How to loose weight in Kannada
ಸಾಮಾನ್ಯವಾಗಿ ದೇಹದ ತೂಕ ಹೆಚ್ಚಾದರೆ ನಾವು ನಾವು ಹಲವಾರು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಇನ್ನೂ ದೇಹದ ತೂಕವನ್ನು ಕಡಿಮೆ ಮಾಡಬೇಕು ಎಂಬ ಕಾರಣದಿಂದ ನಾವು ಸೇವಿಸುವ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ ಡಯಟ್ ಅನ್ನು ಅನುಸರಿಸುತ್ತೇವೆ ಅಥವಾ ನಾವು ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಅಥವಾ ಇನ್ನಿತರ ಅಡ್ಡಪರಿಣಾಮಗಳನ್ನು ಬೀರುವಂತಹ ಮಾತ್ರೆಗಳನ್ನು ಅಥವಾ ಮೆಡಿಸಿನ್ ಗಳನ್ನು ತೆಗೆದುಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತೇವೆ ಇವೆಲ್ಲವೂ ಕೂಡ ನಿಷ್ಪ್ರಯೋಜಕವಾಗುತ್ತದೆ. ಹಾಗಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ನಾವು ಎಷ್ಟೇ ದೇಹದ ತೂಕವನ್ನು ಹೊಂದಿದ್ದರೂ ಕೂಡ ಅಥವಾ ಎಷ್ಟೇ ಆಹಾರವನ್ನು ಸೇವಿಸಿದರೂ ಕೂಡ ಅದು ಕೊಬ್ಬಾಗಿ ಮಾರ್ಪಾಡು ಹೊಂದಬಾರದು ಎಂದರೆ ನಾವು ಪ್ರತಿ ನಿತ್ಯ ವ್ಯಾಯಾಮವನ್ನು ಮಾಡಬೇಕಾಗುತ್ತದೆ.
ವ್ಯಾಯಾಮಕ್ಕೆ ಮೊದಲ ಆದ್ಯತೆಯನ್ನು ನೀಡಬೇಕಾಗುತ್ತದೆ. ದಿನದಲ್ಲಿ 30 ರಿಂದ 45 ನಿಮಿಷವನ್ನು ನಾವು ವ್ಯಾಯಾಮಕ್ಕಾಗಿ ಮೀಸಲು ಇಟ್ಟರೆ ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಕೊಬ್ಬ ಸಂಗ್ರಹವಾಗುವುದಿಲ್ಲ ಹಾಗೂ ದೇಹದ ತೂಕ ಹೆಚ್ಚಾಗುವುದಿಲ್ಲ. ಇನ್ನೂ ಯಾವ ಮಾದರಿಯ ವ್ಯಾಯಾಮವನ್ನು ಮಾಡಿದರೆ ಅತಿ ಶೀಘ್ರವಾಗಿ ದೇಹದ ತೂಕವನ್ನು ಕಳೆದುಕೊಳ್ಳಬೇಕು ಯಾವ ವಿಧಾನವನ್ನು ಅನುಸರಿಸಬೇಕು ಎಷ್ಟು ದಿನಗಳವರೆಗೆ ಈ ಒಂದು ವ್ಯಾಯಾಮವನ್ನು ನಾವು ಮಾಡಬೇಕು ಇನ್ನೂ ಮುಂತಾದ ಮಾಹಿತಿಯನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಪ್ರಾರಂಭದಲ್ಲಿ ಇದು ನಿಮಗೆ ಕಷ್ಟ ಅನಿಸಬಹುದು ಆದರೆ ನಾಲ್ಕೈದು ದಿನಗಳು ಕಳೆದಂತೆ ಸುಲಭವಾಗುತ್ತದೆ.