spot_img
spot_img

“ನಾಡ ಸಂಭ್ರಮ”-ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟನೆ

Must Read

spot_img
- Advertisement -

ಜಾನಪದ ಮನುಷ್ಯನಿಗೆ ಧರ್ಮ-ನೀತಿ ಜೊತೆಗೆ ಸಂಸ್ಕಾರವನ್ನು ಕಲಿಸಿ ಕೊಡುತ್ತದೆ-ಸಿದ್ದು ಮೋಟೆ

ಮೂಡಲಗಿ: ಜಾನಪದ ಮನುಷ್ಯನಿಗೆ ಧರ್ಮ, ನೀತಿ, ಜೊತೆಗೆ ಬದುಕಿ ಬಾಳುವ ಸಂಸ್ಕಾರವನ್ನು ಕಲಿಸಿ ಕೊಡುತ್ತದೆ. ಅದಕ್ಕಾಗಿ ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಪೀಳಿಗೆಯ ಮೇಲೆ ಇದೆ ಎಂದು ರಾಮದುರ್ಗದ ಅವರಾದಿ ಗ್ರಾಮದ ರಾಷ್ಟ್ರಮಟ್ಟದ ಜಾನಪದ ಕಲಾವಿದ ಹಾಗೂ ಶಿಗ್ಗಾಂವಿ ಕರ್ನಾಟಕ ಜಾನಪದ ವಿವಿ ಸೆನೆಟ್ ಸದಸ್ಯ ಸಿದ್ದು ಮೋಟೆ ಅಭಿಪ್ರಾಯಪಟ್ಟರು. 

ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಿಂದ ಶನಿವಾರ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ“ನಾಡ ಸಂಭ್ರಮ”(ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಾಯಕ ಮಾಡುವವರ ಹಾಗೂ ಕಾಯುವ(ಶಿವ)ನ ಮಾತುಗಳನ್ನು ಸೇರಿ ಜಾನಪದ ಆಯಿತು ಎಂದು ಜಾನಪದದ ಹುಟ್ಟನ್ನು ಹಾಡಿನ ಮೂಲಕ ಆಡಿ ಹೇಳಿದರು.

- Advertisement -

ಈ ಭೂಮಿ ಮೇಲಿನ ಎಲ್ಲ ಧರ್ಮಗಳ ಮೊದಲ ಧರ್ಮ ಜಾನಪದ ಧರ್ಮ ಅದು ಮನುಷ್ಯನ ಮಾತು, ಆಡು, ವಾದ್ಯಗಳ ಮೂಲಕ ಬೆಳೆದು ಬಂದಿದೆ ಎಂದ ಅವರು ವ್ಯಾಪಾರಿ ಜಾನಪದ ಕಲಾವಿದರು ಜಾನಪದದ ಸೊಗಡನ್ನು ಹಾಳು ಮಾಡುತ್ತಿದಾರೆ ಎಂದು ಖೇದ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಹೊಸ ಹೊಸ ವಿಷಯ ವಸ್ತುಗಳ ಕುರಿತು ಸಂಶೋಧನೆ ಮಾಡಿ ಸಂಶೋಧಕರಾಗಿ ವಿದ್ವತ್ ಲೋಕದಲ್ಲಿ ಬೆಳಗಿರಿ, ಇಲ್ಲಾ ಕೌಶಲ್ಯಗಳನ್ನು ಕಲಿತು ಉತ್ಪಾದನಾ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿ ಕುಟುಂಬದ ಜೊತೆಗೆ ಆರ್ಥಿಕತೆಯನ್ನು ಬಲಪಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಪ್ಯಾಂಟು ಚಡ್ಡಿಗಳನ್ನು ಬಿಟ್ಟು ನಮ್ಮ ಸಂಸ್ಕೃತಿ ಸಂಸ್ಕಾರಗಳ ಪ್ರತೀಕವಾದ ಧೋತಿ, ನೆಹರು ಶರ್ಟ, ಪಟಕಾ ಹಾಗೂ ಸ್ತ್ರೀಯರು ಸೀರೆ, ಕುಪ್ಪಸ ತೊಟ್ಟು ನಮ್ಮ ಕರ್ನಾಟಕದ ಜಾನಪದ ವೇಷ ಭೂಷಣಗಳನ್ನು ಮುಂದಿನ ಜನಾಂಗಕ್ಕೆ ಸಾಗಿಸುವ ಕೆಲಸ ಮಾಡುವಂಥವರಾಗಬೇಕೆಂದರು.  

- Advertisement -

ಡಾ. ಅಂಬೇಡ್ಕರ ಹಾಗೂ ಗಾಂಧೀಜೀಯವರು ಬೀದಿ ದೀಪದಲ್ಲಿ ಓದಿ ದೇಶ ಕಟ್ಟುವ ಕೆಲಸ ಮಾಡಿದರು ಆದರೆ ನೀವು ಇಂದು ಉತ್ತಮ ಸೌಲಭ್ಯಗಳ ಸವಲತ್ತುಗಳ ಕಾಲದಲ್ಲಿ ಬದುಕಿದ್ದೀರಿ ಅದರ ಸದುಪಯೋಗ ಪಡೆದು ಸಮಾಜ ಮತ್ತು ದೇಶಕ್ಕೆ ಕೊಡುಗೆ ಕೊಡುವಂಥ ದೊಡ್ಡ ಅವಕಾಶ ಈ ನಾಗರಿಕ ಸಮಾಜದ ವಿದ್ಯಾರ್ಥಿಗಳ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲೆ ಇದೆ, ಅದಕ್ಕೆ ಬೇಕಾಗಿರುವ ಸಹಾಯ ಸಹಕಾರ ನಾವು ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು. 

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪ್ಯಾರಾ ಟೆಕ್ವಾಂಡೊ ಕ್ರೀಡೆಯ ರಜತ ಪದಕ ವಿಜೇತೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮೀ ಮ.ರಡರಟ್ಟಿ ಕ್ರೀಡಾಪಟುಗೆ ಸತ್ಕರಿಸಿ ಗೌರವಿಸಿದರು.  

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಎಮ್.ಗುಂಜಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  

ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಆರ್.ಪಿ.ಸೋನವಾಲಕರ, ಅನೀಲ ಸತರಡ್ಡಿ, ಸಂದೀಪ ಸೋನವಾಲಕರ ಮತ್ತು ಮಹಾವಿದ್ಯಾಲಯದ ವಿವಿಧ ಘಟಕಗಳ ಮುಖ್ಯಸ್ಥರಾದ ಪ್ರೊ.ಎಸ್.ಬಿ.ಖೋತ, ಡಾ. ಎಸ್.ಎಲ್.ಚಿತ್ರಗಾರ, ಪ್ರೊ.ಜಿ.ವ್ಹಿ.ನಾಗರಾಜ, ಪ್ರೊ. ಎ.ಎಸ್.ಮಿಶಿನಾಯಕ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅವರಾದಿಯ ಜಾನಪದ ಕಲಾ ತಂಡದ ಸಿದ್ದು ಮೋಟೆ, ಆನಂದ ಹಕ್ಕನವರ, ಫೀರಸಾಬ ಬಾಗಲದ, ಸಿದ್ದಪ್ಪ ಇಟಗಿ, ಸೋಮೆಶ ಚಿಕ್ಕೊಪ್ಪ, ಫಲ ಮೋಟೆ ಇವರೆಲ್ಲ ಜಾನಪದ ಕಲಾ ಪ್ರದರ್ಶನ ನಡೆಸಿಕೊಟ್ಟರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group