spot_img
spot_img

ಕವನ: ತಾರತಮ್ಯ

Must Read

- Advertisement -

ತಾರತಮ್ಯ

ಅಳುವ ಕಂದನಾ
ಧ್ವನಿಯು ಕೇಳಿತು
ತಾಯಿಯ ಮೊಗವು ಅರಳಿತ್ತು
ಹೆಣ್ಣೋ ಗಂಡೋ
ಭೇದವೆ ಇರದು
ತಾಯಿಯ ಮನದಲಿ ಕಿಂಚಿತ್ತೂ ||೧||

ಮನೆಯ ಹಿರಿಯರಿಗೆ
ಮೊಮ್ಮಗ ಬೇಕು
ಕುಲ ದೀಪಕನು ಬೇಕಿತ್ತು
ಬಾಲ ಗೋಪಾಲನೇ
ಬಂದಿಹನೆನ್ನುತ
ಕುಟುಂಬ ಸ್ವಾಗತ ಕೋರಿತ್ತು ||೨||

ವಠಾರ ತುಂಬಾ
ಪೇಢೆಯ ಹಂಚುತ
ಸಂತಸ ಪಟ್ಟರು ಜನರೆಲ್ಲ
ದೂರದಿ ಬಾಲೆ
ಅವರನೇ ನೋಡಲು
ಸಂಭ್ರಮವೇಕೆ ತಿಳಿದಿಲ್ಲ ||೩||

- Advertisement -

ಮನೆಯ ಭಾಗ್ಯವದು
ತೆರೆಯಿತು ಎನ್ನುತ
ಅಜ್ಜಿಯು ಭರದಲಿ ಸಾಗಿಹಳು
ಬಾಲೆಯ ಕರೆದು
ತಮ್ಮನ ತೋರುತಾ
ಹೇಗಿಹನೆಂದು ಕೇಳಿಹಳು ||೪|

ದಿನೆ ದಿನೆ ಅವನದೆ
ಸಡಗರ ಹೆಚ್ಚಿದೆ
ಎನ್ನುತ ಬಾಲೆ ಕೊರಗಿಹಳು
ಅಜ್ಜಿಯು ಮಾತ್ರ
ಬಾಲಕ ಕೃಷ್ಣನ
ಆಟ ಪಾಟ ಕೊಂಡಾಡಿಹಳು ||೫||

ದಿನಗಳು ಕಳೆದವು
ವರುಷಗಳುರುಳಿರೆ
ಮೊಮ್ಮಗ ಆರ್ಭಟ ತೋರುತ್ತ
ದರ್ಪವ ತೋರುತ
ಕಟುನುಡಿ ಆಡುತ
ಸೋಮಾರಿಯಾಗಿ ತಿರುಗುತ್ತ ||೬||

- Advertisement -

ಅತೀ ಪ್ರೀತಿಯನು
ತೋರಿದೆ ಎನ್ನುತ
ಅಜ್ಜಿಯು ಮನದಲಿ ಮರುಗಿದಳು
ಹಿರಿಯರ ಮಾತಿಗೆ
ಕಿವಿಗೊಡಲಿಲ್ಲ
ಎನ್ನುತ ಕಣ್ಣೀರ ಹರಸಿಹಳು ||೭||

ಹೆಣ್ಣು ಮಗುವದು
ಓದುತ ಬರೆಯುತ
ವಿನಯದಿ ಮುಂದಕೆ ಸಾಗಿಹಳು
ಮನೆಯ ಗೌರವವ
ಉಳಿಸಿ ಬೆಳೆಸುತಾ
ಉನ್ನತ ಹುದ್ದೆಯ ಪಡೆದಿಹಳು ||೮||

ಹೆಣ್ಣೋ ಗಂಡೋ
ಭೇದವ ಮಾಡದೇ
ಸರಿಸಮ ಪ್ರೀತಿಯ ಹಂಚೋಣ
ಅತಿ ಮುದ್ದಿನಲಿ
ಸಲುಗೆಯ ನೀಡದೆ
ಉತ್ತಮ ಸಂಸ್ಕಾರ ನೀಡೋಣ ||೯||


 ಶ್ರೀಮತಿ ಜ್ಯೋತಿ ಕೋಟಗಿ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group