spot_img
spot_img

ಸಿಂದಗಿ : ಬಾಲಕರ ನೂತನ ವಸತಿ ನಿಲಯ ಉದ್ಘಾಟನೆ

Must Read

spot_img
- Advertisement -

ಸಿಂದಗಿ : ತಾಲೂಕಿನ ಗೊಲಗೇರಿ ಗ್ರಾಮದಲ್ಲಿ ಈ ಭಾಗದ ಶೈಕ್ಷಣಿಕವಾಗಿ ಬಹುದಿನಗಳ ಬೇಡಿಕೆಯಾಗಿದ್ದ, 2024-25 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಶಾಸಕರಾದ ಅಶೋಕ ಮನಗೂಳಿ ಅವರು ವಿಶೇಷ ಕಾಳಜಿವಹಿಸಿ ಮಂಜೂರು ಮಾಡಿಸಿದ 100 ಸಂಖ್ಯಾ ಬಲದ ಡಿ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನೂತನ ವಸತಿ ನಿಲಯವನ್ನು ಉದ್ಘಾಟಿಸಿದರು.

ಇದೆ ವೇಳೆ ಶಾಸಕರು ಮಾತನಾಡಿ ಈ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು ಹಾಗೂ ವಸತಿ ನಿಲಯಕ್ಕೆ ಸ್ವಂತ ನಿವೇಶನ ಒದಗಿಸಿ, ಸುಸಜ್ಜಿತ ಕಟ್ಟಡವನ್ನು ಕೂಡ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕ ಕಲ್ಯಾಣಾಧಿಕಾರಿಗಳಾದ ರವೀಂದ್ರ ಬಂಥನಾಳ, ಇಲಾಖೆಯ ನಿಲಯ ಪಾಲಕರು ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ಅಮೋಗಿ ಜೈನಾಪುರ, ಉಪಾಧ್ಯಕ್ಷರಾದ ರಮೇಶ್ ವಂದಾಲ, ಕೆಡಿಪಿ ಸದಸ್ಯರಾದ ಖಾದಿರ್ ಬಂಕಲಗಿ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಪೂಜಾರಿ, ಹಿರಿಯ ಮುಖಂಡರಾದ ಮಲ್ಲಣ್ಣ ಸಾಲಿ, ಶಿವಯೋಗಿ ಹತ್ತರಕಿ, ಹೆಚ್ ಬಿ ಚಿಂಚೋಳಿ, ಧರ್ಮರಾಯ ಒಡೆಯರ್, ರವಿರಾಜ ದೇವರಮನಿ, ಬಸವರಾಜ್ ಮಾರಲಭಾವಿ, ಮುದಿಗೌಡ ಬಿರಾದಾರ,ಶ್ರೀಶೈಲ ಜಾಲವಾದಿ, ಮಡಿವಾಳ ನಾಯ್ಕೋಡಿ, ಸೇರಿದಂತೆ ಗ್ರಾಮ ಪಂಚಾಯತ್ ಎಲ್ಲ ಸದಸ್ಯರು ಗ್ರಾಮಸ್ಥರು ಹಿರಿಯರು ಕಿರಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group