಹಿರೇಕುರಬರ, ಶಿವಶಂಕರ ಬಿರಾದಾರ, ಪ್ರಸನ್ ಜೇರಟಗಿ, ಚೇತನ, ಭೀಮನಗೌಡ ಬಿರಾದಾರ, ವಿಜಯ ಯಾಳವಾರ, ಭೀಮು ಬೀರಗೊಂಡ ಸೇರಿದಂತೆ ಇತರರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group