ಬೆಳಗಾವಿ 21 ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ತಿಂಗಳ ಕಾಯ೯ಕ್ರಮ ಅಡಿಯಲ್ಲಿ ದಿ.ಡೆಪ್ಯುಟಿ ಚನ್ನಬಸಪ್ಪ ಅವರ ಬದುಕು ಬರಹ ಕುರಿತು ದಿ 21.01.2024ರಂದು ನೆಹರು ನಗರದ ಕನ್ನಡ ಭವನದಲ್ಲಿ ಜರುಗಿತು.
ಕಾರ್ಯಕ್ರಮ ದಲ್ಲಿ ಹೇಮಾವತಿ ಸೋನೊಳಿ ಅವರು ಉಪನ್ಯಾಸ ನೀಡುತ್ತಾ, ಇವರ ಪೂಣ೯ಹೆಸರು ಚನ್ನಬಸಪ್ಪ ಬಸಲಿಂಗಪ್ಪ ಧಾರವಾಡ 1865ರಲ್ಲಿ ಅವರು ಪ್ರಾರಂಭಿಸಿದ “ಮಠಪತ್ರಿಕೆ”ಮೊದಲ ಸಂಚಿಕೆಯಲ್ಲಿ ಅವರು ಕನಾ೯ಟಕ ಸೀಮೆ ಎಂಬ ಪದವನ್ನು ಉಲ್ಲೇಖಿಸಿದ್ದಾರೆ 155ವಷ೯ಗಳ ಹಿಂದೆಯೇ ಸಮಗ್ರ ಕನಾ೯ಟಕದ ಕಲ್ಪನೆಯನ್ನಿಟ್ಟುಕೊಂಡು “ಕನಾ೯ಟಕ”ಎಂಬ ಪದ ಬಳಸಿರುವುದು ನಿಜಕ್ಕೂ ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ ಕನ್ನಡದ ಡಿಂಡಿಮ ಬಾರಿಸಿದ ಕೀತಿ೯ ಅವರಿಗೆ ಸಲ್ಲುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಸುಭಾಷ ಏಣಗಿ ಅವರು ಆಗಮಿಸಿದ್ದರು. ಅತಿಥಿಗಳಾಗಿ ಎನ್ ಆರ್ ಠಕ್ಕಾಯಿ ಅವರು ಮಾತನಾಡುತ್ತ, ಕನ್ನಡ ಬೋಧಿಸಲು ಕನ್ನಡ ಪಂಡಿತರಿಂದ ಪಠ್ಯ ಪೂರಕ ಸಾಮಗ್ರಿ ರಚಿಸಿ ಪ್ರಾಥಮಿಕ ಶಾಲೆಗಳಿಗೆ ಪೂರೈಸಿ ಕನ್ನಡ ಕಲಿಕೆಗೆ ಭದ್ರ ಬುನಾದಿ ಹಾಕಿದವರು ಡೆಪೂಟಿ ಚನ್ನಬಸಪ್ಪ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಎಂ ವೈ ಮೆಣಸಿನಕಾಯಿ ಜಿಲ್ಲಾ ಕನ್ನಡ ಸಾಹಿತ್ಯ ಕಾಯ೯ದಶಿ೯ ಮಾತನಾಡಿ, ಜಿಲ್ಲೆಯಲ್ಲಿ ಸಮ್ಮೇಳನ ಮಾಡುತ್ತಿರುವ ಮಾಹಿತಿ ಕನ್ನಡ ಭವನ ನಿಮಾ೯ಣ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸುಧಾ ಪಾಟೀಲ ಉಪನ್ಯಾಸಕರ ಅತಿಥಿಗಳ ಪರಿಚಯ ಮಾಡಿದರು ಅಧ್ಯಕ್ಷತೆ ವಹಿಸಿದ ಮಂಗಲಾ ಮೆಟಗುಡ್ಡ ಅವರು ಬೆಳಗಾವಿ ಜಿಲ್ಲಾ ಸವಾ೯ಧ್ಯಕ್ಷರ ಭಾಷಣ ಪುಸ್ತಕ ಪ್ರಕಟಣೆ ಹಂತದಲ್ಲಿದ್ದು ಅದು ಪಿಎಚ್ಡಿ ಹಾಗೂ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದರು.
ಆಶಾ ಯಮಕನಮಡಿ೯, ಇಂದಿರಾ ಮೋಟೆಬೆನ್ನೂರ ಹಾಗೂ ಸಂಗಡಿಗರು ನಾಡಗೀತೆ ಮತ್ತು ಕನ್ನಡ ದೀಪ ಹಾಡಿದರು. ನಿರೂಪಣೆ ಯನ್ನು ಮಲ್ಲಿಕಾರ್ಜುನ ಕೋಳಿ ಮಾಡಿದರು. ಎಫ್ ವೈ ತಳವಾರ ಕಸಾಪ ಪ್ರತಿನಿಧಿ ಸ್ವಾಗತಿಸಿದರು. ಭಾರತಿ ಮದಭಾವಿ, ಸುರೇಶ ಹಂಜಿ, ಪಾಂಡುರಂಗ ಎಲಿಗಾರ, ದಯಾನಂದ ಧನವಂತ, ರಾಜನಂದಾ ಘಾಗಿ೯, ನರಸಿಂಗ ಕಮತೆ, ಅಜು೯ನ ಕಡೆಟ್ಟಿ, ಪ್ರಭುದೇವ ಹೀರೇಮಠ, ಡಾ ಅ ಬ ಇಟಗಿ, ಜ್ಯೋತಿ ಮಾಳಿ, ಶಾಂತಾ ಕಬ್ಬೂರ, ಪಿ ಎಲ್ ಹೂಗಾರ, ಪ್ರತಿಭಾ ಕಳ್ಳಿಮಠ, ಬಸನಗೌಡ ಹುಲ್ಲೆಪ್ಪನ್ನವರ, ಡಾ ಸುನಿಲಕುಮಾರ ವಿರಭದ್ರಪ್ಪ ಅಂಗಡಿ, ಶಿವಾನಂದ ತಲ್ಲೂರ, ಪ್ರವೀಣ ಕಡಬಿ, ಎಂ ಬಾವಖಾನ,ಚಪ್ರೊ ರಾಮಣ್ಣ ಸೊಗಲದ ಇತರರು ಉಪಸ್ಥಿತರಿದ್ದರು