Iranna Kadadi: ಸಕ್ಕರೆ ಕಾರ್ಖಾನೆಗಳಿಂದ ರೈತರ ಶೋಷಣೆಯಾಗದಿರಲಿ

Must Read

ಬೆಳಗಾವಿ: ರಾಜ್ಯದಲ್ಲಿ ಸಕ್ಕರೆ ಉದ್ಯಮ ನಿರೀಕ್ಷೆಗೂ ಮೀರಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಮತ್ತು ಸಕ್ಕರೆ ಕಾರ್ಖಾನೆಗಳು ಸಹ ಒಳ್ಳೆಯ ಲಾಭದಲ್ಲಿವೆ ಆದರೆ ಅವುಗಳಿಂದ ರೈತರಿಗೆ ಅಥವಾ ಸರ್ಕಾರಕ್ಕೆ ಏನೂ ಲಾಭ ಆಗುತ್ತಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ವಿಷಾದ ವ್ಯಕ್ತಪಡಿಸಿರುವುದು ಸಕ್ಕರೆ ಉದ್ಯಮದ ಕರಾಳ ಮುಖವನ್ನು ತೋರಿಸಿದಂತಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಜೂ-22 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ನಿನ್ನೆ ಬೆಳಗಾವಿಯಲ್ಲಿ ಸಚಿವರು ಹೇಳಿದ ಪ್ರಕಾರ ಕಬ್ಬು ಬೆಳೆಗಾರರಿಗೆ ರಾಜ್ಯದಲ್ಲಿ ಎಲ್ಲ ಕಾರ್ಖಾನೆಗಳು 400 ಕೋಟಿ ರೂ. ಬಾಕಿ ಕೋಡಬೇಕಾಗಿದ್ದು, ಇದು ಕಬ್ಬು ಬೆಳೆಗಾರ ರೈತರ ಶೋಷಣೆಯಾಗಿದೆ. ರೈತ ಕಾರ್ಖಾನೆಗೆ ಕಬ್ಬು ನೀಡುವಾಗ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿದ್ದು. ಸರಿಯಾದ ಲೆಕ್ಕಪತ್ರವಿಲ್ಲದೇ ಸಕ್ಕರೆ ಮತ್ತು ಅದರ ಉಪ ಉತ್ಪಾದನೆಗಳಲ್ಲಿ ಬಂದ ಲಾಭದಲ್ಲಿ ರೈತರಿಗೆ ಪಾಲು ಕೂಡ ಸಿಗುತ್ತಿಲ್ಲ. ಕಬ್ಬು ಬೆಳೆಯಲು ರೈತರು ಬಂಡವಾಳ ತೊಡಗಿಸಿ ವರ್ಷದ ಕೊನೆಗೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿ ಅವರು ಕೋಟ್ಟಾಗ ಹಣ ಪಡೆಯುವ ರೈತನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದರು.

ಕಾರ್ಖಾನೆ ಮಾಲಿಕರುಗಳನ್ನು ಕೇವಲ ಕಾರ್ಖಾನೆ ಮಾಲಿಕರಾಗಿ ನೋಡಬೇಕು ಹೊರತು, ಯಾವುದೇ ಪಕ್ಷ ಅಥವಾ ಯಾವುದೇ ಪಕ್ಷದ ಸರ್ಕಾರ ಅವರ ಬೆನ್ನಿಗೆ ನಿಲ್ಲದೇ ನಾಡಿಗೆ ಅನ್ನ ನೀಡುವ ರೈತ ವರ್ಗದ ಪರವಾಗಿ ಬೆಂಬಲ ನೀಡಬೇಕಾದ ಅಗತ್ಯವಿದೆ. ತೂಕದ ಯಂತ್ರಗಳಲ್ಲಿನ ಮೋಸವನ್ನು ತಡೆಯುವ ದೃಷ್ಟಿಯಿಂದ ಸರ್ಕಾರ ಕಾರ್ಖಾನೆ ಎದುರಿಗೆ ತೂಕದ ಯಂತ್ರದ ಅಳವಡಿಕೆ ಮಾಡಲಾಗುತ್ತದೆ ಎಂದು ಹೇಳಿದೆ. ಆದರೆ ಅದರ ನಿರ್ವಹಣೆಯನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸುತ್ತೇನೆ. ಮತ್ತು ಪಕ್ಷಾತೀತವಾಗಿ ಈ ಸಮಸ್ಯೆಯನ್ನು ಎದುರಿಸಬೇಕಾದ ಅಗತ್ಯ ಇದೆ. ಅದಕ್ಕೆ ಸಕ್ಕರೆ ಸಚಿವರು ಮೂಲತಃ ರೈತರಾಗಿರುವುದರಿಂದ ಅವರು ಇದನ್ನು ಪ್ರಾಮಾಣಿಕವಾಗಿ ಬಗೆಹರಿಸಬಹುದೆಂಬ ನಿರೀಕ್ಷೆ ನಾಡಿನ ರೈತರದಾಗಿದ್ದು ಅದರ ಬಗ್ಗೆ ಚಿಂತನೆಯಾಗಬೇಕೆಂದು ಸಂಸದ ಈರಣ್ಣ ಕಡಾಡಿ ಒತ್ತಾಯಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group