spot_img
spot_img

ದಲಿತ ವಕೀಲನ ಕೊಲೆ ಆರೋಪಕ್ಕೆ ಖಂಡ್ರೆ ಉತ್ತರಿಸಬೇಕು – ಭಗವಂತ ಖೂಬಾ

Must Read

- Advertisement -

ಖಂಡ್ರೆ ಕುಟುಂಬದ ಮೇಲೆ ಕೊಲೆ ಆರೋಪ ಮಾಡಿದ ಖೂಬಾ.

ಬೀದರ್ – ಕಳೆದ ೬೫ ವರ್ಷಗಳಲ್ಲಿ ಖಂಡ್ರೆ ಕುಟುಂಬದ ಮೇಲೆ ಅನೇಕ ಕೊಲೆ ಆರೋಪಗಳಿವೆ. ಭಾಲ್ಕಿಯಲ್ಲಿ ಕುಂದೆ ಎನ್ನುವ ಒಬ್ಬ ದಲಿತ ವಕೀಲನ ಹತ್ಯೆ ಯಾರ ಅಂಗಳದಲ್ಲಿ ನಡೆಯಿತು, ಕೊಲೆ ಆರೋಪ ಯಾರ ಮೇಲಿದೆ ಎಂಬುದನ್ನು ಖಂಡ್ರೆಯವರು ಹೇಳಬೇಕು. ಸುರೇಶ ಖೇಡ ಎನ್ನುವವರು ನಿಮ್ಮ ಮನೆಯಂಗಳದಲ್ಲಿ ಜೀವ ಬಿಟ್ಟರು ಅದಕ್ಕು ಖಂಡ್ರೆಯವರೆ ಉತ್ತರ ಕೊಡಬೇಕು ಎಂದು ಬೀದರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಭಗವಂತ ಖೂಬಾ ಗಂಭೀರ ಆರೋಪ ಮಾಡಿದರು.

ಲೋಕಸಭಾ ಕ್ಷೇತ್ರದ ಚುನಾವಣೆಗೆ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸುವ ಮೊದಲು ಗಣೇಶ ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಕುಟುಂಬದ ವಿರುದ್ದ ಸಾಲು ಸಾಲು ಆರೋಪವನ್ನ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾಡಿದರು.

- Advertisement -

ಬುಧವಾರ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಹಾಗೂ ಕೈ ಅಭ್ಯರ್ಥಿ ಸಾಗರ ಖಂಡ್ರೆ ಹೇಳಿಕೆಗೆ ತಿರುಗೇಟು ನೀಡಿದ ಖೂಬಾ, ನನಗೆ ಸವಾಲ್ ಹಾಕುವ ಮೊದಲು ನಿಮ್ಮ ಕುಟುಂಬದ ಕುರಿತಾಗಿರುವ ಆರೋಪಗಳ ಕುರಿತು ಈಶ್ವರ ಖಂಡ್ರೆಗೆ ಉತ್ತರಿಸೊಕೆ ಹೇಳಿ ಎಂದು ಸಾಗರ್ ಖಂಡ್ರೆಗೆ ಪ್ರಶ್ನೆ ಮಾಡಿದರು.

ಸಾಗರ್ ಖಂಡ್ರೆ ಇನ್ನೂ ರಾಜಕೀಯದಲ್ಲಿ ಕಣ್ಣು ತೆರೆಯದ ಕೂಸು. ಸಾಗರ್ ಹುಟ್ಟುವ ಮೊದಲೇ ಖಂಡ್ರೆ ಕುಟುಂಬದ ಮೇಲೆ ಕೊಲೆ ಆರೋಪಗಳಿವೆ. ಖಂಡ್ರೆ ಮನೆ ಅಂಗಳದಲ್ಲೇ ದಲಿತ ವಕೀಲನ‌ ಕೊಲೆಯಾಗಿದೆ. ಸುರೇಶ ಖೇಡ್ ಎಂಬುವವರ ಹತ್ಯೆಯಲ್ಲಿ ಖಂಡ್ರೆ ಕುಟುಂಬದ ಹೆಸರಿದೆ, ಅಷ್ಟೇ ಅಲ್ಲದೇ ಈಶ್ವರ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಸಾರಿಗೆ ಸಚಿವರಾಗಿದ್ದಾಗ ಇಡೀ ಕರ್ನಾಟಕದ ಬಸ್‌ಗಳ ಟಿಕೆಟ್ ಡುಪ್ಲಿಕೇಟ್ ಮಾಡಿದ ಆರೋಪವಿದೆ. ಇಷ್ಟೆಲ್ಲಾ ಆರೋಪವಿರುವ ಕುಟುಂಬ ಯಾವ ಪುರುಷಾರ್ಥಕ್ಕೆ ಸಾಮಾಜಿಕ ಸೇವೆ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ ಎಂದು ಖಂಡ್ರೆ ಕುಟುಂಬದ ವಿರುದ್ದ ಹರಿಹಾಯ್ದರು.

ಗಡಿ ಜಿಲ್ಲೆ ಬೀದರ ನಲ್ಲಿ ಬಿಜೆಪಿ ಪಕ್ಷ ಶಕ್ತಿ ಪ್ರದರ್ಶನ ನೀಡಿತು. ಸಾವಿರಾರು ಜನ ಬೆಂಬಲಿಗರೊಂದಿಗೆ ಖೂಬಾ ಅವರು ನಾಮಪತ್ರ ಸಲ್ಲಿಸಿದರು. ಈ ಸಮಾವೇಶದಲ್ಲಿ ಕೆಂದ್ರ ಸಚಿವ ಭಗವಂತ ಖೂಖಾ ಖಂಡ್ರೆ ಕುಟುಂಬ ವಿರುದ್ಧ ವಾಗ್ದಾಳಿ ನಡೆಸಿದರು. ಬೀದರನಲ್ಲಿ ಬಿಸಿಲಿನ ತಾಪಮಾನ ಏರುತ್ತಿರುವುದು ಒಂದು ಕಡೆ ಆದರೆ ರಾಜಕೀಯ ನಾಯಕರು ತಂತಮ್ಮ ವೈಯಕ್ತಿಕ ಹಿನ್ನೆಲೆಗಳನ್ನು ಬಿಚ್ಚಿಡುವುದನ್ನು ನೋಡಿದರೆ ಬೀದರ ಬಿಸಿಲಿನ ಪ್ರಖರತೆಗೆ ಮತ್ತಷ್ಟು ಪ್ರಖರತೆ ಬರುವುದರಲ್ಲಿ ಸಂದೇಹವಿಲ್ಲ ಎನ್ನಲಾಗುತ್ತಿದೆ.

- Advertisement -

 

ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group