ಕವನ: ಒಂಟಿ ಜೀವ

Must Read

ಒಂಟಿ ಜೀವ..

ಒಂಟಿ ಜೀವ ನಾನೆಂಬ ,
ಆತಂಕ ಬೇಡ ,
ಜಗದ ಉತ್ತಮ ನಿಲುವುಗಳು
ರೂಪುಗೊಂಡಿದ್ದು ,
ಒಂಟಿ ಆಲೋಚನೆಯ ಜಗದಲ್ಲಿ…

ಹಿಟ್ಲರ್ ನ ಅಧಿಕಾರ ದಾಹಕೆ ,
ಜಗತ್ತೇ ತಲ್ಲಣಿಸಿತು ,
ಘಜನಿ ಮಹಮ್ಮದ್ ನ
ಅಧಿಕಾರ ದಾಹದ ಆಲೋಚನೆಗೆ ,
ಭಾರತದ ಮೇಲೆ
ಹದಿಮೂರು ಬಾರಿ ಧಾಳಿಯಾಯ್ತು.

ಬಸವಣ್ಣನ ಸಮಾನತೆ,ಕಾಯಕ ತತ್ವಕೆ
ಕಲ್ಯಾಣದಲಿ ಮಹೋನ್ನತ ಕ್ರಾಂತಿಯಾಯ್ತು…
ಬುದ್ದ-ಮಹಾವೀರರ ಚಿಂತನೆಗೆ
ಸತ್ಯ-ಅಹಿಂಸೆ ಸಾರುವ
ಹೊಸ ಧರ್ಮ ಗಳ ಜನನವಾಯ್ತು,
ಗಾಂಧೀಜಿಯವರ ಸತ್ಯ,ತ್ಯಾಗ, ಅಹಿಂಸೆಯ ಹೋರಾಟಕೆ
ಭಾರತದಲಿ‌ ಬ್ರಿಟೀಷರ ಆಳ್ವಿಕೆ ಕೊನೆಯಾಯ್ತು…

ಆರ್ಯಭಟನ ‘ಸೊನ್ನೆ’ ಅಂಕಿಯ ಸಂಶೋಧನೆ ,
ಗಣಿತ ಲೋಕದಲಿ‌ ವಿಶ್ವಕೆ ಬೆಳಕು‌ ತಂತು,
ಅಬ್ದುಲ್ ಕಲಾಂರ ವೈಜ್ಞಾನಿಕ ನಿರ್ಧಾರಕೆ,
ಬಾಹ್ಯಾಕಾಶದಲಿ‌ ಭಾರತಕೆ ಕೀರ್ತಿ ಬಂತು…..

ಜಗದ ಅಭ್ಯುದಯದ ಹಿಂದೆ ,
ಒಂಟಿ ಜೀವದ ನಿರ್ಧಾರವಿದೆ,
ನಿರಂತರ ಕಠಿಣ ಪರಿಶ್ರಮ,
ತನ್ನ ನಿರ್ಧಾರವ ಜಗಕೆ ತಿಳಿಸುವ ,
ಜಗದ ಜನರ ಮನವ ಸೆಳೆಯುವ
ಮನೋಬಲದ ನಿರ್ಧಾರವಿದೆ..

ಒಂಟಿತನದ‌ ಬೇಸರ ಬಿಡು ,
ಜೀವನದ ಖಚಿತ ನಿರ್ಧಾರವ
ಒಂಟಿಯಾಗಿ ಕುಳಿತು ಮಾಡಿಬಿಡು,
ಆಪ್ತರಲಿ‌ ಸಲಹೆ-ಸಹಕಾರ‌ಪಡೆದುಬಿಡು,
ಜೀವನದಲಿ ಅಭ್ಯುದಯದತ್ತ ಸಾಗಿಬಿಡು


ಡಾ.ಭೇರ್ಯ ರಾಮಕುಮಾರ್ ,
ಸಾಹಿತಿಗಳು,ಪತ್ರಕರ್ತರು

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group