spot_img
spot_img

ಭ್ರಷ್ಟಾಚಾರಿಗಳಿಗೆ ಶಿಕ್ಷೆ ಜನ್ಮ ಜನ್ಮಕ್ಕೂ ತೀರೋದಿಲ್ಲ

Must Read

spot_img
- Advertisement -

ಕಳ್ಳರನ್ನಾದರೂ ತಡೆಯಬಹುದು ಭ್ರಷ್ಟರನ್ನು ತಡೆಯಲಾಗದು. ಕಳ್ಳತನಕ್ಕೂ,ಭ್ರಷ್ಟಾಚಾರಕ್ಕೂ ವ್ಯತ್ಯಾಸವಿಷ್ಟೆ. ಭ್ರಷ್ಟರನ್ನು, ಕಳ್ಳರನ್ನು, ಸುಳ್ಳರನ್ನು, ಕೊಲೆಗಾರರನ್ನು, ಅತ್ಯಾಚಾರಿಗಳನ್ನು,ಅಧರ್ಮವನ್ನು ಎತ್ತಿ ತನ್ನ ವಶದಲ್ಲಿಟ್ಟುಕೊಂಡು ರಾಜಕೀಯ ನಡೆಸಿದರೆ,ಕಳ್ಳರು ತನ್ನ ಜೀವ ರಕ್ಷಣೆಗಾಗಿ ಕದ್ದು ಬದುಕುತ್ತಾರೆ.

ಕಳ್ಳರು ಈ ಜನ್ಮದಲ್ಲೇ ಸಿಕ್ಕಿಹಾಕಿಕೊಂಡು ಶಿಕ್ಷೆಯ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡು ಉತ್ತಮ ವ್ಯಕ್ತಿ ಯಾಗಲು ಸಾಧ್ಯವಾದರೆ ,ಭ್ರಷ್ಟಾಚಾರಿಗಳಿಗೆ ಶಿಕ್ಷೆ ಜನ್ಮ ಜನ್ಮಕ್ಕೂ ತೀರೋದಿಲ್ಲ. ಏನೇ ಇರಲಿ ಮಾನವ ತನ್ನ ಜೀವ ಕಾಪಾಡಿಕೊಂಡು ಬದುಕಲು ನಡೆಸೋ ವ್ಯವಹಾರದಲ್ಲಿ ಸೋಲು ಅನುಭವಿಸಲು ತಯಾರಿಲ್ಲದೆ, ಆ ಸೋಲನ್ನು ಎಲ್ಲಾ ಕೆಟ್ಟಶಕ್ತಿಗಳ ಸಹಕಾರದಲ್ಲಿದ್ದು ತಾನೇ ಸರಿ ಎಂದು ರಾಜಕೀಯ ನಡೆಸೋದನ್ನೇ ಭ್ರಷ್ಟಚಾರ ಎನ್ನುವುದು.

ಈ ಜನ್ಮದ ಸಹಕಾರ. ಇನ್ನೊಂದು ಜನ್ಮದಲ್ಲಿರಬೇಕೆಂಬುದಿಲ್ಲ.ಆಗ, ಶಿಕ್ಷೆ ಅನುಭವಿಸೋವಾಗ ಯಾರೂ ಕೇಳೋದಿಲ್ಲ. ಇದನ್ನು ನಮ್ಮ. ಮಹಾತ್ಮರು ಹೇಳಿರೋದು “ಮಾಡಿದ್ದುಣ್ಣೋ ಮಹಾರಾಯ” ಎಂದು. ಆದರೆ, ‌ಇಂದಿನ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಸಿಗೋ ಸಹಕಾರ, ಸಹಾಯ, ನ್ಯಾಯ ಶಿಷ್ಟಾಚಾರಕ್ಕೆ ಸಿಗಲ್ಲ. ಎಲ್ಲಿ ಅತಿಯಾದ ಹಣ, ಅಧಿಕಾರವಿದೆಯೋ ಅಲ್ಲಿ ಭ್ರಷ್ಟಾಚಾರ ವೂ ಇರುತ್ತದೆ. ರಾಜಕೀಯ ನಡೆಸಲು ಶಿಷ್ಟಾಚಾರದಿಂದ. ಕಷ್ಟವಾದಾಗ. ಹಿಡಿಯೋ ವಾಮಮಾರ್ಗ ಭ್ರಷ್ಟಾಚಾರ.

- Advertisement -

ಅಂದರೆ,‌ ತನ್ನದಲ್ಲದ್ದನ್ನು ಪಡೆಯಲು ಸುಳ್ಳು,ಮೋಸ,ವಂಚನೆ, ಅನ್ಯಾಯ, ಅಧರ್ಮದಿಂದ ಮಾತ್ರ ಸಾಧ್ಯ. ಇದನ್ನು ಅಜ್ಞಾನವೆನ್ನುತ್ತಾರೆ. ಅರ್ಧಸತ್ಯದ ವಿಚಾರಗಳನ್ನು ವ್ಯವಹಾರಕ್ಕೆ ಬಳಸಿಕೊಂಡರೆ ಲಾಭದ ಜೊತೆಗೆ ನಷ್ಟ ಇದ್ದೇ ಇರುತ್ತದೆ. ಭ್ರಷ್ಟಾಚಾರ ದಲ್ಲಿಯೂ ಹೀಗೆ. ಇದಕ್ಕೆ ಸಹಕರಿಸಿದ ಎಲ್ಲಾ ನಕಾರಾತ್ಮಕ ಶಕ್ತಿಗಳಿಗೆ ಶಿಕ್ಷೆಯ ನಂತರ ಜ್ಞಾನ ಬಂದು ಹೊರ ಬಂದಾಗಲೇ ಭ್ರಷ್ಟರ ಬತ್ತಳಿಕೆ ಖಾಲಿಯಾಗೋದು.

ಇದಕ್ಕೆ ನಮ್ಮ ನ್ಯಾಯಾಲಯದಲ್ಲಿ ನಿಜವಾದ ನ್ಯಾಯಾಧೀಶರು ಇರಬೇಕಷ್ಟೆ. ಅಲ್ಲಿಯೂ ಹಣದಿಂದ ಅನ್ಯಾಯ ಗೆದ್ದು ನಿಂತರೆ ನ್ಯಾಯಾಧೀಶನೂ ಭ್ರಷ್ಟಾಚಾರಿಯ ಒಳಗೆ ಇರಬೇಕಷ್ಟೆ. ಇಂತಹ ಎಷ್ಟೋ ವಿಚಾರಗಳು ನಮ್ಮ ನಿಜ‌ಜೀವನದಲ್ಲಿ ಸಮಾಜ,ಸಂಸಾರದೊಳಗೆ ದಿನ ದಿನಕ್ಕೆ ಬೆಳೆಯುತ್ತಿದೆ. ಸತ್ಯ ತಿಳಿದಿದ್ದರೂ ಹೊರ ಹಾಕೋ ದೈರ್ಯವಿಲ್ಲದೆ, ಭ್ರಷ್ಟಾಚಾರಿಗಳಿಗೆ ಸಹಕರಿಸಿ ತನ್ನ ಸಂಸಾರದಲ್ಲಿ ಮುಳುಗಿರುವ ಪ್ರಜೆಗಳಿಗೆ ಬರುವ ಕಷ್ಟ, ನಷ್ಟಗಳನ್ನು ತುಂಬಲು ಭ್ರಷ್ಟರು ಬರೋದಿಲ್ಲ.

ಅದನ್ನು ಅನುಭವಿಸಬೇಕಾದವರು ಜೀವವೆ ಅಲ್ಲವೆ?.ಆತ್ಮವಂಚನೆಗಿಂತ  ದೊಡ್ಡ ತಪ್ಪು ಯಾವುದಿದೆ?. ಇದಕ್ಕೆ ನಮ್ಮ ಗುರು ಹಿರಿಯರು “ಸಜ್ಜನರ ಸಂಗ ಹೆಜ್ಜೇನು ಸವಿದಂತೆ” ಎಂದಿರೋದು ಆದರೆ, ಸಜ್ಜನರ ಸತ್ಯ ಕಠೋರವಾದಾಗ ನಮ್ಮಲ್ಲಿಯ ದುಷ್ಟ ಗುಣಕ್ಕೆ ಅವಮಾನವಾಗುವುದರಿಂದ ಇದಕ್ಕೆ ಸಹಕರಿಸಲಾಗುವುದಿಲ್ಲ. ಅದಕ್ಕೆ ಹೊರಪ್ರಪಂಚ ಹೆಚ್ಚಾಗಿ ಭ್ರಷ್ಟಾಚಾರಕ್ಕೆ ಮಣಿದು ನಡೆದಿದೆ.

- Advertisement -

ಇಲ್ಲಿ ಶಾಶ್ವತವಾದದ್ದು ಧರ್ಮ,ಸತ್ಯವಾದರಿಂದ ಇದನ್ನು ಯಾರೂ ತಡೆಯಲಾಗದು ಕೊಲ್ಲಲಾಗದು.ಇದ್ದಾಗ ಇದನ್ನು ತನ್ನಲ್ಲಿಟ್ಟುಕೊಂಡರೆ ಆತ್ಮಜ್ಞಾನ. ಇಲ್ಲವಾದರೆ ಅಜ್ಞಾನ. ಮನೆಯೊಳಗಿನ ಭ್ರಷ್ಟಾಚಾರದಮೂಲವೇ ಮಾಲೀಕ. ಮಹಿಳೆಯ ಜ್ಞಾನದಿಂದ ಅದನ್ನು ತಡೆದು ಸಂಸಾರದಲ್ಲಿ ಶಿಷ್ಟಾಚಾರ ಬೆಳೆಸಬೇಕಾದರೆ‌ ಸ್ತ್ರೀ ಗೆ ಆಧ್ಯಾತ್ಮದ  ಶಿಕ್ಷಣವಿರಬೇಕು. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆ ಸಂಸಾರದೊಳಗಿನ ಭ್ರಷ್ಟತೆ ತಡೆಯೋ ಅಧಿಕಾರವಿದ್ದರೂ, ಅವಳೇ ಭ್ರಷ್ಟಾಚಾರಕ್ಕೆ ಸಹಕರಿಸಿದರೆ, ಇಡೀ ಕುಟುಂಬಕ್ಕೆ ನಷ್ಟ.

ಇದು ಮುಂದೆ ಸಮಾಜಕ್ಕೆ ಹರಡಿ, ಅಲ್ಲಿಯೂ ಮಹಿಳೆಯ ಸಹಕಾರ ದೊರೆತಾಗ ರಾಜ್ಯ ರಾಜಕೀಯದಿಂದ ದೇಶ ರಾಜಕೀಯಕ್ಕೆ ಹರಡಿ,ದ್ವೇಷದ ರಾಜಕೀಯವಾಗುತ್ತದೆ. ಭಾರತಮಾತೆಯ ಮಗಳ ಸಹಕಾರದಿಂದ ಮುನ್ನೆಡೆದ ಭ್ರಷ್ಟಾಚಾರದಲ್ಲಿ ರಾಜಕೀಯವೆ ಬೆಳೆದಾಗ ಧರ್ಮ ಎಲ್ಲಿರುತ್ತದೆ? ಅದೂ ರಾಜಕೀಯಕ್ಕಿಳಿದು ಹೋರಾಟ‌ನಡೆಸಬೇಕು ಆದರೆ, ಇದಕ್ಕೆ ಮೂಲ ಕಾರಣವಾದ‌ ಅಜ್ಞಾನದ ಶಿಕ್ಷಣ ಕ್ಷೇತ್ರವನ್ನು ಸರಿಪಡಿಸದೆ ಹೋರಾಟ ನಡೆಸಿ ಕ್ರಾಂತಿಯ ವಿಷ ಬೀಜ ಬಿತ್ತುವುದರಿಂದ ಯಾವುದೇ ಪರಿಹಾರ ಸಿಗೋದಿಲ್ಲ. ಬದಲಾಗಿ ಜೀವಹಾನಿ,ಪ್ರಾಣ ಹಾನಿ,ಮಾನಹಾನಿ  ಆಗುತ್ತದೆ. ಇದರಿಂದ. ಹೋದ ಜೀವ ಮತ್ತೆ ಹುಟ್ಟಿದಾಗ ಯಥಾ ಪ್ರಕಾರ ಹಿಂದಿನ ಜನ್ಮದ ಅಜ್ಞಾನ ಆವರಿಸಿರುವಾಗ, ಅದನ್ನು ಧರ್ಮ ಶಿಕ್ಷಣದಿಂದ ತಿದ್ದಿ ತೀಡಿ,ಶಿಕ್ಷೆಕೊಟ್ಟು ಸರಿಪಡಿಸಲು ಗುರುವಿನಿಂದ ಮಾತ್ರ ಸಾಧ್ಯ. ಇಂದಿನ ಶಿಕ್ಷಣದ ವಿಚಾರಗಳೆ ವಿದೇಶಿ ವಿಜ್ಞಾನ ಆದರೆ, ಇದರಿಂದ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವೆ?.

ಶತ್ರು ಗಳನ್ನು ಶತ್ರು ಗಳಿಂದಲೇ ಹೊಡೆಯಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಜ್ಞಾನವನ್ನು ಜ್ಞಾನದಿಂದಲೇ ತಿಳಿಯಬೇಕು. ಅಜ್ಞಾನವನ್ನು ಅಜ್ಞಾನದಿಂದಲೇ ತೊಳೆಯಬೇಕು. ರಾಜನನ್ನು ರಾಜನಿಂದಲೇ ಸೋಲಿಸಬೇಕು.ಬ್ರಾಹ್ಮಣನನ್ನು ಬ್ರಾಹ್ಮಣನೆ ಸರಿಪಡಿಸಬೇಕು. ವ್ಯವಹಾರವನ್ನು,ವ್ಯವಹಾರದಿಂದಲೇ ಮುಗಿಸಬೇಕು ಕರ್ಮವನ್ನು‌ ಕಾಯಕದಿಂದಲೇ ಕಳೆಯಬೇಕು. ಸಾಲವನ್ನು  ಶುದ್ದಕಾಯಕದಿಂದಲೇ ತೀರಿಸಬೇಕು.

ದೇಶವನ್ನು ಪ್ರಜೆಗಳಿಂದಲೇ ರಕ್ಷಿಸಬೇಕು. ಪ್ರಜಾಪ್ರಭುತ್ವದ ಭಾರತದೇಶ‌ ಈಗ ಭ್ರಷ್ಟಾಚಾರದ ಸರ್ಕಾರದಲ್ಲಿದೆ. ಇದನ್ನು ಶಿಷ್ಟಾಚಾರಿಗಳ ಸಹಕಾರ ಇಲ್ಲದೆ ಮುನ್ನಡೆಸಲಾಗದು. ಆದರೆ, ‌ಇಲ್ಲಿರುವ ಹೆಚ್ಚು ಪ್ರಜೆಗಳಿಗೆ ವಿದೇಶಿ ವಿಜ್ಞಾನವೇ ಮುಖ್ಯವಾಗಿದೆ. ಹೀಗಾಗಿ ಅವರನ್ನು ಅವರೆ ಆಳಿಕೊಳ್ಳುವ ಸರ್ಕಾರ ನಮ್ಮದಾಗಬೇಕಿದೆ. ಅಂದರೆ, ಸ್ವಾವಲಂಬನೆ,ಸ್ವತಂತ್ರ ಜ್ಞಾನ, ಸಾಮಾನ್ಯಜ್ಞಾನ, ಸ್ವಾಭಿಮಾನ,ಸತ್ಯಜ್ಞಾನದ ಶಿಕ್ಷಣ ಪಡೆಯೋ ಸ್ವಾತಂತ್ರ್ಯ ನಮಗಿಲ್ಲವಾದರೆ ಇದು ನಾವೇ ‌ನಮಗೆ ಮಾಡಿಕೊಂಡ ಅವಮಾನ. ಸತ್ಯ. ಇಲ್ಲಿ ಯಾಕೆ ಭ್ರಷ್ಟರಿಗೆ ಶಿಕ್ಷೆಯಿಲ್ಲ?. ಯಾಕೆ ಶ್ರೀಮಂತ ರು ಸಾಮಾನ್ಯರಂತೆ ಯೋಚಿಸೋಲ್ಲ?. ಭಾರತದೇಶದ ಆತ್ಮವೇ ಸತ್ಯಜ್ಞಾನ, ಅದಿಲ್ಲದ ‌ಪ್ರಜೆಗಳನ್ನು ಒಳಗೆ ಇಟ್ಟುಕೊಳ್ಳಲು ಭಾರತಮಾತೆಗೆ ಬೇಕು ಸತ್ಯ ಜ್ಞಾನದಶಿ ಕ್ಷಣ. ಸ್ತ್ರೀ ಶಕ್ತಿಯನ್ನು ರಾಜಕೀಯಕ್ಕೆ ಬಳಸಿದರೆ ಒಳಗಿನ ಸತ್ಯ ‌ ಬೆಳೆಯುವುದೆ?. ಸ್ತ್ರೀ ಶಕ್ತಿಯನ್ನು ಧರ್ಮದಿಂದ ಉಳಿಸಿ,ಬೆಳೆಸಿದಾಗಲೇ ನಿಜವಾದ ಜ್ಞಾನಶಕ್ತಿ ಬೆಳೆಯುವುದು. ಕಾಲ ಪ್ರಭಾವ. ಇಂದಿನ ಮಹಿಳೆಯರ. ಸ್ವಾತಂತ್ರ್ಯ ಅತಿಯಾದರೆ ಗತಿಗೇಡು ಎಂಬಂತಾಗಿದೆ. ಪುರುಷರಲ್ಲಿ ಇಲ್ಲದ ಸತ್ಯಜ್ಞಾನ ಮಹಿಳೆಯಲ್ಲಿ ಕಾಣಲಾಗದೆ,ಅಸತ್ಯದ ರಾಜಕೀಯಕ್ಕೆ ಮಹಿಳೆಯನ್ನು ಎಳೆದರೆ ಸಂಸಾರವೇ ವಿನಾಶದತ್ತ ನಡೆಯುತ್ತದೆ. ಮೊದಲು ಸತ್ಯಜ್ಞಾನ ನಂತರ ವಿಜ್ಞಾನ ಮೊದಲು ಭೂಮಿ, ನಂತರ ಆಕಾಶ. ಭೂಮಿಯನ್ನು ಸರಿಯಾಗಿ ಬಳಸಿಕೊಳ್ಳದೆ ಆಕಾಶದಲ್ಲಿ ರಾಜಕೀಯ ನಡೆಸಿದರೆ, ಕೊನೆಯಲ್ಲಿ ಬೀಳೋದು ಭೂಮಿಮೇಲೆ ಎಂಬ  ಸಾಮಾನ್ಯಜ್ಞಾನ ಇದ್ದವರು ಸಮಾನತೆಗೆ ಬೆಲೆಕೊಟ್ಟು ಬದುಕಿ ಮುಕ್ತಿ ಗಳಿಸಬಹುದು.

ಎಲ್ಲರೂ ಒಂದೇ ಎನ್ನುವ ಅದ್ವೈತತತ್ವ,,ಇಬ್ಬರೂ ಒಂದೇ ಎನ್ನುವ ದ್ವೈತ ತತ್ವ ನಾವೆಲ್ಲರೂ ಒಂದೇ ಶಕ್ತಿಯ ವಿಶೇಷ ಜ್ಞಾನಿಗಳೆನ್ನುವ ವಿಶಿಷ್ಟಾದ್ವೈತದಲ್ಲಿ ರಾಜಕೀಯ ಬೆರೆಸಿ ಸತ್ಯನಾಶ ಮಾಡಿದರೆ ಮಾನವೀಯತೆ ಎಲ್ಲಿರುತ್ತದೆ? ಕಲಿಗಾಲದ ಮಾನವರಲ್ಲಿ ಜ್ಞಾನ ಕಡಿಮೆ ಬುದ್ದಿಹೆಚ್ಚುಇದರಿಂದ ನಷ್ಟ ಅನುಭವಿಸೋದು ಮನುಕುಲವೆ.

ಪುರಾಣ, ಇತಿಹಾಸದ ಮೂಲ ಸತ್ಯ. ವಾಸ್ತವ ಜಗತ್ತಿನಲ್ಲಿ ಕಾಣಲು ಸಾಧ್ಯವಿದೆ. ಇದಕ್ಕೆ ಸತ್ಯಜ್ಞಾನ ದಅಗತ್ಯವಿದೆ. ರಾಜಕೀಯದ ಅಗತ್ಯವಿಲ್ಲ. ದಯವಿಟ್ಟು ಇದರಲ್ಲಿ ಯಾವುದೇ ಸ್ವಾರ್ಥ, ಅಹಂಕಾರವೆಂದೆಣಿಸದೆ, ಸ್ವಾಭಿಮಾನ, ‌ಆತ್ಮವಿಶ್ವಾಸ ಗಮನಿಸಿದರೆ ಸತ್ಯಜ್ಞಾನ ನಮ್ಮೊಳಗಿರುವುದು ಅರ್ಥಆಗುತ್ತದೆ. ನಮ್ಮೊಳಗೆ ಅಡಗಿರೋ ಶತ್ರುಗಳನ್ನು ಮೆಟ್ಟಿ ನಿಲ್ಲಲು ಸತ್ಯ ತಿಳಿಯಬೇಕಷ್ಟೆ. ಇದು ಪುರಾಣ ಇತಿಹಾಸ ಓದುವುದರಿಂದ ಸಾಧ್ಯವೆ?


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group