spot_img
spot_img

ಕಿತ್ತೂರ ಚನ್ನಮ್ಮ ಹಾಗೂ ವಿವೇಕಾನಂದರ ಮೂರ್ತಿ ಪ್ರತಿಷ್ಠಾಪನೆ ಜೂ. ೧೨ ರಂದು

Must Read

- Advertisement -

ಸಿಂದಗಿ; ಪಟ್ಟಣದಲ್ಲಿ ವಿಜಯಪುರ ನಗರಕ್ಕೆ ಹೋಗುವ ಮಾರ್ಗದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ವೃತ್ತಗಳಲ್ಲಿ ಪುತ್ತಳಿಗಳ ಪ್ರತಿಸ್ಥಾಪನೆ ಗೊಳ್ಳಲಿವೆ. ಜೂ.12 ರಂದು ಪಟ್ಟಣಕ್ಕೆ ಆಗಮಿಸಲಿರುವ ಭವ್ಯ ಮೆರವಣಿಗೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಮನವಿ ಮಾಡಿಕೊಂಡರು.

ಪಟ್ಟಣದ ಬಸವ ಮಂಟಪದಲ್ಲಿ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಶ್ರೀ ಸ್ವಾಮಿವಿವೇಕಾನಂದರ ಹಾಗೂ ಕಿತ್ತೂರರಾಣಿ ಚೆನ್ನಮ್ಮಳ ಪುತ್ತಳಿಗಳನ್ನು ಶಾಸಕ ಅಶೋಕ ಮನಗೂಳಿಯವರ ಪರಿಶ್ರಮದಿಂದ ತಮ್ಮ ಸ್ವಂತ ಹಣದಲ್ಲಿ ಕಿತ್ತೂರ ರಾಣಿ ಚನ್ನಮ್ಮಳ ಕಂಚಿನ ಪುತ್ಥಳಿ 10 ಅಡಿ ಮತ್ತು ಶ್ರೀ ಸ್ವಾಮಿವಿವೇಕಾನಂದರ ಕಂಚಿನ ಪುತ್ಥಳಿ 8 ಅಡಿ ಎತ್ತರ ಮಾಡಿಸಿದ್ದಾರೆ ಜೂ.12 ರಂದು ಎರಡೂ ಕಂಚಿನ ಪುತ್ಥಳಿಗಳು ನಗರಕ್ಕೆ ಆಗಮಿಸಲಿದ್ದು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿ ನಾಡಿನ ಅನೇಕ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ರಾಜಕೀಯ ನಾಯಕರ ನೇತೃತ್ವದಲ್ಲಿ ಆಯಾ ವೃತ್ತದಲ್ಲಿ ಮೂರ್ತಿಗಳನ್ನು ನಿಲ್ಲಿಸಲಾಗುವುದು ಎಂದರು.

ನಂತರ ಎರಡೂ ವೃತ್ತಗಳ ಮುಖಂಡರ ಕಾರ್ಯಕರ್ತರ, ಸಿಂದಗಿಯ ಸಮಸ್ತ ಜನತೆಯ ಸಹಕಾರದಿಂದ ಅನಾವರಣ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ವಿವರಿಸಿದರು.

- Advertisement -

ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಮ ಪಾಟೀಲ ಹೂನಳ್ಳಿ ಮಾತನಾಡಿ, ಎರಡೂ ಪುತ್ಥಳಿಗಳು ಜೂ.12ಕ್ಕೆ ಆಗಮಿಸಲಿದ್ದು ಪಟ್ಟಣದ ಗಾಂಧಿ ವೃತ್ತದಿಂದ ಮೆರವಣಿಗೆ ಪ್ರಾರಂಭಗೊಂಡು ಟಿಪ್ಪು ವೃತ್ತ, ಗದಗಿನ ತೋಂಟದಾರ್ಯ ಮಠದ ಲಿಂ.ಡಾ.ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ಶ್ರೀ ಸ್ವಾಮಿ ವಿವೇಕಾನಂದ ವೃತ್ತಕ್ಕೆ ಸಾಗಲಿದೆ. ಅಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿ ನಿಲ್ಲಿಸಿ ಅಲ್ಲಿಂದ ನೇರವಾಗಿ ಶ್ರೀ ಬಸವೇಶ್ವರ ವೃತ್ತದ ಮೂಲಕ ಕಿತ್ತೂರ ರಾಣಿ ಚೆನ್ನಮ್ಮ ವೃತ್ತಕ್ಕೆ ಸಾಗುತ್ತದೆ. ಅಲ್ಲಿ ಚನ್ನಮ್ಮಳ ಪುತ್ಥಳಿ ನಿಲ್ಲಿಸಲಾಗುವುದು ಎಂದರು.

ಶಿಕ್ಷಕ ಸಂಗನಬಸು ಬಿರಾದಾರ ಮಾತನಾಡಿ, ಹಿಂದೆ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಪಟ್ಟಣದಲ್ಲಿ ಅನೇಕ ಶರಣರ ಪುತ್ತಳಿಗಳ ವೃತ್ತಗಳನ್ನು ನಿರ್ಮಾಣ ಮಾಡಿದ್ದಾರೆ ಆದರೆ ಕಿತ್ತೂರ ರಾಣಿ ಚೆನ್ನಮ್ಮ ತಾಯಿಯ ವೃತ್ತ ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಅದನ್ನು ಶಾಸಕ ಅಶೋಕ ಮನಗೂಳಿಯವರು ತಮ್ಮ ಸ್ವಂತ ಹಣದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಹಾಗೂ ಬ್ರಿಟೀಷರ ವಿರುದ್ಧ ಹೋರಾಡಿದ ಕಿತ್ತೂರ ರಾಣಿ ಚೆನ್ನಮ್ಮಳ ಈ ಎರಡು ವೃತ್ತಗಳನ್ನು ನಿರ್ಮಾಣ ಮಾಡುವ ಮೂಲಕ ಪುತ್ತಳಿಗಳ ಪ್ರತಿಸ್ಥಾಪನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಕಾರಣ ಸಾರ್ವಜನಿಕರ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೆ ಕಾರಣಿಬೂತರಾಗುವಂತೆ ಕರೆ ನೀಡಿದರು.

ಈ ವೇಳೆ ಮುಖಂಡರಾದ ಗುರು ಬಸರಕೋಡ, ಸ್ವಾಮಿ ವಿವೇಕಾನಂದ ವೃತ್ತದ ಸಮಿತಿಯ ಶಿವಾನಂದ ನಿಗಡಿ, ಬಸವರಾಜ ಪಾಟೀಲ, ಸಂತೋಷ ಭಜಂತ್ರಿ, ಗಂಗಾಧರ ರುಕುಂಪುರ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಬಾಪುಗೌಡ ಬಿರಾದಾರ, ರುದ್ರಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group