ಭೂಮಿ ಪೂಜೆ ಮಾಡುವುದು ಹೇಗೆ? ಅದರ ಶುಭಫಲವೇನು?

Must Read

ಯಾವುದೇ ಕಟ್ಟಡ ಕಟ್ಟುವ ಮುನ್ನ ಭೂಮಿ ತಾಯಿಗೆ ಸಲ್ಲಿಸುವ ಪೂಜೆಯೇ ಭೂಮಿ ಪೂಜೆ. ಯಾವುದೇ ಕಟ್ಟಡ ನಿರ್ಮಾಣ ಮಾಡುವುದಕ್ಕಿಂತ ಮೊದಲು ಆ ನಿವೇಶವನ್ನು ಸ್ವಚ್ಛ ಮಾಡಲೇಬೇಕು. ಆ ಬಳಿಕ ಕ್ರಮಬದ್ಧವಾಗಿ ಭೂಮಿ ಪೂಜೆ ಮಾಡಿದರೆ ಶ್ರೇಯಸ್ಸು ಉಂಟಾಗುವುದು.

ಕಟ್ಟುವಾಗ ಯಾವುದೇ ದೋಷ ಉಂಟಾಗದಿರಲಿ, ಭೂತಾಯಿ ಕೆಲಸ ಸರಾಗವಾಗಿ ನಡೆಯುವಂತೆ ಆಶೀರ್ವದಿಸಲಿ ಎಂದು ಕೋರಿ ಭೂ ಮಾತೆಗೆ ಪೂಜೆ ಸಲ್ಲಿಸಲಾಗುವುದು.

ಭೂಮಿಯಲ್ಲಿ ಶಲ್ಯದೋಷವಿದ್ದರೆ ಅದರ ನಿವಾರಣೆಗೆ ಭೂ ಪೂಜೆ ಮಾಡಲಾಗುವುದು. ಭೂ ಮಾತೆಯಲ್ಲಿ ಅಂದರೆ ಭೂಮಿಯಲ್ಲಿ ವಿಲೀನವಾಗದ ಹದಿನಾರು ಬಗೆಯ ವಸ್ತುಗಳು ಉದಾಹರಣೆಗೆ ಮೂಳೆ, ಪ್ಲಾಸ್ಟಿಕ್, ಉಗುರು, ಕೂದಲು, ಬೂದಿ, ಗಾಜು ಇವುಗಳು ಭೂಮಿಯಲ್ಲಿದ್ದರೆ ಶಲ್ಯ ದೋಷ ಉಂಟಾಗುವುದು. ಈ ದೋಷ ಉಂಟಾಗದಿರಲು ಭೂಮಿ ಪೂಜೆ ಮಾಡಲಾಗುವುದು.

ಯಾವುದೇ ಕಟ್ಟಡ ನಿರ್ಮಿಸುವ ಮುನ್ನ ಭೂಮಿಪೂಜೆಯನ್ನು ಕಡಾಖಂಡಿತವಾಗಿ ಮಾಡಲೇಬೇಕು. ಯಾಕೆಂದರೆ ಭೂಮಿ ತಾಯಿಯ ಅಪ್ಪಣೆ ಇಲ್ಲದೇ, ಆ ತಾಯಿಗೆ ಪೂಜೆ, ಸಂಕಲ್ಪ ಇಲ್ಲದೆ ನಾವು ಭೂಮಿಯ ಮೇಲೆ ಯಾವುದೇ ಕಟ್ಟಡ ನಿರ್ಮಿಸಬಾರದು.

ಭೂಮಿ ಪೂಜೆಯನ್ನು ವೈಶಾಖ, ಶ್ರಾವಣ, ಕಾರ್ತಿಕ ಮತ್ತು ಮಾಘ ಮಾಸದ ಶುಕ್ಲಪಕ್ಷದಲ್ಲಿ ಮಾಡಿದರೆ ತುಂಬಾ ಶ್ರೇಯಸ್ಕರ. ಯಾಕೆಂದರೆ ಈ ಸಮಯದಲ್ಲಿ ವಾಸ್ತು ಪುರುಷ ರಾಜಯೋಗದಲ್ಲಿ ಇರುತ್ತಾನೆ. ಅಂದರೆ ರಾಜನಾಗಿ ರಾಜಭಾರ ಮಾಡುವವನಾಗಿರುತ್ತಾನೆ. ಇಂಥ ಸಮಯದಲ್ಲಿ ಕಟ್ಟಡದ ಕೆಲಸ ಪ್ರಾರಂಭಿಸುವುದರಿಂದ ಸಕಲ ರೀತಿಯ ಶುಭಫಲಗಳು ಸಿಗುತ್ತವೆ. ಭೂಮಿ ಪೂಜೆಗೆ ಮುನ್ನ ಆ ನಿವೇಶನಕ್ಕೆ ಸಂಬಂಧಿಸಿದಂತೆ ಬಹುಮುಖ್ಯವಾದ ಕಾರ್ಯವನ್ನು ಮಾಡಬೇಕಾಗುತ್ತದೆ. ಅದೇ ನಿವೇಶನದ ಸ್ವಚ್ಛತೆ. ನಿವೇಶನದ ಸ್ವಚ್ಛತೆಯ ವಿಚಾರದಲ್ಲಿ ಜನಸಾಮಾನ್ಯರಿಗೆ ಸುಮಾರು ಗೊಂದಲಗಳಿವೆ. ಅವುಗಳನ್ನು ಈ ರೀತಿ ಮಾಡಬೇಕು.

ಹೊಸ ಲೇಔಟ್ ಆದರೆ ಅಂಥ ನಿವೇಶನದಲ್ಲಿ ಸಣ್ಣ ಪುಟ್ಟ ಗಿಡ-ಗಂಟಿಗಳು ಇರುತ್ತವೆ. ಅವುಗಳನ್ನು ತೆಗೆದು ಹಾಕಿ, ಭೂಮಿಪೂಜೆ ಮಾಡಬಹುದು. ಆದರೆ ಹಳೆಯ ನಿವೇಶನವಾದರೆ ಸುತ್ತಮುತ್ತಲಿನವರು ಅಲ್ಲಿ ಕಸ ಎಸೆದಿರುವುದರಿಂದ ತುಂಬಾ ಎಚ್ಚರಿಕೆಯಿಂದ ಸ್ವಚ್ಛತೆ ಮಾಡಬೇಕು. ಇಂಥ ನಿವೇಶನದಲ್ಲಿ ‘ಶಲ್ಯ ದೋಷ’ ಇರುತ್ತದೆ. ಭೂಮಿಯೊಡತಿ (ಅಂದರೆ ಮಣ್ಣಿನೊಂದಿಗೆ) ವಿಲೀನವಾಗದ ಹದಿನಾರು ರೀತಿಯ ವಸ್ತುಗಳು ಆ ನಿವೇಶನದಲ್ಲಿದ್ದರೆ ಆ ನಿವೇಶನದಲ್ಲಿ ‘ಶಲ್ಯ ದೋಷ’ ಇರುತ್ತದೆ ಎಂದು ತಿಳಿಯಬಹುದು. ಉದಾಹರಣೆಗೆ ಮೂಳೆ, ಪ್ಲಾಸ್ಟಿಕ್, ಉಗುರು, ಕೂದಲು, ಬೂದಿ, ಗಾಜು ಇತ್ಯಾದಿಗಳು.

ಈ ಶಲ್ಯ ದೋಷಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಪೂರ್ಣವಾಗಿ ತೆಗೆದು ನಂತರ ಮುಂದಿನ ಕಾರ್ಯಗಳನ್ನು ಮಾಡುವುದು ಶಾಸ್ತ್ರ ಸಮ್ಮತವಾದದ್ದು. ಭೂಮಿಯಿಂದ ಎಂಟು ಅಡಿಗಳಷ್ಟು ಆಳ ತೆಗೆಯುವುದರಿಂದ ಯಾವುದೇ ರೀತಿಯ ಶಲ್ಯ ದೋಷ ಉಂಟಾಗುವುದಿಲ್ಲ. ಕನಿಷ್ಠ ಪಕ್ಷ 2 ರಿಂದ 3 ಅಡಿಗಳಷ್ಟು ಆಳವಾದರೂ ಆ ನಿವೇಶನದ ಮಣ್ಣನ್ನು ತೆಗೆದು ಹೊರಹಾಕಿ, ಶುದ್ಧವಾದ ಮಣ್ಣನ್ನು ತುಂಬಿಸಿ ಭೂಮಿ ಪೂಜೆಯನ್ನು ಪ್ರಾರಂಭಿಸುವುದು ಸೂಕ್ತ.

ಭೂಮಿ ಪೂಜೆಯನ್ನು ಎಲ್ಲಿ ಮಾಡಲಾಗುವುದು?

ಭೂಮಿ ಪೂಜೆಯ ಮುಹೂರ್ತದ ದಿನ ಆ ನಿವೇಶನವನ್ನು ಗೋಮೂತ್ರ, ಪರ್ವಶುದ್ಧಿ ಮತ್ತು ಅರಿಶಿನದ ನೀರಿನಿಂದ ಶುದ್ಧಿ ಮಾಡಿಕೊಳ್ಳಬೇಕು. ನಂತರದಲ್ಲಿ ನಿವೇಶನದ ಈಶಾನ್ಯ ಭಾಗದಲ್ಲಿ ಭೂಮಿಗೆ ಪೂಜೆ ಮತ್ತು ನಿವೇಶನದ ಬ್ರಹ್ಮಸ್ಥಾನದಲ್ಲಿ ಶಂಖುಸ್ಥಾಪನೆ ಒಂದೇ ಮುಹೂರ್ತದಲ್ಲಿ ನೆರವೇರಬೇಕು.

ಈಶಾನ್ಯ ಭಾಗದಲ್ಲಿ ಸ್ಥಳ ಶುದ್ಧಿ ಮಾಡಿ, ರಂಗೋಲಿಯಿಂದ ಅಲಂಕರಿಸಿ, ಆ ಸ್ಥಳದಲ್ಲಿ ಐದು ಹೊಸ ಸೈಜ್ ಕಲ್ಲನ್ನು ಒಂದರ ಪಕ್ಕ ಒಂದರಂತೆ ಜೋಡಿಸಿ, ವಿಘ್ನೇಶ್ವರ ಮತ್ತು ಮನೆಯ ದೇವರ ಫೋಟೋವನ್ನಿಟ್ಟು ದೀಪ ಬೆಳಗಿಸಿ ಪೂಜಿಸಬೇಕು. ನಂತರದಲ್ಲಿ ಕಲ್ಲಿನ ಈಶಾನ್ಯ ಭಾಗದಲ್ಲಿ ಮನೆಯ ಯಜಮಾನ ಮನೆ ದೇವರು, ಭೂಮಿತಾಯಿ ಮತ್ತು ಇಷ್ಟ ದೇವರನ್ನು ನೆನೆದು, ಸಂಕಲ್ಪ ಮಾಡಿಕೊಂಡು ಪೂರ್ವಾಭಿಮುಖವಾಗಿ ನಿಂತು ಆ ಜಾಗದಲ್ಲಿ ಗುದ್ದಲಿಯಿಂದ ಅಗೆದು ಭೂಮಿಯಿಂದ ಮಣ್ಣನ್ನು ತೆಗೆದು ಹೊರಹಾಕಬೇಕು.

ನಂತರ ಆ ಜಾಗಕ್ಕೆ ಗೋಮೂತ್ರ ಪ್ರೋಕ್ಷಣೆ ಮಾಡಿ, ಪಂಚಾಭಿಷೇಕವನ್ನು ಮಾಡಿ, ಬಂಗಾರ, ಬೆಳ್ಳಿ, ತಾಮ್ರ, ಮುತ್ತು, ಹವಳ ಹಾಕಿ ಪೂಜಿಸಬೇಕು. ಬಳಿಕ ಬ್ರಹ್ಮಸ್ಥಾನದಲ್ಲಿ ಶಂಖುವನ್ನು ಸ್ಥಾಪನೆ ಮಾಡಬೇಕು. ಬ್ರಹ್ಮಸ್ಥಾನದಲ್ಲಿ ಮೊದಲೇ 18 ಇಂಚು ಆಳದ ಛೇಂಬರನ್ನು ಮಾಡಿರಬೇಕು. ಆ ಸ್ಥಳದಲ್ಲಿ ಪೂಜಾ ಸಾಮಗ್ರಿಗಳನ್ನು ಜೋಡಿಸಿ ಪೂರ್ವಾಭಿಮುಖವಾಗಿ ಕುಳಿತು, ಶಂಖುವನ್ನು ದಂಪತಿಗಳಿಬ್ಬರ ಕೈಯಿಂದ ಅಭಿಷೇಕ ಮಾಡಿ ಆ 18 ಇಂಚುಗಳ ಛೇಂಬರ್‌ನಲ್ಲಿ ನಿಲ್ಲಿಸಿ ಪೂಜಿಸಬೇಕು.

ಆ ಶಂಖುವಿನ ಕೆಳಗಡೆ ಬಂಗಾರ, ಬೆಳ್ಳಿ, ತಾಮ್ರ, ಮುತ್ತು ಮತ್ತು ಹವಳ ಹಾಕುವುದು ಶ್ರೇಯಸ್ಕರವಾದುದು. ಇದಾದ ಮೇಲೆ ಆ ಶಂಖುವಿನ ಮೇಲೆ 9 ಇಂಚು ಉದ್ದ, ಅಗಲದ ಪಿರಮಿಡ್ ಅನ್ನು ಸ್ಥಾಪಿಸಬೇಕು. ಇದರ ಮೇಲೆ ಗ್ರಾನೈಟ್ ಸ್ಲಾಬ್ ಹಾಕಿ ಮುಚ್ಚಬೇಕು. ಭೂಮಿಗೆ ಪೂಜೆ ಮತ್ತು ಶಂಖು ಸ್ಥಾಪನೆಯ ನಂತರ ಮಹಾಮಂಗಳಾರತಿ, ದೃಷ್ಟಿ ನಿವಾರಣೆ ಮಾಡಿದರೆ ಭೂಮಿ ಪೂಜೆ ಪೂರ್ಣಗೊಳ್ಳುತ್ತದೆ. ಭೂಮಿ ಪೂಜೆಯನ್ನು ಮುಗಿಸಿದ ನಂತರ ಈಶಾನ್ಯ ಮೂಲೆಯಲ್ಲಿ ಸಂಪು, ಬೋರ್‌ವೆಲ್ ಮತ್ತು ಬಾವಿಯನ್ನು ತೆಗೆಯುವ ಕಾರ್ಯ ಆರಂಭಿಸುವುದರಿಂದ ಕಟ್ಟಡದ ಕೆಲಸ ಶುರು ಮಾಡಬಹುದು.

ಭೂಮಿ ಪೂಜೆಯಲ್ಲಿ ಯಾವೆಲ್ಲಾ ದೇವರಿಗೆ ಪೂಜೆ ಸಲ್ಲಿಸಬೇಕು?

‌ಭೂಮಿ ಪೂಜೆಯನ್ನು ವಾಸ್ತು ಪುರುಷ, ಭೂಮಾತೆ, ಪಂಚ ಭೂತಗಳಿಗೆ ಸಲ್ಲಿಸಲಾಗುವುದು. ಈ ಪೂಜೆ ಮಾಡುವುದರಿಂದ ಇರುವ ಸಕಲ ಅಡ್ಡಿ ಆತಂಕಗಳು ದೂರವಾಗಿ ಕಟ್ಟಡ ಕೆಲಸ ಸರಾಗವಾಗಿ ಸಾಗುವುದು ಎಂಬ ನಂಬಿಕೆ ಇದೆ.

ಭೂಮಿ ತೆಗೆದುಕೊಂಡ ಬಳಿಕ ಮೊದಲು ಏನು ಮಾಡಬೇಕು?

ಮೊದಲಿಗೆ ಕಾಂಪೌಂಡ್ ಕಟ್ಟಿ:

ಜಾಗ ತೆಗೆದುಕೊಂಡ ಬಳಿಕ ಮನೆ ಕಟ್ಟುವ ಮುನ್ನ ಕಾಪೌಂಡ್‌ ಕಟ್ಟಬೇಕು. ಅದರಲ್ಲೂ ದಕ್ಷಿಣ ಭಾಗದ ಕಾಂಪೌಂಡ್ ಇತರ ಭಾಗಗಳಿಗಿಂತ ಎತ್ತರವಾಗಿರಬೇಕು. ಪಶ್ಚಿಮ, ದಕ್ಷಿಣ ಭಾಗದ ಗೋಡೆಗಳು ಉತ್ತರ, ಪೂರ್ವ ಭಾಗದ ಗೋಡೆಗಳಿಗಿಂತ ತಗ್ಗಿರಬೇಕು.

ನಂತರ ಕಟ್ಟಡ ಕಟ್ಟುವ ಜಾಗದಲ್ಲಿ ಗಿಡವನ್ನು ನೆಡಿ:

ಜಾಗದಲ್ಲಿ ಕರು ಮತ್ತು ಹಸು ಇದ್ದರೆ ಆ ಜಾಗಕ್ಕೆ ಅದೃಷ್ಟ ಎನ್ನಲಾಗುವುದು.

ಭೂಮಿ ಪೂಜೆ: ವ್ಯಕ್ತಿಯ ಬದುಕಿನಲ್ಲಿ ಸಂತೋಷ, ಸಮೃದ್ಧಿಗಾಗಿ ಭೂಮಿ ಪೂಜೆ ಮಾಡಲಾಗುವುದು.

ಭೂಮಿ ಪೂಜೆ ಯಾರು ಮಾಡಬೇಕು?

ಭೂಮಿ ಪೂಜೆಯನ್ನು ಮನೆಯ ಯಜಮಾನ ಧರ್ಮಪತ್ನಿ ಜೊತೆಯಾಗಿ ಮಾಡಬೇಕು. ಎಲ್ಲಾ ಋಣಾತ್ಮಕ ಶಕ್ತಿ ದೂರವಾಗಲಿ, ಕೆಲಸಗಳು ಯಾವುದೇ ವಿಘ್ನವಿಲ್ಲದೆ ನೆರವೇರಲಿ ಎಂಬ ಉದ್ದೇಶದಿಂದ ಮಾಡಲಾಗುವುದು. ಜಾಗ ಕೃಷಿಗೆ ಸಂಬಂಧಿಸಿದ್ದಾರೆ ಭೂಮಿ ಚೆನ್ನಾಗಿ ಫಲ ನೀಡಲಿ ಎಂದು ಪ್ರಾರ್ಥಿಸಿ ಭೂಮಿ ಪೂಜೆ ಮಾಡಲಾಗುವುದು.

ಯಾವಾಗ ಭೂಮಿ ಪೂಜೆಗೆ ಸೂಕ್ತ ಸಮಯ?

ಶ್ರಾವಣ, ಮಾರ್ಗಶಿರ, ಕಾರ್ತಿಕ, ಮಾಘ ಮಾಸಗಳು ಭೂಮಿ ಪೂಜೆಗೆ ಸೂಕ್ತವಾಗಿದೆ. ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಭೂಮಿ ಮಾಡಲು ಸೂಕ್ತ ದಿನಗಳಾಗಿವೆ. ಈ ದಿನಗಳಲ್ಲಿ ಕೂಡ ಜ್ಯೋತಿಷ್ಯರಿಂದ ಶುಭ ಮುಹೂರ್ತ ಪಡೆದು ಪ್ರಾರಂಭ ಮಾಡಬೇಕು. ಭಾನುವಾರ, ಶನಿವಾರ, ಮಂಗಳವಾರ ಭೂಮಿ ಪೂಜೆ ಮಾಡಲೇಬಾರದು. ಮನೆಯಲ್ಲಿ ಯಾರಾದರೂ ಗರ್ಭಿಣಿಯಿದ್ದರೆ ಕಟ್ಟಡ ಕಟ್ಟುವ ಕೆಲಸಕ್ಕೆ ಕೈ ಹಾಕಬಾರದು.

ಭೂಮಿ ಪೂಜೆ ಮಾಡುವಾಗ ಪಾಲಿಸುವ ವಿಧಾನಗಳು:

  • ಜಾಗವನ್ನು ಸ್ವಚ್ಛಮಾಡಬೇಕು.
  • ನಂತರ ಈಶಾನ್ಯ ದಿಕ್ಕಿಗೆ ಭೂಮಿಯನ್ನು ಅಗೆಯಬೇಕು.
  • ಮನೆಯ ಯಜಮಾನ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು.
  • ಪೂಜೆಯಲ್ಲಿ ಗಣೇಶ, ಲಕ್ಷ್ಮಿ ಮೂರ್ತಿಯನ್ನು ಇಟ್ಟು ಪೂಜಿಸಲಾಗುವುದು.
  • ಪೂಜೆ ಬಳಿಕ ಜಾಗದ ನಾಲ್ಕು ದಿಕ್ಕಿನಲ್ಲಿ ಹಾಗೂ ಮಧ್ಯ ಭಾಗದಲ್ಲಿ ನಿಂಬೆಹಣ್ಣು ಇಟ್ಟು ದೃಷ್ಟಿ ನಿವಾಳಿಸಬೇಕು.
  • ಪೂಜೆಯಲ್ಲಿ ಗಣೇಶನಿಗೆ ಮೊದಲು ಪೂಜೆ ಸಲ್ಲಿಸಲಾಗುವುದು, ನಂತರ ದೇವಿ ಪೂಜೆ ಮಾಡಿ ಸಂಕಲ್ಪ ಕೈಗೊಳ್ಳಬೇಕು, ನಂತರ ಸತ್ಕರ್ಮ, ಪ್ರಾಣ ಪ್ರತಿಷ್ಠಾಪನೆ ಮಾಡಿ ಮಂಗಳಕರ ದ್ರವ್ಯ ಸಿಂಪಡಿಸಲಾಗುವುದು.

ಭೂಮಿ ಪೂಜೆಗೆ ಬೇಕಾಗುವ ಸಾಮಗ್ರಿಗಳು:

  •  ಅರಿಶಿಣ
  • ಕುಂಕುಮ
  • ಚಂದನ
  • ಗಂಧದ ಕಡ್ಡಿ
  • ಕರ್ಪೂರ
  • ಹೂವುಗಳು
  • ತೆಂಗಿನಕಾಯಿ
  • ಕಳಸ ವಸ್ತ್ರಂ
  • ಅಕ್ಕಿ
  • ನಾಣ್ಯಗಳು
  • ತುಪ್ಪ
  • ಕಲ್ಲು ಸಕ್ಕರೆ
  • ನವಧಾನ್ಯಗಳು
  • ನೈವೇದ್ಯ

🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group