spot_img
spot_img

ಜೀವನದಲ್ಲಿ ಅಮೂಲ್ಯ ಪಾತ್ರ ವಹಿಸುವ ‘ಸ್ನೇಹಿತ’

Must Read

- Advertisement -

ಸ್ನೇಹಕ್ಕೆ ಒಂದು ದಿನಾಚರಣೆ ಆಧುನಿಕ ಯುಗದಲ್ಲಿ ಜನಪ್ರಿಯವಾಗಿದೆ. ಸ್ನೇಹಿತರಿಗೆ ಒಂದು ಶುಭಾಶಯ ಹೇಳಲು ಈ ದಿನ ಮೀಸಲು. ಅಮೆರಿಕದಲ್ಲಿ 1935 ರಲ್ಲಿ ‘ಫ್ರೆಂಡ್‌ಶಿಪ್‌ ಡೇ’ ಆಚರಿಸಲಾಯಿತು. ನಂತರ ವಿಶ್ವದಾದ್ಯಂತ ಇದು ಪ್ರಚಾರವಾಯಿತು.

ಒಟ್ಟಿನಲ್ಲಿ, ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರ (ಈ ವರ್ಷ- ಆಗಸ್ಟ್ 4, 2024) ಆಚರಣೆ ಮಾಡಲಾಗುತ್ತದೆ.

ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತನು ಅತ್ಯಂತ ಅಮೂಲ್ಯವಾದ ಪಾತ್ರವನ್ನು ವಹಿಸುತ್ತಾನೆ. ಅಂತಹ ಒಂದು ಸುಂದರ ಬಂಧಕ್ಕೆ *ಸ್ನೇಹ ದಿನ* ಎಂಬ ವಿಶೇಷ ಆಚರಣೆಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್, 1935 ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು.

- Advertisement -

ಅಂದಿನಿಂದ ಸ್ನೇಹ ದಿನವು ವಾರ್ಷಿಕ ಕಾರ್ಯಕ್ರಮವಾಯಿತು. ಸ್ನೇಹ ದಿನವನ್ನು ಆಚರಿಸುವ ಯಶಸ್ಸು ಮತ್ತು ಜನಪ್ರಿಯತೆಯನ್ನು ನೋಡಿದ ನಂತರ ಹಲವಾರು ಇತರ ದೇಶಗಳು ಸಹ ಆಚರಿಸಲು ಪ್ರಾರಂಭಿಸಿದವು. ನಂತರದ ದಿನಗಳಲ್ಲಿ ಸ್ನೇಹ ದಿನವು ವಿಶ್ವಾದ್ಯಂತ ಜನಪ್ರಿಯವಾಯಿತು.

2011 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯದ ಪ್ರಕಾರ ಜನಾಂಗ, ಬಣ್ಣ, ಲಿಂಗ, ಧರ್ಮ ಇತ್ಯಾದಿಗಳನ್ನು ಲೆಕ್ಕಿಸದೆ ವಿವಿಧ ದೇಶಗಳ ಜನರ ಸ್ನೇಹಕ್ಕಾಗಿ ಬಲವಾದ ಸಂಬಂಧವನ್ನು ರೂಪಿಸುವ ಉದ್ದೇಶದಿಂದ ಜುಲೈ 30 ಅನ್ನು ಅಂತಾರಾಷ್ಟ್ರೀಯ ಸ್ನೇಹ ದಿನವಾಗಿ ಆಚರಿಸಲು ನಿರ್ಧರಿಸಿತು. ಆದರೆ ಜುಲೈ 30 ವಾರದ ಮಧ್ಯೆ ಕೆಲಸದ ದಿನಗಳಲ್ಲಿ ಬರುವ ಕಾರಣ ಅದರ ಮುಂದಕ್ಕೆ ಆಗಸ್ಟ್ ತಿಂಗಳ ಮೊದಲ ಭಾನುವಾರ ಸ್ನೇಹಿತರ ದಿನವನ್ನು ಆಚರಿಸಲು ಪ್ರಾರಂಭಿಸಲಾಗಿದೆ.

ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919 ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ.1958 ರ ಜುಲೈ 20 ರಂದು ಡಾ. ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂಬ ಪ್ರಸ್ತಾಪವನ್ನಿಟ್ಟರು.

- Advertisement -

ಸಾಂಪ್ರದಾಯಿಕವಾಗಿ ಆಗಸ್ಟ್‌ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಕೆಲವೊಂದು ರಾಷ್ಟ್ರಗಳಲ್ಲಿ ಸ್ನೇಹಿತರ ದಿನ ಆಚರಣೆಗೆ ಯಾವುದೇ ನಿಗದಿತ ದಿನವಿಲ್ಲ.

ಗ್ರೀಟಿಂಗ್ ಕಾರ್ಡ್ ಕಂಪನಿಗಳಿಂದ ಆರಂಭವಾದಂತಹ ಈ ಆಚರಣೆಯು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆದುಕೊಂಡು ರಜಾದಿನವನ್ನು ತುಂಬಾ ಆಸಕ್ತಿಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಾರತ, ಬಾಂಗ್ಲಾದೇಶ ಮತ್ತು ಮಲೇಶಿಯಾದಲ್ಲಿ ಇದರ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.

ಸ್ನೇಹಿತರ ದಿನದಂದು ಉಡುಗೊರೆ, ಕಾರ್ಡ್ ಮತ್ತು ಕೈಗೆ ರಿಬ್ಬನ್‌ನಂತಹ ಪಟ್ಟಿಗಳನ್ನು ಧರಿಸುವುದು ಸಾಮಾನ್ಯವಾಗಿ ಆಚರಿಸಿಕೊಂಡಿರುವಂತಹ ಸಂಪ್ರದಾಯ.
ಮಹಿಳೆಯರ ಸ್ನೇಹಿತರ ದಿನವನ್ನು ಸೆಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು ಆಚರಿಸಲಾಗುತ್ತದೆ.
ಪ್ರತಿಯೊಬ್ಬರು ಸ್ನೇಹಿತರ ದಿನವನ್ನು ಆಚರಿಸಿದರೆ ಬೆಸ್ಟ್ ಫ್ರೆಂಡ್ಸ್ ಅನಿಮಲ್ ಸೊಸೈಟಿಯು ಉತ್ತಮ ಸ್ನೇಹಿತರ ವಾರವನ್ನು ಆಚರಿಸುತ್ತಾ ಬಂದಿದೆ. ಅದು ಪ್ರತೀ ವರ್ಷ ಜೂನ್ 23 ರಿಂದ 25 ರ ತನಕ. ಇದನ್ನು ಪ್ರಾಣಿಗಳ ರಕ್ಷಣೆ ಮತ್ತು ಹಕ್ಕಿಗಾಗಿ ಆಚರಿಸುತ್ತಾ ಇದೆ. ಈ ವಾರದ ಮೊದಲ ದಿನವನ್ನು ಉತ್ತಮ ಗೆಳೆಯನ ದಿನವೆಂದು ಕರೆಯಲಾಗುತ್ತದೆ.

ಜೀವನದಲ್ಲಿ ಸ್ನೇಹಿತರ ಪ್ರಾಮುಖ್ಯತೆ
ಕುಟುಂಬವನ್ನು ಹೊಂದುವುದು ಎಷ್ಟು ಮುಖ್ಯವೋ ಸ್ನೇಹಿತರನ್ನು ಹೊಂದುವುದು ಸಹ ಅಷ್ಟೇ ಮುಖ್ಯ. ಅದಕ್ಕಾಗಿಯೇ ” ಸ್ನೇಹಿತರು ಎಂದರೆ ನಾವು ನಮ್ಮನ್ನು ಆರಿಸಿಕೊಳ್ಳುವ ಕುಟುಂಬ ” ಎಂದು ಹೇಳಲಾಗುತ್ತದೆ.
– ಒಳ್ಳೆಯ ಸ್ನೇಹಿತರು ಅಥವಾ ನಿಜವಾದ ಸ್ನೇಹಿತರು ನಮಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತಾರೆ. ನಮಗೆ ಸಹಾಯ ಮಾಡುತ್ತಾರೆ. ನಮಗೆ ಅಗತ್ಯವಿರುವಾಗ ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಮತ್ತು ಬೆಂಬಲಿಸುತ್ತಾರೆ.
– ಸ್ನೇಹಿತ ಕಷ್ಟಗಳೊಂದಿಗೆ ಅಥವಾ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಇರುತ್ತಾನೆ ಮತ್ತು ನಮಗೆ ವಿಶೇಷ ಭಾವನೆ ಮೂಡಿಸುತ್ತಾನೆ.
– ಬಾಲ್ಯದ ದಿನಗಳಲ್ಲಿ ಕಾಳಜಿ ಮತ್ತು ಹಂಚಿಕೆಯ ಅಭ್ಯಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ಸ್ನೇಹವು ನಮಗೆ ಸಹಾಯ ಮಾಡುತ್ತದೆ.
– ವ್ಯಕ್ತಿಯ ಸರಿಯಾದ ಬೆಳವಣಿಗೆ ಮತ್ತು ಭಾವನಾತ್ಮಕ ಧೈರ್ಯಕ್ಕೆ ಸ್ನೇಹಿತರು ಮುಖ್ಯ ಎಂದು ಸಹ ಹೇಳಲಾಗುತ್ತದೆ. ಮಕ್ಕಳು ಸ್ನೇಹಿತರೊಂದಿಗೆ ಒಟ್ಟಾಗಿ ಕಲಿಯುತ್ತಾರೆ ಮತ್ತು ಆಡುತ್ತಾರೆ.
– ಪ್ರತಿಯೊಬ್ಬರ ಬುದ್ಧಿ ಹಾಗೂ ಜ್ಞಾನದ ಅಭಿವೃದ್ಧಿ ಆಗುವುದು ವಿವಿಧ ಸ್ನೇಹಿತರೊಂದಿಗೆ ಬೆರೆತಾಗಲೇ ಎಂದು ಹೇಳಬಹುದು.
– ಒಬ್ಬ ಒಳ್ಳೆಯ ಸ್ನೇಹಿತನಿಂದ ನಮ್ಮ ಪ್ರವೃತ್ತಿ ಹಾಗೂ ವರ್ತನೆಯಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ಕಾಣಬಹುದು.
ಮತ್ತೊಮ್ಮೆ ಸರ್ವರಿಗೂ
ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು

ಹೇಮಂತ ಚಿನ್ನು                                                  ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group