ಮೂಡಲಗಿ: ‘ಮನುಷ್ಯ ತನ್ನಲ್ಲಿಯ ಅವಗುಣಗಳನ್ನು ತ್ಯಜಿಸಿ ಉತ್ತಮ ಆಚಾರ, ವಿಚಾರಗಳ ಮೂಲಕ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಮಂಗಳವಾರ ಆಚರಿಸಲಾದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಭಕ್ತಿಯಿಂದ ಮಾಡುವ ಧ್ಯಾನವು ಪರಮಾತ್ಮನ ಕೃಪೆಗೆ ಪಾತ್ರವಾಗುತ್ತದೆ ಎಂದರು.
ಭಕ್ತಿ ಮತ್ತು ಧ್ಯಾನವು ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ತಂದುಕೊಡುವುದಲ್ಲದೆ, ಒತ್ತಡಗಳಿಂದ ಮುಕ್ತವಾಗಿಸುತ್ತದೆ. ಶಿವನನ್ನು ಸ್ತುತಿಸುವ ಮೂಲಕ ಶಿವರಾತ್ರಿ ಆಚರಿಸಿ ಬದುಕಿನಲ್ಲಿ ಬೆಳಕನ್ನು ಕಾಣಬೇಕು ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಭಕ್ತರೊಂದಿಗೆ ಈಶ್ವರೀಯ ವಿಶ್ವವಿದ್ಯಾಲಯದ ಧ್ವಜಾರೋಹಣವನ್ನು ನೆರವೇರಿಸಿದರು.
ಬ್ರಹ್ಮಕುಮಾರಿ ಸವಿತಾ ಅಕ್ಕನವರು, ಶಿವಪುತ್ರಯ್ಯ ಮಠಪತಿ, ಜಿ.ಕೆ. ಮುರಗೋಡ, ವೈ.ಬಿ. ಕುಲಿಗೋಡ, ಬಶೆಟ್ಟೆಪ್ಪ ಗಾಡವಿ, ಗೋಪಾಲ ಗಂಗರಡ್ಡಿ, ಮಲ್ಲಿಕಾಜಪ್ಪ ಎಮ್ಮಿ, ಅಡಿವೆಪ್ಪ ತುಪ್ಪದ, ಸುಮಿತ್ರಾ ಸೋನವಾಲಕರ, ಮಹಾದೇವಿ ತಾಂವಶಿ, ಜಯಶ್ರೀ ಸೋನವಾಲಕರ, ಕವಿತಾ ಸೋನವಾಲಕರ, ಸುಧಾ ಶೀಲವಂತ, ಗೀತಾ ಸೋನವಾಲಕರ, ರಜನಿ ಬಂದಿ, ಮಹಾನಂದಾ ತಾಂವಶಿ, ಮಂಗಲ ಬಡ್ಡಿ, ವೀಣಾ ಗಾಡವಿ ಇದ್ದರು.