ಕನ್ನಡ ಭಾಷೆ ವಿಶ್ವದ ಸರ್ವಶ್ರೇಷ್ಠ ಭಾಷೆ- ಡಾ.ಭೇರ್ಯ ರಾಮಕುಮಾರ್

Must Read

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಹಾಗೂ ಅರವತ್ತೈದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿರುವ ಕನ್ನಡ ಭಾಷೆ ವಿಶ್ವದ ಅತ್ಯಂತ ಪ್ರಾಚೀನ ಭಾಷೆ ಎಂಬ ಹಿರಿಮೆಯನ್ನು ಗಳಿಸಿದೆ ಎಂದು ಹಿರಿಯ ಸಾಹಿತಿ ,ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡದಲ್ಲಿ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ನುಡಿದರು.

ಮಹಾರಾಷ್ಟ್ರ ದ ಪುಣೆಯ ನಮ್ಮವರು ಸಂಸ್ಥೆಯ ಕನ್ನಡ ಕಲಿ ಕಾರ್ಯಕ್ರಮ ದ ನಾಲ್ಕು ಹಂತಗಳ ತರಭೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಇಡೀ ವಿಶ್ವಕ್ಕೇ ಕಾಯಕ ತತ್ವ ನೀಡಿದ ಬಸವಣ್ಣ, ವಿಶ್ವಮಾನವ ತತ್ವದ ಮೂಲಕ ಜಾಗೃತಿ ಮೂಡಿಸಿದ ರಾಷ್ಟ್ರಕವಿ ಕುವೆಂಪು, ಬಹಳ ಹಿಂದೆಯೇ ಪ್ರಜೆಗಳ ಅಭ್ಯುದಯಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಭದ್ರಾವತಿ ಕಬ್ಬಿಣದ ಕಾರ್ಖಾನೆ, ಗಂದದೆಣ್ಣೆ ಕಾರ್ಖಾನೆಗಳನ್ನು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಿ ನೀರಾವರಿಗೆ ಒತ್ತು ನೀಡಿದ ಸರ್ ಎಂ.ವಿಶ್ವೇಶ್ವರಯ್ಯ, ತ್ರಿಪದಿಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ಸರ್ವಜ್ಞ ,ಸರಳ ವಚನಗಳ ಮೂಲಕ ಸಾಮಾಜಿಕ ಬದಲಾವಣೆ‌ ಮೂಡಿಸಿದ ವಚನಕಾರರು ಕನ್ನಡ ನಾಡು,ನುಡಿ, ಸಂಸೃತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದವರು ವಿವರಿಸಿದರು.

ಬ್ರಿಟನ್,ಅಮೇರಿಕಾ ಸೇರಿದಂತೆ ಹಲವು ವಿದೇಶಗಳಲ್ಲಿ, ದೆಹಲಿ, ಚೆನ್ನೈ, ಹೈದರಾಬಾದ್, ಬೆಂಗಳೂರು,ಅಹಮದಾಬಾದ್ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ನಮ್ಮವರು ಸಂಸ್ಥೆಯು ನಡೆಸುತ್ತಿರುವ ಕನ್ನಡ ನಾಡು-ನುಡಿ ಸೇವೆ ಶ್ಲಾಘನೀಯವಾದುದು. ಹೊರನಾಡ ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ ಹಾಗೂ ತಲೆಗೊಂದು ಸೂರು ಒದಗಿಸುತ್ತಿರುವ ನಮ್ಮವರು ಸಂಸ್ಥೆಯು ಅತ್ಯಂತ ಸಮಾಜಮುಖಿ ಕಾರ್ಯಗಳನ್ನು ನಡೆಸಿದೆ. ಉತ್ತರ ಕರ್ನಾಟಕ ಹಾಗೂ ಕೊಡಗು ಜಿಲ್ಲೆ ಗಳಲ್ಲಿ ಇತ್ತೀಚೆಗೆ ತೀವ್ರ ಪ್ರವಾಹ ಪರಿಸ್ಥಿತಿ ತಲೆದೋರಿದಾಗ ನಮ್ಮವರು ತಂಡ ಪ್ರವಾಹಪೀಡಿತರಿಗೆ ಆಹಾರ, ಆರೋಗ್ಯ ಸಾಮಗ್ರಿಗಳು ಹಾಗೂ ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ಜನಸೇವೆ ನಡೆಸಿದೆ .ಇದು ಅತ್ಯಂತ ಶ್ಲಾಘನೀಯ ಕಾರ್ಯ ಎಂದವರು ವಿವರಿಸಿದರು.

ಗಡಿ ಪ್ರದೇಶಗಳಲ್ಲಿ ರುವ ಕನ್ನಡ ಶಾಲೆಗಳ ಸ್ಥಿತಿ, ಕನ್ನಡಿಗರ ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಗಡಿ ಪ್ರದೇಶಗಳಲ್ಲಿ ಸಹಾ ನಮ್ಮವರು ಸಂಸ್ಥೆಯು ಕನ್ನಡಿಗರಿಗೆ ಒತ್ತಾಸೆಯಾಗಿ ನಿಲ್ಲಬೇಕಾಗಿದೆ ಎಂದವರು ಕರೆ ನೀಡಿದರು.

ಶ್ರೀಮತಿ ವಿದ್ಯಾ ಮದಲಿ ಎಲ್ಲರನ್ನೂ ಸ್ವಾಗತಿಸಿದರು.ಶ್ರೀಮತಿ ಹೇಮಾ ಮಾಳಗಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ನಮ್ಮವರು ಸಂಸ್ಥೆಯ ಸಂಚಾಲಕರಾದ ಬಸವರಾಜ ಹಿರೇಮಠ ಸಂಸ್ಥೆಯ ಕಾರ್ಯಸಾಧನೆಗಳನ್ನು ವಿವರಿಸಿದರು. ವೀರನಗೌಡ ಪಾಟೀಲ್ ಅವರು ವಿದ್ಯಾರ್ಥಿಗಳ ಪರಿಚಯ ಮಾಡಿಕೊಟ್ಡರು. ಶಾಂತಲಾ ಬಿರಾದಾರ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group