₹೧ ಕೋಟಿ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಬೀದರ ಅಬಕಾರಿ ಇಲಾಖೆ

Must Read

ಬೀದರ :- ಪರವಾನಗಿ ಇಲ್ಲದೆ ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹೧.೦೧ ಕೋಟಿ ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಮೇಲಿನ ಮೊಳಕೇರಾ ಗ್ರಾಮದಲ್ಲಿ ಜಪ್ತಿ ಮಾಡಿ ಒಬ್ಬ ಆರೋಪಿಯ ಬಂಧನ ಮಾಡಿದ್ದಾರೆ

ವಾಹನ ಚಾಲಕ ಉತ್ತರ ಪ್ರದೇಶ ಮೂಲದ ಮನೋಜ್‌ಕುಮಾರ್ (49) ಬಂಧಿತ ಆರೋಪಿ. ಐಷರ್ ವಾಹನದಲ್ಲಿದ್ದ ಸುಮಾರು 860 ಪೆಟ್ಟಿಗೆಗಳಲ್ಲಿ 1485 ಲೀಟರ್ ವೈನ್ ಹಾಗೂ 6225 ಲೀಟರ್ ಮದ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ

ಅಬಕಾರಿ ಪೊಲೀಸ್‌ ಅಧಿಕಾರಿಗಳು ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುವಾಗ ಅಕ್ರಮ ಮದ್ಯ ಪತ್ತೆ ಆಗಿದೆ. ಮದ್ಯವನ್ನು ಮಹಾರಾಷ್ಟ್ರದ ಠಾಣೆಯಿಂದ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಗೆ ಸಾಗಿಸಲಾಗುತ್ತಿತ್ತು. ತಪಾಸಣೆ ವೇಳೆ ಅಬಕಾರಿ ಜಿಲ್ಲಾ ಅಧಿಕಾರಿ ರವಿಶಂಕರ್, ಡಿವೈಎಸ್ಪಿ ಆನಂದ ಓಕಳಿ ಸರಿದಂತೆ ಅಬಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು

ನಮ್ಮ ಅಬಕಾರಿ ಕಾಯ್ದೆಯ ಪರವಾನಿಗೆ ಹಾಗೂ ರಹದಾರಿ ಪತ್ರಗಳು ಇಲ್ಲದ ಕಾರಣ ಈ ಅಬಕಾರಿ ಸಾಗಣೆಯ ಮೇಲೆ ಅನುಮಾನ ಬಂದಿದ್ದರಿಂದಾಗಿ ಗಾಡಿಯನ್ನು ತಡೆದು ಚಾಲಕ ಮತ್ತು ಟ್ರಾನ್ಸ್ ಪೋರ್ಟರ್ ಮೇಲೆ ಕೇಸು ದಾಖಲಿಸಿದ್ದೇವೆ. ಈ ಮದ್ಯದ ಒಟ್ಟು ಮೊತ್ತ ೧.೦೧ ಕೋಟಿಯಾಗುತ್ತದೆ

           -ಅಬಕಾರಿ ಜಿಲ್ಲಾ ಅಧಿಕಾರಿ ರವಿಶಂಕರ

ವರದಿ : ನಂದಕುಮಾರ ಕರಂಜೆ, ಬೀದರ

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group