- Advertisement -
ಮೂಡಲಗಿ: ಪಟ್ಟಣದ ಕೆ.ಎಚ್.ಸೋನವಾಲಕರ ಸರಕಾರಿ ಪ್ರೌಢ ಶಾಲೆಯ ಸನ್.೨೦೦೧-೦೨ನೇ ಸಾಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮ ರವಿವಾರ ಜ.೨೮ ರಂದು ಮುಂಜಾನೆ ೯ ಗಂಟೆಗೆ ಪಟ್ಟಣದ ಎಸ್.ಆರ್.ಬಿ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.
ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ನಿವೃತ್ತ ಮುಖ್ಯೋಪಾಧ್ಯಾಯ ಎ.ಎಲ್.ನಿಲೋಪಂತ, ನಿವೃತ್ತ ಶಿಕ್ಷಕ ಸಿ.ಎಸ್.ಮೇಗಲಮನಿ, ಉಪನ್ಯಾಸಕರಾದ ಪಿ.ಎಲ್.ಕಾತರಕಿ, ಎನ್.ಟಿ.ಕಾಖಂಡಕಿ, ಆರ್.ಎಮ್.ಬಿರಾದಾರ, ಬಿ.ಆರ್.ಶೆಗುಣಸಿ, ಶ್ರೀಮತಿ ಎಸ್.ಡಿ.ಹುಣಶ್ಯಾಳ, ದೈಹಿಕ ಶಿಕ್ಷಕ ಎಸ್.ಎಫ್.ಕಡಾಡಿ ಮತ್ತು ಸಾಂವಕ್ಕ ಗಾಡಿವಡ್ಡರ, ಮುಖ್ಯೋಪಾಧ್ಯಾಯ ಮಹೇಂದ್ರ ವಾಟಕರ್ ಅವರು ಸತ್ಕಾರ ಮೂರ್ತಿಗಳಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಬಾಗಲಕೋಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಹಾಲಿ ಮತ್ತು ಮಾಜಿ ಸೈನಿಕರು ಭಾಗವಹಿಸುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.