ಸಿಂದಗಿ – ಕನಕದಾಸರು ಈ ನಾಡು ಕಂಡ ಅತ್ಯಂತ ಶ್ರೇಷ್ಠ ಸಂತರಲ್ಲಿ ಒಬ್ಬರು. ಅವರ ಬದುಕು ಒಂದು ಇತಿಹಾಸ. ಸಿಂದಗಿ ಪಟ್ಟಣದಲ್ಲಿನ ಕನಕದಾಸರ ವೃತ್ತದ ಜೀರ್ಣೋದ್ಧಾರಕ್ಕೆ ಮತ್ತು ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲು ನಾನು ವೈಯಕ್ತಿಕವಾಗಿ ೫ ಲಕ್ಷಗಳನ್ನು ನೀಡುತ್ತೇನೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.
ಪಟ್ಟಣದ ಗೋಲಗೇರಿ ರಸ್ತೆಯಲ್ಲಿನ ಕನಕದಾಸರ ೫೩೭ ನೇ ಜಯಂತಿ ನಿಮಿತ್ತವಾಗಿ ಕನಕದಾಸರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಕನಕದಾಸರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಪ್ರಸ್ತುತ ದಿನಗಳಲ್ಲಿಯೂ ಸಹ ಸಮಾಜದ ಸಾಮಾಜಿಕ ಜಾಗೃತಿಗೆ ಪ್ರಮುಖ ಪಾತ್ರ ವಹಿಸುತ್ತವೆ. ಯುವ ಜನಾಂಗ ಶರಣರ, ಸಂತರ, ದಾಸರ ಬದುಕನ್ನು ಸಂಪೂರ್ಣವಾಗಿ ತಿಳಿದುಕೊಂಡು ತಮ್ಮ ಬದುಕನ್ನು ಉಜ್ವಲ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಪುರಸಭೆಯ ಅಧ್ಯಕ್ಷ ಶಾಂತವೀರ ಬಿರಾದಾರ, ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಕನಕದಾಸರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಪುರಸಭೆ ಸದಸ್ಯ ಹಾಸಿಮ್ ಆಳಂದ, ಪ್ರಕಾಶ್ ಹಿರೆಕುರುಬರ, ನಿಂಗಣ್ಣ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ, ಸುರೇಶ್ ಮಳಲಿ, ಜಯಶ್ರೀ ಹದನೂರು, ಸುನಂದಾ ಯಂಪುರೆ, ವರ್ಪಾ ಪಾಟೀಲ ಸೇರಿದಂತೆ ಅನೇಕರು ಇದ್ದರು.