ಹಜ್ ಯಾತ್ರೆ ಮುಸ್ಲಿಮ್ ಧರ್ಮದ ಪವಿತ್ರ ಕರ್ತವ್ಯ – ಆನಂದ ಭೂಸನೂರ

0
156

ಸಿಂದಗಿ: ಇಸ್ಲಾಂ ಎಂದರೆ ಶಾಂತಿ ಆ ಧರ್ಮದ ಕರ್ತವ್ಯಗಳಲ್ಲಿ ಹಜ್ ಯಾತ್ರೆ ಕೈಗೊಳ್ಳುವುದು ಪವಿತ್ರ ಕಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಘಟಕದ ಅಧ್ಯಕ್ಷ ಆನಂದ ಭೂಸನೂರ ಹೇಳಿದರು.

ನಗರದ ವಿಶ್ರಾಂತ ಶಿಕ್ಷಕ ಯು ಆಯ್ ಶೇಖ ಸರ್ ಅವರು “ಹಜ್ ಯಾತ್ರೆ” ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ನಿಮಿತ್ತವಾಗಿ ಅವರಿಗೆ ಶಿಕ್ಷಕರ ಸಂಘದ ಪರವಾಗಿ ಆತ್ಮೀಯವಾಗಿ ಗೌರವಿಸಿ ಮಾತನಾಡಿ, ಪ್ರತಿಯೊಬ್ಬ ಮುಸ್ಲಿಂ ಭಕ್ತಾಧಿಯು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಸಹ ಹಜ್ ಯಾತ್ರೆಯನ್ನು ಕೈಗೊಳ್ಳುವ ಅಭಿಲಾಷೆಯನ್ನು ಹೊಂದಿರುವದು ಉತ್ತಮ ವಿಚಾರವಾಗಿದೆ .ನಾವು ದಾನ ಧರ್ಮ ಪರೋಪಕಾರ ಮಾಡುವ ಗುಣಗಳು ಜೀವನದಲ್ಲಿ ರೂಡಿಸಿ ಕೊಂಡು   ಪ್ರಬುದ್ಧ ಮುಸ್ಲಿಂ ವ್ಯಕ್ತಿಯು ಹಜ್ ಯಾತ್ರೆ ಕೈಗೊಳ್ಳುವುದು ಉತ್ತಮ ವಿಚಾರವಾಗಿದೆ ಎಂದರು.

ದೇವರಹಿಪ್ಪರಗಿ ಪ್ರಾ ಶಾ ಶಿ ಸಂಘದ ಅಧ್ಯಕ್ಷ ಎ.ಎಚ್ .ವಾಲಿಕಾರ ಹಾಗೂ ಶಿಕ್ಷಕ ಡಿ.ಎಂ.ಮಾಹೂರ ಮಾತನಾಡಿ, ಹಜ್ ಯಾತ್ರೆಯು ಅತ್ಯಂತ ಪ್ರಮುಖವಾಗಿರುವುದರಿಂದ  ಪ್ರತಿಯೊಬ್ಬ ವ್ಯಕ್ತಿಗೆ ಜೀವಮಾನದಲ್ಲಿ ಒಮ್ಮೆಯಾದರೂ ಈ ಪವಿತ್ರ ಕಾರ್ಯವನ್ನು ತಪ್ಪದೆ ನೋಡುವುದು ಅತ್ಯವಶ್ಯಕ ಎಂದು ತಿಳಿಸಿದರು.

ಸನ್ಮಾನ  ಸ್ವೀಕರಿಸಿದ ವಿಶ್ರಾಂತ ಮುಖ್ಯ ಶಿಕ್ಷಕ  ಯು ಆಯ್ ಶೇಖ ಮಾತನಾಡಿ, ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜೀವನದರ್ಶನಕ್ಕೆ ಹೊಂದಿಕೊಂಡಿರುವಂಥ ಈ ಹಜ್ ಯಾತ್ರೆಯ ಹಿನ್ನೆಲೆಯು ಪವಿತ್ರ ಯಾತ್ರಾ ಸ್ಥಳಗಳಾದ ಮಕ್ಕಾ-ಮದೀನ ನಗರಗಳ ದರ್ಶನ ಪಡೆಯುವ ಸತ್‍ಸಂಪ್ರದಾಯವು ಅತ್ಯಂತ ಪುರಾತನವಾಗಿದ್ದು, ಪ್ರವಾದಿವರ್ಯರ ಕಾಲದಿಂದಲೂ ಈ ಪುಣ್ಯ ಕ್ಷೇತ್ರಗಳ ದರ್ಶನವನ್ನು ಪಡೆಯುವ ಆಚರಣೆಯನ್ನು ನಡೆಸಿಕೊಂಡು ಬಂದಿರುತ್ತಾರೆ ಎಂಬುದನ್ನು ತಿಳಿಸಲು ಹೆಮ್ಮೆಯೆನಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಎಲ್ .ಎಸ್. ಸೊನ್ನ.ಬಸವರಾಜ ಸೋಮಪೂರ.ಬಸವರಾಜ ಬಾಗೇವಾಡಿ. ರಾಯಪ್ಪ ಇವಣಗಿ ಇದ್ದರು.