ಚಿತ್ರಕಲಾ ಪ್ರದರ್ಶನ, ಹಾಡುಗಾರಿಕೆ ಕಾರ್ಯಕ್ರಮ
ಹಾಸನ: ಹಾಸನದಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 317ನೇ ತಿಂಗಳ ಸಾಹಿತ್ಯ ಕಾರ್ಯಕ್ರಮವು ಖ್ಯಾತ ಚಿತ್ರ ಕಲಾವಿದರು, ಚಿತ್ರಕಲಾ ಶಿಕ್ಷಕರು ಶ್ರೀ ಬಿ.ಎಸ್.ದೇಸಾಯಿ ಇವರ ಪ್ರಾಯೋಜನೆಯಲ್ಲಿ ದಿನಾಂಕ 5-5-2024ರ ಭಾನುವಾರ ಮದ್ಯಾಹ್ನ 3.00 ಗಂಟೆಗೆ ಕಲಾಶ್ರೀ ಗ್ಯಾಲರಿ, ವಿವೇಕಾನಂದ 4ನೇ ಅಡ್ಡ ರಸ್ತೆ, ಡೆಂಟಲ್ ಕಾಲೇಜ್ ಹತ್ತಿರ, ವಿದ್ಯಾನಗರ ಇಲ್ಲಿ ನಡೆಯಲಿದೆ
ಕವಯಿತ್ರಿ, ಸಹ ಶಿಕ್ಷಕಿ ಶ್ರೀಮತಿ ನೀಲಾವತಿ ಸಿ.ಎನ್. ಕ್ರೈಸ್ಟ್ ಸ್ಕೂಲ್, ಹಾಸನ ಇವರು ನೊಬೆಲ್ ಪ್ರಶಸ್ತಿ ವಿಜೇತ ಗೀತಾಂಜಲಿ ಕವಿ ರವೀಂದ್ರ ಟ್ಯಾಗೋರ್ ಬದುಕು ಮತ್ತು ಅವರ ಸಾಹಿತ್ಯ ಕುರಿತ್ತಾಗಿ ಉಪನ್ಯಾಸ ನೀಡುವರು. ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕ ಗಾಯಕಿಯರಿಂದ ಹಾಡುಗಾರಿಕೆ ಇದೇ ಸಂದರ್ಭ ಚಿತ್ಕಲಾ ಫೌಂಡೇಶನ್ ಹಾಸನ, ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ ಇವರಿಂದ ಏರ್ಪಡಿಸಲಾಗುವ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರ ಕಲಾಕೃತಿಗಳ ಪ್ರದರ್ಶನ ಇರುವುದು.
ಹೆಚ್ಚಿನ ಸಂಖೈಯಲ್ಲಿ ಸಾಹಿತ್ಯಾಭಿಮಾನಿಗಳು ಕವಿಗಳು ಗಾಯಕರು ಚಿತ್ರ ಕಲಾವಿದರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಸಾಹಿತಿ ಗೊರೂರು ಅನಂತರಾಜು ಕೋರಿದ್ದಾರೆ.