“ಅಮ್ಮ ಇಂದು ನನಗೆ ಹೊಟ್ಟೆ ನೋಯುತ್ತಿದೆ. ಶಾಲೆಗೆ ಹೋಗಲಾರೆ”, ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ಆತನ ತಂದೆ ತಾಯಿ ಆತನ ಹಠಮಾರಿತನ ಎಂದು ಭಾವಿಸುತ್ತಾನೆ. ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ.
ಅವರೇನೋ ಆತನದು ಹಠಮಾರಿತನ ಎಂದು ಭಾವಿಸಿದ್ದಾರೆ ಆತ ನಿಜವಾಗಿಯೂ ಅನಾರೋಗ್ಯಕ್ಕೀಡಾಗಿದ್ದಾನೆ. ಆತನಿಗೆ ಶಾಲೆಗೆ ಹೋಗುವ ಭಯವಿರಬಹುದೆಂದು ಅವರು ಭಾವಿಸುವುದಿಲ್ಲ. ?
ಮನೋವೈದ್ಯರ ಪ್ರಕಾರ ಮಕ್ಕಳಲ್ಲಿ ತಲೆನೋವು, ಹೊಟ್ಟೆನೋವು, ವಾಂತಿ ಮುಂತಾದ ತೊಂದರೆಗಳು ಹೆಚ್ಚುತ್ತಿರುವ ಒತ್ತಡದಿಂದ ಉದ್ಭವವಾಗುತ್ತವೆ.
ಇಂದು ಮಕ್ಕಳು ಅನೇಕ ರೀತಿಯ ಒತ್ತಡದಿಂದಾಗಿ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತಂದೆತಾಯಿಯರ ಮಹತ್ವಾಕಾಂಕ್ಷೆ. ಅವರು ತಮ್ಮ ಮಕ್ಕಳು ಯಾವಾಗಲೂ ಹೆಚ್ಚು ಅಂಕ ಪಡೆಯಲಿ ಎಂದು ಬಯಸುತ್ತಾರೆ. ಹೀಗಾಗಿ ಶಾಲೆಗೆ ಹೆಸರು ಹಚ್ಚಿದಾಗಿನಿಂದಲೇ ಮೂರು ವರ್ಷದಿಂದ ಅವರ ವಿದ್ಯಾಭ್ಯಾಸದ ತಯಾರಿಯಲ್ಲಿ ತೊಡಗುವ ಮೂಲಕ ಅವರ ಮೇಲೆ ಒತ್ತಡ ಹೆಚ್ಚು ಮಾಡುತ್ತಾ ಹೋಗುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಮಕ್ಕಳು ಅವರು ನಿರೀಕ್ಷಿಸಿದ ಯಶಸ್ಸು ಪಡೆಯದೇ ಹೋದಾಗ ಅವರೊಡನೆ ತಂದೆ ತಾಯಿಗಳು ಪ್ರೀತಿಯಿಂದ ಪ್ರತಿಕ್ರಿಯಿಸುವುದಿಲ್ಲ. ಅಂಥ ಮಕ್ಕಳ ಆಟ ಅವರಿಗೆ ಹಿಡಿಸದು. ಮಕ್ಕಳು ಎಷ್ಟೊಂದು ಒತ್ತಡವನ್ನು ಅನುಭವಿಸುತ್ತಿದ್ದಾರೆಂದರೆ ಅವರು ಮನೆಯಲ್ಲಿ ಓಡಿ ಹೋಗಬೇಕು ಎಂದು ಕೆಲವೊಮ್ಮೆ ಭಾವಿಸುತ್ತಾರೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂದೆತಾಯಂದಿರು ತಮ್ಮ ಮಕ್ಕಳನ್ನು “ಆಲ್ ರೌಂಡರ್” ಮಾಡಲು ಯೋಚಿಸುತ್ತಾರೆ. ಮಕ್ಕಳು ಇಂಥ ಸಂದರ್ಭದಲ್ಲಿ ಎಷ್ಟೊಂದು ಒತ್ತಡ ಅನುಭವಿಸುತ್ತಾರೆಂದರೆ ಅವರ ಹಸಿವು ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಇತ್ತೀಚಿಗೆ ನನ್ನ ಸ್ನೇಹಿತರೊಬ್ಬರ ಮಗ ಐದಾರು ವರ್ಷಗಳು ಕೋಚಿಂಗ ಕ್ಲಾಸ್ ಮೂಲಕ ಒಂದು ಶಾಲೆಗೆ ಆಯ್ಕೆಯಾದ ಅವರು ತುಂಬಾ ಸಂತೋಷದಿಂದ ಎಲ್ಲರೂ ಹೆಮ್ಮೆಯಿಂದ ತಮ್ಮ ಮಗ ತಾವು ನಿರೀಕ್ಷಿಸಿದ್ದನ್ನು ಸಾಧಿಸಿದ ನಂತರ ನಮ್ಮ ಕರ್ತವ್ಯದ ಅರ್ಧದಷ್ಟು ಕೆಲಸ ಮಾಡಿದ ಉತ್ತಮ ಶಾಲೆಗೆ ಆಯ್ಕೆಯಾದನು ಎಂದು ಹೇಳಿ ಅವನಿಗೆ ಶಾಲೆಗೆ ಸೇರಿಸಿದರು.
ಆ ಶಾಲೆಯವರು ಪಾಲಕರು ತಮ್ಮ ಮಕ್ಕಳ ಭೇಟಿಗಾಗಿ ನಿಗದಿತ ಸಮಯ, ದಿನ ಗೊತ್ತು ಮಾಡಿರುತ್ತಾರಂತೆ ಆ ದಿನ ಮಾತ್ರ ಪಾಲಕರು ತಮ್ಮ ಸಮಾರಂಭವನ್ನು ಕಂಡು ಮಾತನಾಡಿ ಬರುತ್ತಾರೆ. ಉಳಿದ ಸಂದರ್ಭ ಅವರು ಅಲ್ಲಿಗೆ ಹೋಗುವುದಿಲ್ಲ, . ಹೀಗೆ ಹಲವು ತಿಂಗಳು ಉರುಳಿದವು ಇವರ ಮೊದಲ ಭೇಟಿಗೆ ಹೋದಾಗ ನಗುನಗುತ್ತಾ ಮಾತನಾಡಿದ ಇವರ ಮಗ ಅಪ್ಪ ಅಮ್ಮ ಮನೆಯಲ್ಲಿ ದಿನವೂ ನನ್ನ ನೆನಪು ನಿಮಗಾಗುವುದಿಲ್ಲವೇ. ? ಎಂದು ಕೇಳಿದನಂತೆ ಆಗ ಮಗನ ಕಾಳಜಿ ಮತ್ತು ಅವರ ಶಿಕ್ಷಣ ಪ್ರೇಮ ಅವರನ್ನು ಸಾಂತ್ವನ ಮಾಡಿ ಮತ್ತೆ ಆಗಾಗ ಭೇಟಿಗೆ ಬರುತ್ತೇನೆ ಅಂಥಾ ಹೇಳಿ ಬಂದಿದ್ದರಂತೆ ಕೆಲವು ದಿನಗಳ ನಂತರ ಶಾಲೆಯ ಮುಖ್ಯೋಪಾಧ್ಯಾಯರಿಂದ ನಿಮ್ಮ ಮಗುವಿನ ಆರೋಗ್ಯಕ್ಕೆ ತೊಂದರೆಯಾಗಿದೆ ನಾಳೆ ನೀವು ಬಂದು ಹೋಗಿ ಎಂದು ಕರೆ ಬಂದಾಗ ಇಬ್ಬರೂ ಸರ್ಕಾರಿ ವೃತ್ತಿಯಲ್ಲಿದ್ದ ಕಾರಣ ಗಂಡ ರಜೆ ಹಾಕಿ ಮಗುವಿನ ಭೇಟಿಗೆ ಹೋದಾಗ ಕಂಡ ದೃಶ್ಯ “ತೀರಾ ಸಣಕಲು ಶರೀರದೊಂದಿಗೆ ಜೋಲು ಮೋರೆ ಹಾಕಿಕೊಂಡು ಮಗ ಮುಂದೆ ನಿಂತ” ಆತ ಕೆಲವು ತಿಂಗಳ ಕೇಳಿದ ಪ್ರಶ್ನೆ ತಟ್ಟನೆ ನೆನಪಾಯಿತು “ಅಪ್ಪ ನನಗೆ ನಿಮ್ಮ ನೆನಪಾಗುವುದಿಲ್ಲವೇ?” ಎಂಬುದು ಕಣ್ಮುಂದೆ ದುತ್ತೆಂದು ಬಂತಂತೆ.
ಮಗುವಿನೊಂದಿಗೆ ತಮ್ಮ ಊರಿಗೆ ಬಂದು ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ಕಂಡು ಬಂದ ಸತ್ಯ ಸಂಗತಿ”ಮಗುವಿನ ರಕ್ತದಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಾಗಿರುವುದು ಹೀಗೆ ಬಿಟ್ಟರೆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆ” ಎಂದು ವೈದ್ಯರು ಹೇಳಿದರು.
ತಂದೆತಾಯಿಗೆ ದಿಕ್ಕೇ ತೋಚದಂತಾಗಿ ಮುಗ್ದ ಮಗು ಕೇಳಿದ ಪ್ರಶ್ನೆ ಅರಿಯದೇ ಹೋದ ಮೂರ್ಖರು ನಾವು ಎಂದುಕೊಂಡು ಮಗುವಿನ ಶಾಲೆ ಬಿಡಿಸಿ ವರ್ಷವಿಡೀ ಮಗುವಿಗೆ ತರಕಾರಿ ಉತ್ತಮ ಆಹಾರ ನೀಡುವ ಮೂಲಕ ಮಗುವನ್ನು ಪೋಷಿಸತೊಡಗಿದರು. ವೈದ್ಯರು ಹೇಳಿದ ಸಲಹೆಗಳನ್ನು ಪಾಲಿಸುತ್ತಾ ಬದುಕಿದರು. ಇದೊಂದು ಪುಟ್ಟ ನಿದರ್ಶನ. ಮಕ್ಕಳ ಮೇಲೆ ಒತ್ತಡ ಹೇರುವ ಮೂಲಕ ತಂದೆತಾಯಿಗಳು ಅವರ ಆಸಕ್ತಿ ಗಮನಿಸದೇ ಒತ್ತಡ ಹೇರಿದಾಗ ಈ ರೀತಿಯ ಘಟನೆಗಳು ಸಂಭವಿಸುತ್ತವೆ.
ಆದ್ದರಿಂದ ಪ್ರತಿ ತಂದೆ ತಾಯಿಗಳು ಮಕ್ಕಳ ವಯಸ್ಸಿಗೆ ಅವರ ಆಸಕ್ತಿಗಳಿಗೆ ಅಭಿರುಚಿಗಳನ್ನು ಗಮನಿಸಿ ಅವರಿಗೆ ಯಾವುದಕ್ಕೆ ಅರ್ಹರು ಎಂಬುದನ್ನು ಒದಗಿಸಿ ಅವರ ಶಿಕ್ಷಣ ಕೊಡಿಸುವುದು ಉತ್ತಮ ಎನ್ನುವ ಮಾತು.
1998 ರಲ್ಲಿ ಮುಂಬೈನಲ್ಲಿ ಒಂದು ಅಧ್ಯಯನದ ಪ್ರಕಾರ ಮುಂಬೈನ ಆಸ್ಪತ್ರೆಯನ್ನು 540% ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅರ್ಥ ಮಾಡಿಕೊಳ್ಳುವುದು ತುಂಬಾ ತ್ರಾಸದಾಯಕ ಕೆಲಸ. ಮಗುವಿನ ವರ್ತನೆಗೆ ಹಲವಾರು ಸಂಗತಿಗಳು ಕಾರಣವಾಗುತ್ತವೆ. ಒಂದು ಆಂತರಿಕ ಮತ್ತೊಂದು ಬಾಹ್ಯ ಸಂಗತಿಗಳು. ನಾವು ನಮ್ಮ ತಾಳ್ಮೆ, ಸಹನೆ. ಪ್ರೋತ್ಸಾಹದ ನುಡಿಗಳ ಮೂಲಕ ಮಗುವಿನೊಂದಿಗೆ ಮಗುವಾಗುವಂತೆ ಬೆರೆಯುವ ಮೂಲಕ ಮಕ್ಕಳ ಮನಸ್ಸಿನ ಭಾವನೆಗಳನ್ನು ಅರಿಯಲಾಗುವುದಿಲ್ಲ. ಮಗುವಿನ ಮಿದುಳಿನ ವಿವಿಧ ಕೇಂದ್ರಗಳ ಜಾಗೃತಿ ಮತ್ತು ಬೆಳವಣಿಗೆ ಆಯಾಯ ಪ್ರಾಯದಲ್ಲಿ ನಡೆದಿರಬೇಕು. ತಪ್ಪಿದಲ್ಲಿ ಅದಕ್ಕೆ ಸಂಬಂಧಿಸಿದ ಶಾಶ್ವತ ತೊಂದರೆ ಎದುರಿಸಬೇಕಾಗುತ್ತದೆ. ಮಕ್ಕಳ ಮನಸ್ಥಿಯನ್ನು ಅರ್ಥಮಾಡಿಕೊಂಡು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಂದೆತಾಯಿಗಳ ಪಾತ್ರ ಮಹತ್ವದ್ದು.
ಮಕ್ಕಳು ಇಂದು ದುಶ್ಚಟಗಳಿಗೆ ಕೂಡಿಡುತ್ತಿದ್ದಾರೆ ಪರೀಕ್ಷೆಗೆ ಹೋಗುವಾಗ ಅವರ ಜೇಬಿನಲ್ಲಿ ಪರೀಕ್ಷಾ ನೋಂದಣಿ ಪತ್ರದ ಜೊತೆಗೆ ಸ್ಟಾರ್ ಗುಟ್ಕಾದಂತಹ ತುಂಬಾ ಮಿಶ್ರಿತ ಪಾಕೀಟುಗಳು ಸಿಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ಈ ಕುರಿತು ಕೆಲವು ಪಾಲಕರು ಹೆಚ್ಚು ಜವಾಬ್ದಾರಿ ವಹಿಸಬೇಕಾಗಿದೆ.
ಮಕ್ಕಳಿಗೆ ಕೇವಲ ಅಕ್ಷರಜ್ಞಾನ ಕೊಟ್ಟರೆ ಸಾಕೇ, ? ಶಿಕ್ಷಣಕ್ಕಾಗಿ ಶಾಲೆಗೆ ಕಳಿಸಿದರಾಯ್ತೆ? ಸುಂದರವಾದ ಬಟ್ಟೆ ಕೊಡಿಸಿದರೆ ಸಾಕೆ. ? ಅಳುವಾಗ ಆಟಿಕೆ ಕೊಡಿಸಿದರೆ ಸಾಕೆ. ? ಹಿರಿಯರಾದ ನಾವು ನಮ್ಮ ಆಸಕ್ತಿಗಳನ್ನು ಆಸಕ್ತಿಗಳನ್ನು ಪಡೆದುಕೊಳ್ಳಲು ದಿನದ 24 ಗಂಟೆ ಚಿಂತಿಸುತ್ತಿರುವಾಗ ಅದೇ ನಮ್ಮ ಮಗುವಿನಲ್ಲಿಯೂ ಹತ್ತು ಹಲವು ಆಸೆಗಳಿವೆ, ಅಂಕುರಗಳಿವೆ ನಾವೇಕೆ ಅರಿಯುತ್ತಿಲ್ಲ.?
*ಮಕ್ಕಳ ಸಮಸ್ಯೆ ಅರಿಯಿರಿ*
ಮಕ್ಕಳು ಶಾಲೆಗೆ ಹೋಗದಿದ್ದರೆ ಅಥವ ಶಾಲೆಗೆ ಹೋಗಲು ಹೆದರುತ್ತಿದ್ದರೇ ಅವರು ಬೈಯದಿರಿ, ಹೊಡೆಯದಿರಿ, ಅದಕ್ಕೆ ನಿಜವಾದ ಕಾರಣ ತಿಳಿಯಿರಿ, ಶಾಲೆಯವರೆಗೂ ಹೋಗಿ ಆತನ ಸಮಸ್ಯೆಗೆ ಪರಿಹಾರ ಕಂಡುಕೊಂಡು ಆತನ ಭಯವನ್ನು ನಿವಾರಿಸಿ, ಮಕ್ಕಳ ತಕರಾರುಗಳ ಬಗ್ಗೆ ಗಮನ ಕೊಡಿ, ಆ ಮಗುವಿಗೆ ಶಾಲೆಗೆ ಹೋಗದಿದ್ದರೆ ಆ ಮಗುವಿಗೆ ದೈಹಿಕ ಬೆಳವಣಿಗೆ, ಮಾನಸಿಕ ವಿಕಸನದ ಕಡೆಗೆ ಪೂರಕವಾಗಿರಬಹುದು. ಅಥವ ಅಕ್ಕಪಕ್ಕದ ಮನೆಯ ವಾತಾವರಣಕ್ಕೆ ಸಂಬಂಧಿಸಿದ್ದಿರಬಹುದು. ಮಗುವಿನ ಹೇಳಿಕೆ ಖೊಟ್ಟಿ ಎಂದು ಅಲ್ಲಗಳೆಯದೇ ಅವರನ್ನು ಸಂಯಮದಿಂದ ಮಾತನಾಡಿಸಿ ನಿಮ್ಮ ಮಾತುಗಳಿಗೆ ಮಗು ಖುಷಿಯಾಗಿ ಖುಷಿಯಾಗುತ್ತಿದೆ ಎಂದರೆ ಚಿಂತೆಯಿಲ್ಲ, ಇಲ್ಲದಿದ್ದರೆ ಮಕ್ಕಳ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಿ.
ಮಕ್ಕಳು ನಿಮಗೆ ಗೊತ್ತಿಲ್ಲದಂತೆ ಸಹವಾಸ ದೋಷದಿಂದ ದುಶ್ಚಟಕ್ಕೆ ಅಂಟಿಕೊಳ್ಳಬಹುದು. ಅಂಥ ಮಗುವಿನ ಬಗ್ಗೆ ಎಚ್ಚರಿಕೆ ವಹಿಸಿ, ಜೊತಗೆ ಆ ಮಗುವಿಗೂ ತಿಳುವಳಿಕೆ ಹೇಳಿ, ಸಂಬಂಧಿ ಪಾಲಕರೊಂದಿಗೆ ಸೌಜನ್ಯದಿಂದ ಆ ಮಗುವಿನ ವರ್ತನೆಯ ಬಗ್ಗೆ ಗಮನ ಸೆಳೆಯಿರಿ.
ಮಕ್ಕಳ ಎದುರು ದೂರದರ್ಶನದ ಸದಭಿರುಚಿಯ ಕಾರ್ಯಕ್ರಮಗಳನ್ನು ವೀಕ್ಷಿಸಿ, ಕ್ರೌರ್ಯ, ಹಿಂಸೆ ತುಂಬಿದ ಕಾರ್ಯಕ್ರಮಗಳನ್ನು ಮಕ್ಕಳ ಮುಂದೆ ನೀವೂ ಕೂಡ ನೋಡಬೇಡಿ ಅಂಥವುಗಳು ಕೂಡ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ.
ನಿಮ್ಮ ಮಕ್ಕಳನ್ನು ಬಿಡುವ ಸಮಯದಲ್ಲಿ ಬೇರೆ ಸ್ಥಳಗಳು ಅಂದರೆ ಪ್ರವಾಸ ತಾಣಗಳನ್ನು ಪಡೆದುಕೊಳ್ಳಿ ಅವರ ಜ್ಞಾನ ಬೆಳವಣಿಗೆಗೆ ಪೂರಕವಾಗುವ ನೈತಿಕ ಕಥೆಯನ್ನು ಹೇಳುವುದನ್ನು ಸೂಚಿಸಿ.
ಮಕ್ಕಳೆದುರು ತಂದೆ-ತಾಯಂದಿರು ಯಾವತ್ತೂ ಜಗಳವಾಡಬೇಡಿ, ಅಥವ ಪರಸ್ಪರ ದೂಷಿಸುವುದು, ಅಥವ ಮಾತು ಬಿಡುವುದು ಇಂಥ ಕೃತ್ಯಗಳಲ್ಲಿ ತೊಡಗಬೇಡಿ ಅದು ಕೂಡ ನಮ್ಮ ಅಪ್ಪ-ಅವ್ವ ಹೀಗೆ ಅಂಥ ಅವರಲ್ಲಿ ಕೀಳರಿಮೆ ಬರುವ ಸಾಧ್ಯತೆ ಇದೆ.
ಇಬ್ಬರು ಮಕ್ಕಳಿದ್ದಾಗ ಅವರಲ್ಲಿ ಮೇಲು ಕೀಳು ಎಂಬ ಬಾವನೆ ಬಿಂಬಿಸಬೇಡಿ, ನೀವೂ ಕೂಡ ಹಾಗೆ ನಡೆದುಕೊಳ್ಳದಿರಿ.
ಮಕ್ಕಳನ್ನು ತಂದೆತಾಯಿಗಳು ತಮ್ಮ ಸ್ವತ್ತು ಎಂದು ಭಾವಿಸಿ ಅವರಿಂದ ಅತಿಯಾದ ವಿಧೇಯತೆಯನ್ನು ನಿರೀಕ್ಷಿಸುವುದು ದೊಡ್ಡ ತಪ್ಪು. ಮಕ್ಕಳ ಶಿಕ್ಷಣಕ್ಕಾಗಿ ತಾವು ಮಾಡುತ್ತಿರುವುದು ದೊಡ್ಡ ತ್ಯಾಗದ ಖರ್ಚು ಎಂದು ಅವರ ಶಾಲೆಗೆ ಸಂಬಂದಪಟ್ಟಂತೆ ತಿಳಿದುಕೊಳ್ಳುವುದು ಅವರ ಜ್ಞಾನದ ಪ್ರಕಾರ ಎಂದು ಬಯಸುವುದು ನಿಜವಾಗಿಯೂ ಘೋರ ಒತ್ತಡಕ್ಕೆ ಕಾರಣ.
ವಸತಿ ಸಹಿತ ಶಾಲೆಗಳಲ್ಲಿ ಮಕ್ಕಳನ್ನು ಇಡುವುದು ತಪ್ಪಲ್ಲ ಆದರೆ ಆ ಮಕ್ಕಳಿಗೆ ನಿಮ್ಮ ಪ್ರೀತಿಯ ಪ್ರೋತ್ಸಹವೂ ಮುಖ್ಯವಾಗಿರುತ್ತದೆ.
ಅತೀ ಹೆಚ್ಚು ಪಾಕೆಟ್ ಮನಿ ಮಕ್ಕಳಿಗೆ ಕೊಡಬೇಡಿ ಹಾಗಂತ ಹಣ ಕೊಡುವುದೇ ತಪ್ಪಲ್ಲ. ಅದು ಎಷ್ಟು ಅವಶ್ಯಕವೋ ಸಮಯ ಸಂದರ್ಭ ತಿಳಿದು ಕೊಡಿ,
ಮನೆಯಲ್ಲಿ ಪ್ರಕೃತಿ ಪ್ರೀತಿ. ತಂದೆತಾಯಿ, ಗುರು ಹಿರಿಯರಿಗೆ ತೋರಬೇಕಾದ ಪ್ರೀತಿ, ನಮ್ಮ ಸಂಸ್ಕøತಿ ನಡೆ ನುಡಿಗಳು, ರಾಷ್ಟ್ರಪ್ರೇಮ ಬಿಂಬಿಸುವ ಕಥೆಗಳು ಮುಂತಾದ ಚಟುವಟಿಕೆಗಳಲ್ಲಿ ತೊಡುಗುವ ಮೂಲಕ ಮಕ್ಕಳ ಮನಸ್ಸನ್ನು ಬೆಳೆಸಿ.
ಅಶಿಸ್ತು ಮತ್ತು ಅತಿಯಾದ ಶಿಸ್ತು ಎರಡೂ ತುಂಬಾ ಅಪಾಯಕಾರಿ ಕಾರಣ ನಿಮ್ಮೊಲುಮೆಯ ಶ್ರೀರಕ್ಷೆ ನಿಮ್ಮ ಮಕ್ಕಳಿರಲಿ.
ಒತ್ತಡವು ನಮ್ಮನ್ನು ಸಾಯಿಸುವ ಮೊದಲು ಅದನ್ನು ನಮ್ಮೊಳಗಿಂದ ಸಾಯಿಸಬೇಕು, ಒತ್ತಡವನ್ನು ನಿಭಾಯಿಸುವುದನ್ನು ಕಲಿತರೆ ಜೀವನ ನಿರ್ವಹಣೆ ಸುಲಭ.
ಮಕ್ಕಳ ಮನಸ್ಸು ಹೂವಿನಂತೆ ಅದನ್ನು ಘಾಸಿಗೊಳಿಸಿ ಒತ್ತಾಯವನ್ನು ಹೇರಿ ಒತ್ತಡಕ್ಕೆ ಸಿಲುಕಬೇಡಿ, ಅವರ ಆಸೆ-ಆಕಾಂಕ್ಷೆಗಳನ್ನು ಬೇಕು ಬೇಡಗಳನ್ನು ತಿಳಿದುಕೊಂಡು ಸಾಗಿದಾಗ ಮಗುವಿನ ಮನಸ್ಸು ಅರಳೀತು. ಜೊತೆಗೆ ನಿಮಗೂ ನೆಮ್ಮದಿ. ಮಕ್ಕಳು ಮನುಕುಲದ ಆಶಾ ಕುಸುಮಗಳು, ಮನೆಯಂಗಳದಿ ಬೆಳಗುವ ಮಂಗಳ ದೀಪಗಳು ಭಾವೀ ರಾಷ್ಟ್ರದ ಭಾಗ್ಯೋದಯ ಶಿಲ್ಪಿಗಳು. ಮಕ್ಕಳ ಆಸ್ತಿ ಅಂತಸ್ತು ಕೂಡಿಡ ಮಕ್ಕಳನ್ನೇ ನಿಮ್ಮ ಆಸ್ತಿಯನ್ನಾಗಿ ಮಾಡಿಕೊಳ್ಳಿ.
*ವೈ. ಬಿ. ಕಡಕೋಳ*
*ಶಿಕ್ಷಕ ಸಾಹಿತಿಗಳು*
*ಮಾರುತಿ ಬಡಾವಣೆ* *ಸಿಂದೋಗಿ ಕ್ರಾಸ್ ಮುನವಳ್ಳಿ* 591117
*ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ*