spot_img
spot_img

ಮಕ್ಕಳ ಕಥೆ: ರಾಜನಾಗಲು ಯೋಗ್ಯನಾರು?

Must Read

- Advertisement -

ರಾಜನಾಗಲು ಯೋಗ್ಯನಾರು?

ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದನು. ಆ ರಾಜನಿಗೆ ಐದು ಜನ ಮಕ್ಕಳಿದ್ದರು. ಅದರಲ್ಲಿ ಮೂರು ಜನ ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ರಾಜ ಮತ್ತು ಅವನ ಮಕ್ಕಳು ರಾಜಧಾನಿಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದರು.

ಮದುವೆಯ ವಯಸ್ಸಾದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ರಾಜ ಮದುವೆ ಮಾಡಿದನು. ಕೊನೆಯವಳು ಮಾತ್ರ ಕನ್ಯೆಯಾಗಿ ಉಳಿದಿದ್ದಳು. ಕೆಲವು ದಿನಗಳು ಉರುಳಿದ ನಂತರ ರಾಜನಿಗೆ ವಯಸ್ಸಾಗುತ್ತಾ ಹೋಯಿತು.

ಆಗ ಗಂಡು ಮಕ್ಕಳ ಹೆಂಡಂದಿರು ತಮ್ಮತಮ್ಮ ಗಂಡಂದಿರೇˌರಾಜರು ಆಗಬೇಕೆಂದು ಹವಣಿಸುತ್ತಿದ್ದರು. ಅದಕ್ಕಾಗಿ ಪ್ರತಿನಿತ್ಯ ತಮ್ಮ ಗಂಡಂದಿರಿಗೆ “ನೀನೇ ರಾಜ ಆಗಬೇಕೆಂದು ಹೇಳುತ್ತಿದ್ದರು”. ಹೆಂಡತಿಯ ಮಾತನ್ನು ಕೇಳಿದ ಗಂಡುಮಕ್ಕಳು ತಮ್ಮ ತಂದೆಯಲ್ಲಿಗೆ ಹೋಗಿ ,ಇಬ್ಬರು,

- Advertisement -

“ನಾನು ರಾಜ ಆಗುತ್ತೇನೆ”
“ನಾನು ರಾಜನಾಗುತ್ತೇನೆ”
” ನನ್ನನ್ನು ರಾಜನನ್ನಾಗಿ ಮಾಡಿ”

ಎಂದು ಕೇಳಿಕೊಂಡರು. ಇಬ್ಬರು ಯುವರಾಜರಲ್ಲಿ ಯೋಗ್ಯರಾದ ವರನ್ನು ರಾಜನನ್ನಾಗಿ ಮಾಡಬೇಕೆಂದು ತಿಳಿದು ರಾಜ ತಮ್ಮ ಮಕ್ಕಳಲ್ಲಿ ಎಂತಹ ಗುಣಗಳಿವೆ ಎಂದು ಪರೀಕ್ಷಿಸಲು ಅವರಿಗೆ ಒಂದು ಕೆಲಸವನ್ನು ಹೇಳಿದ. ನಿಮ್ಮ ಕೊನೆಯ ತಂಗಿಗೆ ಒಬ್ಬ ಯೋಗ್ಯ ವರನನ್ನು ಹುಡುಕಿಕೊಂಡು ಬಂದು ಅವಳಿಗೆ ವಿವಾಹವನ್ನು ಮಾಡಬೇಕು.

ಆಕೆ ಯಾರು ಕರೆದುಕೊಂಡು ಬಂದ ವರನನ್ನು ಮದುವೆಯಾಗುತ್ತಾಳೋ ಅವನೇ ಈ ರಾಜ್ಯದ ರಾಜನಾಗುತ್ತಾನೆ ಎಂದು ಹೇಳುತ್ತಾನೆ.

- Advertisement -

ಅದಕ್ಕೆ ಹಿರಿಯ ಮಗ ಏನೂ ವಿಚಾರಿಸದೇ ಪಕ್ಕದ ರಾಜ್ಯಕ್ಕೆ ಹೋಗಿ ಆ ರಾಜ್ಯದ ರಾಜಕುಮಾರನನ್ನು ಕರೆದುಕೊಂಡು ಬರುತ್ತಾನೆ. ಆ ರಾಜಕುಮಾರ ವ್ಯಸನಿಯೂˌ ದುಂದುವೆಚ್ಚಗಾರನೂ ಆಗಿ ಆಡಂಬರದ ಜೀವನವನ್ನು ನಡೆಸುತ್ತಿರುತ್ತಾನೆ.

ಕಿರಿಯ ಮಗ ದೇಶಾಂತರ ಪರ್ಯಟನೆ ಮಾಡಿ ಬಿಸಿಲಿನಿಂದ ಬಳಲಿ ಒಂದು ಊರನ್ನು ದಾಟಿ ಹೋಗುವಾಗ ಬಾಯಾರಿಕೆಯಾಗಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ಒಬ್ಬ ರೈತನನ್ನು ನೀರು ಕೇಳುತ್ತಾನೆ.

ಆ ರೈತ ಚತುರಶಾಲಿಯೂ. ಸದೃಢನೂˌ ಹಾಗೂ ಆರ್ಥಿಕ ಚಿಂತಕನೂ ಆಗಿದ್ದು ಮುಖ್ಯವಾಗಿ ಮಾನವೀಯ ಗುಣವನ್ನು ಹೊಂದಿರುವ ಮಹಾನುಭಾವನಾಗಿರುತ್ತಾನೆ.

ಅವನಿಗೆ ಕಿರಿಯಮಗ ಕುಡಿಯಲು ನೀರನ್ನು ಕೇಳಿದಾಗ ತನ್ನ ಗದ್ದೆಯಲ್ಲಿರುವ ಎಳನೀರನ್ನು ತಂದು ಆತನ ಬಾಯಾರಿಕೆಯನ್ನು ನೀಗಿಸುತ್ತಾನೆ. ಕಿರಿಯ ರಾಜಕುಮಾರ ಆತನ ಗುಣ ಮೆಚ್ಚಿ ಅವನನ್ನು ಮತ್ತೆ ಎರಡುದಿನ ಅದೇ ಊರಿನಲ್ಲಿದ್ದು ಪರೀಕ್ಷಿಸುತ್ತಾನೆ.

ಆತನ ಗುಣಮೆಚ್ಚಿ ನನ್ನ ತಂಗಿಯನ್ನು ನೀನು ಮದುವೆಯಾಗುತ್ತೀಯಾ ಎಂದು ಕೇಳಿಕೊಳ್ಳುತ್ತಾನೆ. ಆಗ ಸುಂದರ ಮೈಕಟ್ಟಿನ ಆ ರೈತ ಅರಮನೆಯಲ್ಲಿ ವಾಸಿಸುವ ನೀವೆಲ್ಲಿ ಹಾಗೂ ಸಣ್ಣ ಮನೆಯಲ್ಲಿ ವಾಸಿಸುವ ನಾನೆಲ್ಲಿ ಇಬ್ಬರಿಗೂ ಸರಿಹೊಂದುವುದಿಲ್ಲ ಆದ್ದರಿಂದ ಬೇಡ ಎಂದು ಹೇಳುತ್ತಾನೆ.

ಅವನ ಗುಣ ಸ್ವಭಾವಗಳಿಗೆ ಮಾರುಹೋದ ಕಿರಿಯ ಯುವರಾಜ ಆತನನ್ನು ಅರಮನೆಗೆ ಕರೆದುಕೊಂಡು ಬರುತ್ತಾನೆ. ಇಬ್ಬರು ಮಕ್ಕಳು ತಾವು ವರನನ್ನು ಹುಡುಕಿಕೊಂಡು ಬಂದ ಬಗೆಯನ್ನು ತಮ್ಮ ತಂದೆಯಾದ ರಾಜನಿಗೆ ತಿಳಿಸುತ್ತಾರೆ.

ರಾಜ ಅವರಿಬ್ಬರ ಗುಣಸ್ವಭಾವಗಳನ್ನು ಕೇಳಿ ತನ್ನ ಮಗಳಿಗೆ ಅವುಗಳನ್ನು ವಿವರಿಸುತ್ತಾನೆ. ಇವರಲ್ಲಿ ನಿನಗೆ ಯೋಗ್ಯನಾದ ವರ ಯಾರು ಎಂದು ನೀನೇ ಆಯ್ಕೆ ಮಾಡಿಕೊಳ್ಳು ಎಂದು ತನ್ನ ಕಿರಿಯ ಮಗಳಿಗೆ ತಿಳಿಸುತ್ತಾನೆ.

ಕಿರಿಯ ಮಗಳು ಗುಣ ಸಂಪನ್ನನೂ ಹಾಗೂ ಆರ್ಥಿಕ ತಜ್ಞನೂ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿದ ರೈತನನ್ನು ಮದುವೆಯಾಗಬೇಕೆಂದು ತೀರ್ಮಾನಿಸುತ್ತಾಳೆ. ರಾಜ ಅವರಿಬ್ಬರಿಗೂ ಮದುವೆ ಮಾಡುತ್ತಾನೆ.

ಯೋಗ್ಯವರ ಹುಡುಕಿದ ಕಿರಿಯ ರಾಜಕುಮಾರನನ್ನು ರಾಜ್ಯದ ರಾಜನನ್ನಾಗಿ ರಾಜ್ಯಾಭಿಷೇಕ ಮಾಡುತ್ತಾನೆ. ಹಿರಿಯ ರಾಜಕುಮಾರನನ್ನು ಸೈನ್ಯದ ಅಧ್ಯಕ್ಷನನ್ನಾಗಿ ಹಾಗೂ ಅಳಿಯ ರೈತನನ್ನು ದೇಶದ ಪ್ರಧಾನಮಂತ್ರಿಯನ್ನಾಗಿ ನೇಮಕ ಮಾಡುತ್ತಾರೆ.

ಹೀಗೆ ಮಾನವೀಯ ಗುಣಗಳನ್ನು ಗುರುತಿಸುವ ವ್ಯಕ್ತಿಯು ರಾಜ ಹಾಗೂ ಅವುಗಳನ್ನು ಹೊಂದಿರುವ ಆರ್ಥಿಕ ತಜ್ಞನಾದ ಅಳಿಯನಿಂದ ರಾಜ್ಯವು ಸುಖ ಸಂಪತ್ತಿನಿಂದ ಪ್ರಪಂಚದಲ್ಲಿ ಗುರುತಿಸಿಕೊಂಡಿದೆ.


ವಿಸ್ಮಯ ಅಂಗಡಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group