- Advertisement -
ಬೆಳಗಾವಿ – ಕಸಾಪ ರಾಮದುರ್ಗ ಘಟಕದಿಂದ ಮಳೆಯ ಕುರಿತು ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಮಳೆಗಾಲ, ಮಳೆಯ ಮಹತ್ವ, ಮಳೆಗಾಲದ ಅವಾಂತರಗಳು, ತಮಗಾದ ಮಳೆಯ ಅನುಭವ, ಇತ್ಯಾದಿ ಮಳೆಯ ವಿಷಯದ ಕುರಿತು ತಾವು ರಚಿಸಿದ ಕವನವನ್ನು ವಾಚಿಸಬಹುದು. ಒಬ್ಬರು ಒಂದು ಕವನವನ್ನು ಮಾತ್ರ ವಾಚಿಸಬಹುದು. ಭಾಗವಹಿಸಲು ಆಸಕ್ತ ಕವಿಗಳು ತಮ್ಮ ಕವಿತೆಗಳನ್ನು ದಿನಾಂಕ ೩೦/೭/೨೦೨೩ ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ತಮ್ಮ ಕವಿತೆಗಳನ್ನು ಕಳುಹಿಸಲು ಕೋರಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಭಾಗವಹಿಸಿ ಕವಿಗೋಷ್ಠಿಯನ್ನು ಯಶಸ್ವಿಗೊಳಿಸಲು ವಿನಂತಿಸಲಾಗಿದೆ.
ಸಂಪರ್ಕಿಸಬೇಕಾದ ವಿಳಾಸ :
- ಪಾಂಡುರಂಗ ಜಟಗನ್ನವರ: ಮೋ ನಂ. ೮೧೨೩೫೦೨೭೭೦
- ಆರ್ ಕೆ ಬಿಕ್ಕಣ್ಣವರ: ಮೋ.ನಂ.- ೮೧೪೭೮೨೩೧೪೪
- ಎಸ್ ಎಸ್ ಹುಚ್ಚನ್ನವರ: ಮೋ.ನಂ- ೯೦೦೮೮೪೯೯೬೮
ಕವನಗಳನ್ನು ವಾಟ್ಸಪ್ ಮೂಲಕ ಕಳುಹಿಸಬಹುದು, ಆದರೆ ಕವಿಗೋಷ್ಠಿಯಲ್ಲಿ ಭಾಗವಹಿಸುವುದನ್ನು ಖಾತ್ರಿ ಪಡಿಸಬೇಕು ಎಂದು ವಿನಂತಿಸಲಾಗಿದೆ