ಅಸಲಿ-ನಕಲಿ
ವಿದೇಶಿ ವಿಚಾರ ಉಪಚಾರ-
ದಿಂದ ಪಡೆದ ಹುಟ್ಟು,
ಮೂಲ ಸೆಲೆ ಸೇರಿತಲ್ಲ ಸುಡುಗಾಡು
ಆಯ್ತಲ್ಲ ವಿದ್ರೋಹಿಗಳ ಗೂಡು
ಅಸಲಿ ನಕಲಿ ನಮಗಾಗೋದೇನ ॥
ಪರದೇಶಿ ಹಸ್ತದಿಂದಲೇ ಸ್ಥಾಪಿತ
ಅಂದು ಹೇಳಿದ್ದೇನು ರಾಷ್ಟ್ರಪಿತ
ಪರದೇಶಿಗಳಿಂದಲೇ ಆಗಲಿದೆ ಅಸ್ತಂಗತ
ತರಲಿದೆ ಸರ್ವರಿಗೆ ಸಮಾಧಾನ, … ಸಾವಧಾನ
ಅಸಲಿ ನಕಲಿ ನಮಗಾಗೋದೇನ ॥
ಅಂತಃಸತ್ವ ಕಳೆದು ಹೋಯ್ತೆಲ್ಲಿ
ಕುಟುಂಬ ವ್ಶಾಮೋಹ ಜಾಲದಲ್ಲಿ
ಮತ್ತೆ ‘ ಕುರುಕ್ಷೇತ್ರ ‘ ಪುತ್ರ ವ್ಶಾಮೋಹ
ನಕಲಿ ಗಾಂಧಿ, ದೃತರಾಷ್ಟ್ರ ತರಹ
ಅಸಲಿ ನಕಲಿ ನಮಗಾಗೋದೇನ ॥
ಏನಕೇನ ಯಾವುದಾದರೇನ
ನಾವು ಮೇಲೇರಿದರಾತೇನಽ
ಅಂಧ ಗಂಧಾ ದರಬಾರ
ಬಜಾಯಿಸೋದು ಸೇವಾ ಸಾಕಾರ
ಚಲಾಯಿಸೋದು ಸರ್ವಾಧಿಕಾರ.
ಅಸಲಿ ನಕಲಿ ನಮಗಾಗೋದೇನ ॥
ಸಂಕರ ಸಾಕಾರ ಆದ್ಮೇಲೆ
ಇದಲ್ವಾ ಶ್ರೇಷ್ಠತೆಯ ಅಭಿದಾನ
ಮುಂದಿನದು ಅಂಧಾ ಮತಗಳ ಮ್ಶಾಲೆ
ಏನಕೇನಾ ಮಮಕಾರ
ಅಸಲಿ ನಕಲಿ ನಮಗಾಗೋದೇನ ॥
ಸಾಮ್ರಾಟರ ಕಾಲ ಇತ್ತಲ್ಲ ಆಗ
ಮಜಾ ತಕ್ಕೊಂಡಮ್ಶಾಲೆ ಹುಟ್ಟಿದ ಉಕ್ತಿ
‘ ಸೂ…ಮಗ ಸುಬೇದಾರ, ಲಡಾಯಿದಾಗ ಹ್ವಾದ್ರ
ದುಃಖಪಡೋ ದರಕಾರನಾದ್ರು ನಮಗೇನ ‘ ?
ಅಸಲಿ ನಕಲಿ ನಮಗಾಗೋದೇನ ॥
ಅಮರ್ಜಾ
ಅಮರೇಗೌಡ ಪಾಟೀಲ
ಕುಷ್ಟಗಿ