ಜಾಗೃತಿಯಿಂದ ಪರೀಕ್ಷೆ ನಡೆಸಿರುವುದು ಹರ್ಷದಾಯಕ – ತಹಸೀಲ್ದಾರ ಮಹಾತ್

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಮೂಡಲಗಿ : ಕೋವಿಡ್-19 ಎಸ್.ಒ.ಪಿಯ ಪ್ರಕಾರ ಅಗತ್ಯ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಪ್ರಥಮ ಪರೀಕ್ಷೆಯು ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ಮಂದಹಾಸದೊಂದಿಗೆ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವದು ಸಂತಸ ತಂದಿದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ಜರುಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರಥಮ ಪರೀಕ್ಷೆಯ ಹಿನ್ನೆಲೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕ್ರಮಗಳ ಕುರಿತು ಮಾತನಾಡಿ, ಪರೀಕ್ಷೆಗಳು ಪ್ರತಿಯೊಬ್ಬರಿಗೂ ಪುನರಾವಲೋಕನ ಮಾಡಿಕೊಳ್ಳಲು ಅತ್ಯುತ್ತಮ ಸಾಧನವಾಗಿದೆ. ಕೊರೋನಾ ಭೀತಿಯಿಂದಾಗಿ ಸರಕಾರ, ಇಲಾಖೆ, ಶಿಕ್ಷಣ ತಜ್ಞರ ಅಭಿಪ್ರಾಯ, ಪಾಲಕ ಪೋಷಕರ ಮಾರ್ಗದರ್ಶನದಂತೆ ಈ ವರ್ಷದ ಪರೀಕ್ಷೆಗಳು ವಿಷಯಗಳು, ಅಂಕಗಳು ಹಾಗೂ ಸಮಯದಲ್ಲಿ ಬದಲಾವಣೆ ಮಾಡಿ ಮಾಡುತ್ತಿದ್ದಾರೆ. ಮೂಡಲಗಿ ವಲಯ ಶೈಕ್ಷಣಿಕವಾಗಿ ಅನೇಕ ರಂಗಗಳಲ್ಲಿ ಸಾಧನೆ ಮಾಡಿದೆ. ಪರೀಕ್ಷೆಯ ವಿಷಯದಲ್ಲಿ ಜಾಗರೂಕತೆಯಿಂದ ನಿರ್ವಹಿಸಿರುವದು ಹರ್ಷದಾಯಕವಾಗಿದೆ ಎಂದರು

ಆಶಾ ಕಾರ್ಯಕರ್ತೆಯರು ಸ್ಕ್ಯಾನ್ ಸ್ಯಾನಿಟೈಜ್ ಮಾಡಿ ಮಾಸ್ಕ ನೀಡಿ, ಆರೋಗ್ಯ ಸಿಬ್ಬಂದಿ ಆರೋಗ್ಯ ಪರಿಶೀಲಿಸಿ ಪರೀಕ್ಷಾ ಕೊಠಡಿಗಳಿಗೆ ಕಳುಹಿದ್ದಾರೆ. ಪರೀಕ್ಷಾ ಕೇಂದ್ರಗಳು ಸಾರ್ವಜನಿಕರು ಜನರಹಿತರಾಗಿ ಕಲಂ 144 ನಿಷೇದಾಜ್ಞೆಯಂತೆ ಸಹಕಾರ ನೀಡಿರುತ್ತಾರೆ. ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ವಲಯದ 6923 ಪರೀಕ್ಷಾರ್ಥಿಗಳಿಗೆ ಬಿಸ್ಕಟ್, ಮಾಸ್ಕ್ ಉಚಿತವಾಗಿ ನೀಡಿರುವುದು ಅವರ ಶಿಕ್ಷಣ ಪ್ರೇಮ ಮೆಚ್ಚುವಂತಹದು. ಸಾರಿಗೆ ಸಂಸ್ಥೆಯವರ ಬಸ್ ವ್ಯವಸ್ಥೆ, ಸ್ಥಳೀಯ ಆಡಳಿತಗಳಿಂದ ಸ್ಯಾನಿಟೈಜ್, ಪೋಲಿಸ್, ಸ್ಕೌಟ್ ಮತ್ತು ಗೈಡ್ಸ್, ದೈಹಿಕ ಶಿಕ್ಷಕರು ಅಚ್ಚುಕಟ್ಟಾಗಿ ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿರುವದು ನಿಜಕ್ಕೂ ಹರ್ಷದಾಯಕವಾಗಿದೆ ಎಂದು ತಿಳಿಸಿದರು.

- Advertisement -

ಸಾರ್ವಜನಿಕ ಶಿಕ್ಷಣ ಇಲಾಖೆಯ ಪದನಿಮಿತ್ತ ಸಹ ನಿರ್ದೇಶಕ ರಾಜೀವ ನಾಯ್ಕ ಗುರ್ಲಾಪೂರ ಮೂಡಲಗಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪ್ರತಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರತಿಶತವಾಗಿದೆ. ವಿದ್ಯಾರ್ಥಿಗಳು ಕೇಂದ್ರಗಳಲ್ಲಿ ಉತ್ಸುಕರಾಗಿ ಸುಲಲಿತವಾಗಿ ಪರೀಕ್ಷೆಯನ್ನು ಯಶಸ್ವಿಗೋಳಿಸಿದ್ದಾರೆ ಎಂದು ಅಭಿಪ್ರಾಯ ತಿಳಿಸಿದರು.

ಬಿಇಒ ಎ.ಸಿ ಮನ್ನಿಕೇರಿ ಮಾಹಿತಿ ನೀಡಿ, ವಲಯ ವ್ಯಾಪ್ತಿಯಲ್ಲಿ 6923 ವಿದ್ಯಾರ್ಥಿಗಳ ಪೈಕಿ 3707 ಗಂಡು, 3212 ಹೆಣ್ಣು ಹಾಜರಾಗಿ ನಾಲ್ವರು ಗೈರಾಗಿದ್ದಾರೆ. ವಲಯ ವ್ಯಾಪ್ತಿಯಲ್ಲಿ 35 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಮಂಡಳಿಯ ನಿಯಮಾನುಸಾರ ಪರೀಕ್ಷೆ ಜರುಗಿದೆ. ವಿಶೇಷವಾಗಿ ಮೂಡಲಗಿ ವಲಯ ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕರು ನೀಡಿದ ಮಾದರಿ ಒಎಮ್‍ಆರ್ ಗಳಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಹಾಯಕವಾಗಿದೆ ಎಂದರು.

ಪರೀಕ್ಷಾ ಸಂದರ್ಭದಲ್ಲಿ ಚಿಕ್ಕೋಡಿ ಮಧ್ಯಾಹ್ನ ಉಪಾಹಾರ ಯೋಜನೆ ನಿರ್ದೇಶಕ ದೀಪಕ ಕುಲಕರ್ಣಿ, ಸಿಪಿಐ ವೆಂಕಟೇಶ ಮುರನಾಳ, ಶ್ರೀಶೈಲ್ ಬ್ಯಾಕೋಡ, ನಾಗನೂರ ಪರೀಕ್ಷಾ ಕೇಂದ್ರದ ಅಧಿಕ್ಷಕ ಕರೆಪ್ಪ ಮಾರಾಪೂರ, ಪಿಎಸ್‍ಐಗಳಾದ ಹಾಲಪ್ಪ ಬಾಲದಂಡಿ, ಹನಮಂತ ನೇರಳಿ, ಎಚ್.ಎಚ್ ಕರನಿಂಗ ಹಾಗೂ ಪರೀಕ್ಷಾ ಸಿಬ್ಬಂದಿಗಳು ಹಾಜರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!