ದೇಶ ಸ್ವತಂತ್ರ ದಿವಸ ಆಚರಣೆ ಮಾಡುತ್ತಿದ್ದರೆ ಕಲ್ಯಾಣ ಕರ್ನಾಟಕದಲ್ಲಿ ರಕ್ತದೋಕುಳಿ ಹರಿಸಿದರು ರಜಾಕಾರರು !

0
726

Special story of Bidar district

ರಜಾಕಾರರ ಹಾವಳಿಗೆ ತತ್ತರಿಸಿ ಹೋಗಿದ್ದ ಗೋರ್ಟಾ ಗ್ರಾಮಸ್ಥರಿಗೆ ಡುಮಣೆ ಸಾಹುಕಾರರ ಮನೆಯೇ ಆಶ್ರಯ ತಾಣ

ಬೀದರ – ಇಡೀ ಭಾರತ ದೇಶ 1947 ಅಗಸ್ಟ್ 15 ರಂದು ವಿಜಯೋತ್ಸವದಲ್ಲಿ ತೊಡಗಿತ್ತು ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಸ್ವತಂತ್ರ ಸಿಕ್ಕಿರಲಿಲ್ಲ. ಹದಿಮೂರು ತಿಂಗಳ ನಂತರ ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿತು !

ಶನಿವಾರ ಕಲ್ಯಾಣ ಕರ್ನಾಟಕದಲ್ಲಿ ವಿಮೋಚನಾ ದಿನಾಚರಣೆ ಎಂದು ಸಂಭ್ರಮ ಸಡಗರ ಮನೆ ಮಾಡಿದೆ.ರಜಾಕಾರರ ಹಾವಳಿಗೆ ತತ್ತರಿಸಿ ಹೋಗಿದ್ದ ಗೋರ್ಟಾ ಗ್ರಾಮಸ್ಥರಿಗೆ ಅದೇ ಗ್ರಾಮದ ಡುಮಣೆ ಸಾಹುಕಾರರು ಆಶ್ರಯ ನೀಡಿದ್ದರು. ಈ ಕುರಿತು ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.

ಬ್ರಿಟಿಷರ ಕಪಿ ಮುಷ್ಠಿಯಿಂದ ಭಾರತ ದೇಶಕ್ಕೆ 1947ರ ಅಗಷ್ಟ 15 ರಂದು ಸ್ವಾತಂತ್ರ್ಯ ಸಿಕ್ಕಿತ್ತು,. ಇಡೀ ಭಾರತ ಸ್ವಾತಂತ್ರ್ಯ ಸಿಕ್ಕಿರುವ ಸಡಗರದಲ್ಲಿದ್ದರೇ ಇಂದಿನ ಕಲ್ಯಾಣ ಕರ್ನಾಟಕ ಅಂದಿನ ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದರು.

ಇಂದಿನ ಕಲ್ಯಾಣ ಕರ್ನಾಟಕ ಭಾಗ ಅಂದು ಹೈದ್ರಾಬಾದ್​ ನಿಜಾಮರ ಕಪಿಮುಷ್ಠಿಯಿಂದ ಹೊರಗಡೆ ಬರಲು 13 ತಿಂಗಳುಗಳ ಕಾಲ ನಿಜಾಮರ ಎದುರು ಹೋರಾಡಿ ರಕ್ತ ಹರಿಸಬೇಕಾಯಿತು,. ಬ್ರಿಟೀಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದ್ರಾಬಾದ್​ ನಿಜಾಮ ಕರ್ನಾಟಕದ ಏಳು ಜಿಲ್ಲೆಗಳು ತನ್ನ ಕಪ್ಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಇದರಿಂದ ಹೊರಗಡೆ ಬರಲು ಬೀದರ್ ಜಿಲ್ಲೆಯಲ್ಲಿ ನೂರಾರು ಜನ ಹುತಾತ್ಮರಾಗಿದ್ದರು ಇಡೀ ಭಾರತ ದೇಶ ತಿರಂಗಾ ಹಾರಿಸಿ ಸಂಭ್ರಮಿಸುತ್ತಿದ್ದರೆ ಬೀದರ್ ನಲ್ಲಿ ಮಾತ್ರ ಭಾರತ ಧ್ವಜ ಹಾರಿಸಿದ್ದವರನ್ನು ಹತ್ಯೆ ಮಾಡಲಾಗುತ್ತಿತ್ತು.

ನಿಜಾಮರ ಕಪಿ ಮುಷ್ಠಿಯಿಂದ ಹೈದರಾಬಾದ್ – ಕರ್ನಾಟಕ ಮುಕ್ತಿ ಪಡೆಯಲು 13 ತಿಂಗಳು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ಮಾಡಬೇಕಾಯಿತು. ಜಲಿಯನವಾಲಾ ಬಾಗ್ ಹತ್ಯಾಕಾಂಡದ ಮಾದರಿಯಲ್ಲೇ ದಕ್ಷಿಣ ಭಾರತದಲ್ಲಿ ಮತ್ತೊಂದು ಮಾರಣಹೋಮದಂತೆ ಗೋರ್ಟಾ ಎಂಬ ಗ್ರಾಮದ ಲಕ್ಷ್ಮಿ ದೇಗುಲ ಎದುರು ರಕ್ತದೋಕುಳಿ ಹರಿಸಿದ್ದರು ನಿಜಾಮರು.

ಹೌದು, ಮತ್ತೆ ನೆನಪಾಯ್ತು ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದೇ ಕರೆಯಲ್ಪಡುವ ಗೋರ್ಟಾ.

ಗ್ರಾಮದ ಡುಮಣೆ ಸಾಹುಕಾರ್ ಮನೆ ಹಾಗೂ ಶ್ರೀ ಲಕ್ಷ್ಮೀ ಮಂದಿರ ಹತ್ಯಾಕಾಂಡದ ಘನ ಸಾಕ್ಷಿಗಳು

ದೇಶವೇನೋ ಬ್ರಿಟಿಷರ ಪಾರುಪತ್ಯದಿಂದ ಮುಕ್ತಿಗೊಂಡಿತ್ತು. ಆದರೆ, ಕಲ್ಯಾಣ ಕರ್ನಾಟಕದ ಬಹುಭಾಗ ಇನ್ನೂ ಹೈದ್ರಾಬಾದ್ ನಿಜಾಮನ ಆಳ್ವಿಕೆಗೊಳಪಟ್ಟಿತ್ತು. ಆಗ ಒಳಗೊಳಗೆ ನಿಜಾಂನ ವಿರುದ್ದ ನಡೆಯುತ್ತಿರುವ ಹೋರಾಟದ ಭಾಗವಾಗಿ ಗೋರ್ಟಾ ಗ್ರಾಮದಲ್ಲಿ ಹೋರಾಟಗಾರರ ಹೆಡೆಮುರಿ ಕಟ್ಟಲು ನಿಜಾಂನ ರಜಾಕಾರರು ನಡೆಸಿದ ಸಾಮೂಹಿಕ ಹತ್ಯಾಕಾಂಡವೇ ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ.

1948 ರ ಮೇ ತಿಂಗಳಲ್ಲಿ ರಜಾಕಾರರ ಗ್ಯಾಂಗ್ ಗೋರ್ಟಾ ಗ್ರಾಮಕ್ಕೆ ದಾಳಿ ಇಡುತ್ತದೆ. ದಾಳಿಯಿಂದ ಬಚಾವಾಗಲು ಡುಮಣೆ ಸಾಹುಕಾರ ಮನೆಯೊಳಗೆ ಕನಿಷ್ಠ 2000 ಜನ ಅಡಗಿದ್ದರು. ಆಗ ಎರಡು ಕಡೆಯಿಂದ ದಂಗೆ ನಡೆದು ಕನಿಷ್ಟ 2೦೦ ಜನರ ಸಾಮೂಹಿಕ ಹತ್ಯಾಕಾಂಡ ನಡೆಯಿತು ಎನ್ನುತ್ತಾರೆ ಗ್ರಾಮದ ನಿವೃತ್ತ ಶಿಕ್ಷಕ ಸುಭಾಷ್ ಪತಂಗೆ.

ಆಗಿನ ಕೇಂದ್ರ ಗ್ರಹ ಸಚಿವ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ದೃಢ ನಿರ್ಧಾರದಿಂದ 1948ರ ಸಪ್ಟೆಂಬರ್ 17ರಂದು ನಿಜಾಮರು ಭಾರತದ ಸೈನಿಕರ ಎದುರು ಮಂಡಿಯೂರಿದ್ದರು,. ಸತತ 13 ತಿಂಗಳ ಹೋರಾಟದ ಫಲವಾಗಿ ತಡವಾಗಿ ಈ ಭಾಗಕ್ಕೆ ಸ್ವಾತಂತ್ರ್ಯ ದಕ್ಕಿತ್ತು,. ಆದರೆ ಆ ಹುತಾತ್ಮರಿಗೆ ನ್ಯಾಯ ಕೊಡಿಸುತ್ತೇವೆ ಅಂತ ಬಂದ ಬಿಜೆಪಿ ನಾಯಕರು ಕಾಣೆಯಾಗಿದ್ದಾರೆ.

ಸರ್ದಾರ ವಲ್ಲಭಭಾಯಿ ಪಟೇಲ್​ ಮೂರ್ತಿ, ಹುತಾತ್ಮರ ಸ್ಮಾರಕಗಳು ನಿರ್ಮಿಸುತ್ತೇವೆಂದು 2014ರ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯ ಗೋರ್ಟಾ ಗ್ರಾಮಕ್ಕೆ ಬಂದು ಸ್ಮಾರಕ ನಿರ್ಮಾಣ ಮಾಡಲು ಭೂಮಿ ಪೂಜೆ ಮಾಡಿದ್ದರು.

ಆದರೆ ಬಿಜೆಪಿ ನಾಯಕರ ಒಳ ಜಗಳದಿಂದ ಸ್ಮಾರಕ ಕಾರ್ಯ ಅರ್ದಕ್ಕೆ ನಿಂತಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದವರಿಗೆ ಅವಮಾನ ಮಾಡಿದಂತಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ