- Advertisement -
ಬೀದರ – ಬೀದರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಭರ್ಜರಿ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೊಬ್ಬರಿ ೧೬ ಲಕ್ಷ ಮೌಲ್ಯದ ಶ್ರೀಗಂಧವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ ಬಂಗ್ಲಾ ಬಳಿ ಈ ಘಟನಡ ನಡೆದಿದ್ದು ಈ ಸಂಬಂಧ ತೆಲಂಗಾಣ ಮೂಲದ ಪಿ ಕೆ ಬದ್ರುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ.
ಗೂಡ್ಸ್ ವಾಹನದಲ್ಲಿ ಮುಂಬೈ ನಗರಕ್ಕೆ ಅಕ್ರಮವಾಗಿ ರಕ್ತಚಂದನವನ್ನು ಸಾಗಿಸಲಾಗುತ್ತಿತ್ತು. ಗಾಡಿಯ ತಳದ ಇನ್ನೊಂದು ಪದರಿನಲ್ಲಿ ಶ್ರೀಗಂಧದ ತುಣುಕುಗಳನ್ನು ಇಟ್ಟುಕೊಂಡು ಸಾಗಿಸುತ್ತಿದ್ದ ವಾಹನವನ್ನು ಪರಿಶೀಲಿಸಿದಾಗ ಸುಮಾರು ೧೬ ಲಕ್ಷ ಮೌಲ್ಯದ ಶ್ರೀಗಂಧ ಸಿಕ್ಕಿದೆ.
ವಾಹನ ಹಾಗು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ