ಉತ್ತಮ ಶೌಚ ಧರ್ಮ (purity )
ಸುಖವು ವಸ್ತುವಿನಲ್ಲಿ ಇಲ್ಲ, ಅದು ಮಾನವನ ಮನದಲ್ಲಿದೆ, ಆತ್ಮದಲ್ಲಿದೆ. ವಸ್ತುವಿನ ಸುಖ ಬೋಗಕ್ಕೆ ಮಾತ್ರ. ಬೋಗ ಕ್ಷಣಿಕ ಸುಖ ನೀಡುತ್ತದೆ ಆದರೆ ಆತ್ಮ ಸುಖ ಮಾತ್ರ ಶಾಶ್ವತ ಸುಖ ನೀಡುತ್ತದೆ. ಆದ್ದರಿಂದ ಜೀನೆಂದ್ರ ಭಗವಂತನ ಧ್ಯಾನ ಅವನಲ್ಲಿ ಲೀನನಾಗುವದು ಮಾತ್ರ ಉತ್ತಮ ಸುಖ ನೀಡಲು ಸಾಧ್ಯ.
ಅಂತರಾತ್ಮನಲ್ಲಿ ಒಡಮೂಡುವ ಲೌಕಿಕ ಸುಖವೇ ನಿಜವಾದ ಸುಖ. ವಸ್ತು ಆಸ್ತಿ ಬೆನ್ನುಹತ್ತಿ ನಿಜ ಪ್ರವೃತ್ತಿಯಿಂದ ಗಳಿಸಿದ್ಡು ಕೇವಲ ಭೋಗಸುಖ ಅದರ ಅನುಭವವು ಕ್ಷಣಿಕ.
ಶೌಚ ಎಂದರೆ ಶರೀರ ಮತ್ತು ಆತ್ಮನನ್ನು ನಿರ್ಮಲ ಮತ್ತು ಪವಿತ್ರವಾಗಿ ಇಟ್ಟುಕೊಳ್ಳವುದು. ಆನ್ಯಾಯದ ಸಂಪಾದನೆ ಪರಸ್ತ್ರೀಯ ಬಗ್ಗೆ ಮನಸ್ಸಿನೊಳಗೆ ಅನುರಾಗವನ್ನು ಇಡಕೂಡದು. ಅಭಕ್ಷ್ಯ ಆಹಾರವನ್ನು ಮಾಡಬಾರದು ಮತ್ತು ಸೇವಿಸಬಾರದು. ಭಗವಂತನ ಸ್ವರೂಪವನ್ನು ಪ್ರತಿನಿತ್ಯ ಪ್ರತಿಕ್ಷಣ ಧ್ಯಾನಿಸುತ್ತಾ ಇರಬೇಕು. ಅಹಿಂಸೆ ಸತ್ಯ ಅಚೌರ್ಯ್ ಬ್ರಹ್ಮಚರ್ಯ ಮತ್ತು ಅಪರಿಗ್ರಹ ಈ ಐದು ಮಹಾವ್ರತಗಳಿಂದ ನಿಜವಾದ ಶೌಚ ಧರ್ಮ ಏರ್ಪಡುತ್ತದೆ.
ಅಭ್ರರಹಿತ ವ್ಯೂಮ ಶೌಚ ಧರ್ಮ
ಶೌಚದಲ್ಲಿ ಪರಿಗ್ರಹ ವಿಷದ ಹೋಮ
ಶೌಚಧರ್ಮದಲಿ ಸುಕುಮಾರ ನಾಮ
ಶೌಚದಿ ಇದೆ ಕಷಾಯ ತ್ಯಾಗವು
ಹೀಗೆ ಅಂತರ್ ಪವಿತ್ರತೆಯೆ ಶೌಚಧರ್ಮವಾಗಿದೆ. ಅತಿಯಾಸೆ, ಜಿಪುಣತನ ಬಿಟ್ಟು ಉದಾರಿಗಳಾಗಿ ದಾನ ಧರ್ಮ ಮಾಡಿ ಜೀವಿಸುವುದೆ ಶೌಚ ಧರ್ಮವಾಗಿದೆ. ಉತ್ತಮ ಶೌಚ ಧರ್ಮ ಶುದ್ದಜಲದ ಸ್ನಾನ , ನಿರ್ಮಲ ವಸ್ತ್ರಧಾರಣೆ ಪರಮಾತ್ಮ ಚಿಂತನೆ ಪಂಚಣಮೋಕಾರ ಮಂತ್ರ ಜಪ ಮನದ ಕುಲುಷಿತ ಭಾವ ತೊರೆದು, ಜೀವದಯೆ ಹೊಂದಿ ಅಶುಚಿ ಕರ್ಮ ಹಿಂಸೆ ತ್ಯಜಿಸಿ, ಪಂಚೇಂದ್ರೀಯ ನಿಘ್ರಹಿಸಿ , ರಾತ್ರಿ ಭೋಜನ , ಕಂದ ಮೂಲ , ಗಡ್ದೆ ಗೆಣಸು ತ್ಯಾಗ ವ್ರತಧರಿಸಿ, ಶೌಚಧರ್ಮ ಪಾಲಿಸಿ.
ಓಂ ರ್ಹಿಂ ಶೌಚಧರ್ಮಾಂಗಾಯ ನಮ: ಜಲಗಂಧಾದಿ ನಿರುಮಪಾತಿ ಸ್ವಾಹಾ.
ಲೇಖಕಿ: ಲಲಿತಾ ಮ ಕ್ಯಾಸನ್ನವರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.ಹಲಗಾ ಬೆಳಗಾವಿ.