spot_img
spot_img

ಶ್ರೀ ಸಿದ್ಧರಾಮೇಶ್ವರರ ಕುರಿತ ಉಪನ್ಯಾಸ ಕಾರ್ಯಕ್ರಮ

Must Read

- Advertisement -

ಬೆಳಗಾವಿ – ದಿನಾಂಕ 15  ರಂದು ಬೆಳಗಾವಿಯ ಲಿಂಗಾಯತ ಸಂಘಟನೆಯ ಹಳಕಟ್ಟಿ ಭವನದಲ್ಲಿ ವಾರದ ಪ್ರಾರ್ಥನೆ ಮತ್ತು ಅನುಭಾವ ಗೋಷ್ಠಿಯ  ಸಂದರ್ಭದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಜನ್ಮದಿನದ ಪ್ರಯುಕ್ತ ಶರಣ ಸಿದ್ದರಾಮೇಶ್ವರ ಜೀವನ ಮತ್ತು ಸೇವೆ ಕುರಿತಾದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶಿಕ್ಷಕಿಯರಾದ ಶರಣೆ ಕಮಲಾ ಗಣಾಚಾರಿ ತಮ್ಮ ಉಪನ್ಯಾಸದಲ್ಲಿ  ಶಿವಯೋಗಿ ಸಿದ್ದರಾಮರ ಬಾಲ್ಯದ  ಜೀವನ, ಶ್ರೀಶೈಲಕ್ಕೆ ಮಲ್ಲಯ್ಯನನ್ನು ಕಾಣಲು ತೆರಳಿದ ಸನ್ನಿವೇಶ, ನಂತರದ ಸಿದ್ದರಾಮರ ದೇವಾಲಯ- ಕೆರೆಕಟ್ಟೆಗಳ ನಿರ್ಮಾಣದಂತಹ ಸಾಮಾಜಿಕ ಸೇವೆ ಕಾರ್ಯಗಳು, ಅಲ್ಲಮರೊಡನೆ ಅನುಸಂಧಾನ, ಕಲ್ಯಾಣದಲ್ಲಿ ಬಸವಾದಿ ಶರಣರ ದರ್ಶನ ಪಡೆದು ಸಿದ್ದರಾಮ ತನ್ನ ಜ್ಞಾನದ ಹಸಿವನ್ನು ಹಿಂಗಿಸಿಕೊಳ್ಳಲು ಪ್ರಯತ್ನಿಸಿದ್ದು– ಹೀಗೆ ಹಲವಾರು ಘಟನೆಗಳೊಂದಿಗೆ ಸಿದ್ದರಾಮ ಶಿವಯೋಗಿ ಸಿದ್ದರಾಮೇಶ್ವರರಾದ ಬಗೆಯನ್ನು ತಿಳಿಸಿದರು.

ಅದೇ ಸಂದರ್ಭದಲ್ಲಿ ಮಹಾದೇವಿ ಅರಳಿಯವರ ನೇತೃತ್ವದಲ್ಲಿ ವಚನ ಪ್ರಾರ್ಥನೆ ನೆರವೇರಿತು. ಶರಣರಾದ ವಿ.ಕೆ.ಪಾಟೀಲ . ನ್ಯಾಯವಾದಿಗಳು ಶರಣರ ವಚನಗಳ ಮಹತ್ವ ಕುರಿತು ಮಾತನಾಡಿದರು. ಶರಣೆ ಸುಜಾತಾ ಮತ್ತಿಕಟ್ಟಿ ಸಿದ್ದರಾಮೇಶ್ವರರ ಬಸವ ಸ್ತೋತ್ರ ಹೇಳಿದರು.

- Advertisement -

ಜಯಶ್ರೀ ಚವಲಗಿ ಹಾಗೂ A.B. ಜೇವನಿ ಅವರಿಂದ ವಚನ ಗಾಯನ ನೆರವೇರಿತು.

ಲಿಂಗಾಯತ ಸಂಘಟನೆಯ ಉಪಾದ್ಯಕ್ಷರಾದ ಶರಣ ಸಂಗಮೇಶ ಅರಳಿ, ಕಾರ್ಯದರ್ಶಿಗಳಾದ ಶರಣ ಸುರೇಶ ನರಗುಂದ  ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ   ಶ್ರಮಿಸಿದವರು.

ಶರಣರಾದ  ಮಲ್ಲಪ್ಪ ಶಿರಗುಪ್ಪಿಶೆಟ್ಟರ, ಮಹಾಂತೇಶ ಮೆನಸಿನಕಾಯಿ, ಬಸರಾಜ ಬಿಜ್ಜರಗಿ, ಅಡವೇಶ ಇಟಗಿ, ಮಂಗಲಾ ಕಾಕತೀಕರ, ಅಕ್ಕಮಹಾದೇವಿ ತೆಗ್ಗಿ, ಶಾಂತಾ ಕಂಬಿ  ಮುಂತಾದವರು ಉಪಸ್ಥಿತರಿದ್ದರು. ಮಹಾದೇವಿ ವಿಭೂತಿ ಅವರು ಪ್ರಸಾದ ಸೇವೆಯ ವ್ಯವಸ್ಥೆ ಮಾಡಿದ್ದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group