spot_img
spot_img

ಸಮಾಜಮುಖಿ ಚಿಂತನೆಯ ಶಿಕ್ಷಕರ ಧ್ವನಿ ಗುರು ತಿಗಡಿ

Must Read

- Advertisement -

ಧಾರವಾಡ: ಸತತ ೩ ದಶಕಗಳ ಕಾಲ ಓರ್ವ ಆದರ್ಶ ಅಧ್ಯಾಪಕರಾಗಿ ಸೇವೆಸಲ್ಲಿಸಿ ಶ್ರೇಷ್ಠ ಸಂಘಟಿಕರಾಗಿ, ಸಮಾಜಮುಖಿ ಚಿಂತನೆಯ ಶಿಕ್ಷಕರ ಧ್ವನಿಯಾಗಿರುವ ಗುರು ತಿಗಡಿ ಸಮುದ್ರದಂತೆ ವಿಶಾಲ ಗುಣವಿಶೇಷತೆಯನ್ನು ಹೊಂದಿದ್ದಾರೆ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಬಣ್ಣಿಸಿದರು.

ಅವರು ಶನಿವಾರ ಇಲ್ಲಿಯ ಕ.ವಿ.ವ. ಸಂಘದ ಡಾ. ಪಾಪು ಸಭಾ ಭವನದಲ್ಲಿ ಗುರು ತಿಗಡಿ ಅಭಿನಂದನಾ ಸಮಿತಿ ಹಾಗೂ ರಾಜ್ಯ ಸರಕಾರಿ ಪ್ರಾ. ಶಾ. ಶಿಕ್ಷಕರ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗುರು ತಿಗಡಿ ನಿವೃತ್ತಿಯ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ೬೦ ವಸಂತಗಳ ಸಂದರ್ಭದಲ್ಲಿ ನಿವೃತ್ತಿ ಶಾಶ್ವತ. ಆದರೆ ಬಹಳಷ್ಟು ಕ್ರಿಯಾಶೀಲ ಚಟುವಟಿಕೆಯ ವ್ಯಕ್ತಿತ್ವ ಹೊಂದಿರುವ ತಿಗಡಿ ಅವರು ನಿವೃತ್ತಿಯ ನಂತರ ಮತ್ತಷ್ಟು ಚುರುಕಾಗಿ ಸಮಾಜ ಸೇವೆಗೆ ತೊಡಗಿಸಿಕೊಳ್ಳುವರೆಂಬ ವಿಶ್ವಾಸ ತಮಗಿದೆ ಎಂದರು.

- Advertisement -

ಗುರುಪಥ ಬಿಡುಗಡೆ: ‘ಗುರುಪಥ’ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಪತ್ರಕರ್ತ ಡಾ. ಸಿದ್ಧನಗೌಡ ಪಾಟೀಲ ಮಾತನಾಡಿ, ತಮ್ಮ ವಿದ್ಯಾರ್ಥಿ ಬದುಕಿನಿಂದಲೇ ಎ.ಐ.ಎಸ್.ಎಫ್. ವಿದ್ಯಾರ್ಥಿ ಸಂಘಟನೆಯೊಂದಿಗೆ ಅತ್ಯಂತ ಸಕ್ರೀಯವಾಗಿ ಗುರುತಿಸಿಕೊಂಡು ಹೋರಾಟದ ಮನೋಧರ್ಮ ಮೈಗೂಡಿಸಿಕೊಂಡಿರುವ ಗುರು ತಿಗಡಿ, ಶಿಕ್ಷಕ ವೃತ್ತಿ, ಶಿಕ್ಷಕರ ಸಂಘಟನೆಗಳ ಹೋರಾಟದಲ್ಲಿ ಮತ್ತು ಶಿಕ್ಷಕರ ಸಹಕಾರಿ ಸಂಘದಲ್ಲಿ ಸಲ್ಲಿಸಿದ ಉಪಯುಕ್ತ ಸೇವೆಯನ್ನು ಅಭಿನಂದನಾ ಗ್ರಂಥದಲ್ಲಿ ದಾಖಲಿಸಲಾಗಿದೆ ಎಂದರು. ಗುರುಪಥ ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕರಾದ ರಂಗನಾಥ ವಾಲ್ಮೀಕಿ. ಸಹ ಸಂಪಾದಕರಾದ ವೈ.ಬಿ.ಕಡಕೋಳ. ಸಂಪಾದಕ ಮಂಡಳಿಯ ಡಾ.ಗುರುಮೂರ್ತಿ ಯರಗಂಬಳಿಮಠ.ಎಲ್.ಐ.ಲಕ್ಕಮ್ಮನವರ.ಸಿ.ವೈ.ಲಗಮಣ್ಣವರ.ಎ.ಎಚ್.ನದಾಪ್.ಮಲ್ಲಿಕಾರ್ಜುನ ಉಪ್ಪಿನ.ವಿ.ಎನ್.ಕೀರ್ತಿವತಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಿ.ಪಂ. ಮಾಜಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಬಿಇಓ ಉಮೇಶ ಬಮ್ಮಕ್ಕನವರ, ನಿವೃತ್ತ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ, ಗೋವಾದ ಡಾ.ಪ್ರಕಾಶ ಮೊರಕಾರ, ಎನ್.ಟಿ. ಉಪಾಧ್ಯೆ, ಶಿಕ್ಷಕ ರಂಗನಾಥ ವಾಲ್ಮೀಕಿ ಮಾತನಾಡಿದರು.

- Advertisement -

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗುರು ತಿಗಡಿ, ತಮ್ಮ ಬದುಕಿನ ವಿಭಿನ್ನ ಮಜಲುಗಳ ಹಾದಿಯಲ್ಲಿ ಸಾಧಿಸಿದ ಸಾಧನೆಗೆ ಕೈಜೋಡಿಸಿದ ಎಲ್ಲ ಶಿಕ್ಷಕ ಸಂಗಾತಿಗಳನ್ನು, ಮಾರ್ಗದರ್ಶನ ಮಾಡಿದ ಗುರುಗಳನ್ನು ಹಾಗೂ ಅವ್ವ-ಅಪ್ಪ ಅವರನ್ನು ಗೌರವಪೂರ್ವಕವಾಗಿ ಸ್ಮರಿಸಿದರು.

ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆವಹಿಸಿದ್ದರು. ಆರಂಭದಲ್ಲಿ ಗುರು ತಿಗಡಿ ಅವರ ತಂದೆ ಯಲ್ಲಪ್ಪ, ತಾಯಿ ನಿಂಗವ್ವ, ವಿದ್ಯಾ ಗುರುಗಳಾದ ಎನ್.ಟಿ. ಉಪಾಧ್ಯೆ ಹಾಗೂ ಕೆ.ಎಸ್. ಕೋನಣ್ಣವರ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ತಿಗಡಿ ಅವರ ಪತ್ನಿ ಗೌರವ್ವ ಹಾಗೂ ಪುತ್ರ ಡಾ. ವಿಕಾಸ ಇದ್ದರು.

ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಎಸ್. ಎಸ್. ಕೆಳದಿಮಠ, ರವಿಕುಮಾರ ಬಾರಾಟಕ್ಕೆ, ಗಿರೀಶ ಪದಕಿ, ಸುರೇಶ ಹುಗ್ಗಿ, ಎ.ಎ.ಖಾಜಿ, ಕೆ.ಎಂ. ಶೇಖ, ನಿವೃತ್ತ ಅಧಿಕಾರಿಗಳಾದ ಆರ್.ಎಸ್. ಮುಳ್ಳೂರ, ಆರ್.ಸಿ. ಹಲಗತ್ತಿ, ಬಸವರಾಜ ವಣ್ಣೂರ, ಈರಣ್ಣ ಏಳಲ್ಲಿ, ಗ್ರಾ.ಪಂ. ಸದಸ್ಯ ಸಿ.ಎಂ. ಕಿತ್ತೂರ, ಸಾಹಿತಿ ವೈ.ಬಿ.ಕಡಕೋಳ, ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ವಿವಿಧ ಸಂಘಟನೆಗಳ ಅಶೋಕ ಸಜ್ಜನ, ಆರ್. ನಾರಾಯಣಸ್ವಾಮಿ ಚಿಂತಾಮಣಿ, ಶಂಕರ ಘಟ್ಟಿ, ಗುರು ಪೋಳ, ಎಲ್.ಐ. ಲಕ್ಕಮ್ಮನವರ, ಸಿ.ವೈ.ಲಗಮಣ್ಣವರ, ಮಲ್ಲಿಕಾರ್ಜುನ ಉಪ್ಪಿನ, ಚಂದ್ರಶೇಖರ ತಿಗಡಿ, ಬಾಬಾಜಾನ ಮುಲ್ಲಾ, ಆರ್.ಬಿ. ಮಂಗೋಡಿ, ಎಸ್.ಬಿ. ಶಿವಸಿಂಪಿ, ಅಯ್ಯಪ್ಪ ಮೊಖಾಸಿ, ರಾಜು ಮಾಳವಾಡ, ರುದ್ರಪ್ಪ ಕುರ್ಲಿ, ಸಿದ್ಧಲಿಂಗ ವಾರದ, ರಾಜು ಬೆಟಗೇರಿ, ಎಂ.ಟಿ. ಸುಂಕದ, ಎಂ.ಜಿ.ಸುಬೇದಾರ, ಆರ್.ಎಸ್. ಹಿರೇಗೌಡರ, ಎಂ.ಐ.ದೀವಟಿಗಿ, ಎಂ.ಡಿ. ಹೊಸಮನಿ, ಎಸ್.ವೈ. ಸೊರಟಿ, ಸಿ.ಟಿ. ತಿಮ್ಮನಗೌಡರ, ಶಾರದಾ ಶಿರಕೋಳ, ಗಂಗವ್ವ ಕೋಟಿಗೌಡರ, ಶಕುಂತಲಾ ಅರಮನಿ, ಭಾರತಿ ಸಾಧನಿ, ರಜನಾ ಪಂಚಾಳ ಹಸೀನಾ ಸಮುದ್ರಿ, ಐ.ಎಚ್.ನದಾಫ್, ಎನ್.ಬಿ. ದ್ಯಾಪೂರ ಇದ್ದರು.

ಅಭಿನಂದನಾ ಸಮಿತಿ ಪ್ರದಾನ ಕಾರ್ಯದರ್ಶಿ ಶಂಕರಪ್ಪ ಘಟ್ಟಿ ಸ್ವಾಗತಿಸಿದರು. ವಿ.ಎನ್. ಕೀರ್ತಿವತಿ ಹಾಗೂ ಎ.ಎಚ್. ನದಾಫ್ ನಿರೂಪಿಸಿದರು. ಅಭಿನಂದನಾ ಸಮಿತಿ ಕೋಶಾಧ್ಯಕ್ಷ ಕಾಶಪ್ಪ ದೊಡವಾಡ ವಂದಿಸಿದರು.

ಸಾಕ್ಷ್ಯಚಿತ್ರ ಪ್ರದರ್ಶನ: ಸಮಾರಂಭಕ್ಕೂ ಮೊದಲು ಗುರು ತಿಗಡಿ ಅವರನ್ನು ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು. ಶಿವಾನಂದ ಹೂಗಾರ, ರಾಜು ಲಕ್ಕಮ್ಮನವರ, ಶಿವಾನಂದ ಬಡಿಗೇರ ಹಾಗೂ ಅಕ್ಸಾ ಮುಲ್ಲಾ ಅವರು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಅಕ್ಸಾ ಮುಲ್ಲಾ ಹಾಡಿದ ಗುರು ತಿಗಡಿಯವರ ಕುರಿತು ಉಪ್ಪಿನ ಗುರುಗಳು ರಚಿಸಿದ ಗೀತೆ ಗಮನ ಸೆಳೆಯಿತು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group