spot_img
spot_img

ಸಿದ್ಧರಾಮೇಶ್ವರರ 850 ನೇ ಜಯಂತ್ಯುತ್ಸವ ಆಚರಣೆ

Must Read

- Advertisement -

ಸಿಂದಗಿ: ಸಹಜ ಜನ್ಮ ತಾಳಿದ ಜನರ ಇತಿಹಾಸ ಒಂದೆಡೆಯಾದರೆ ಕಾರಣಕ್ಕಾಗಿ ಜನ್ಮ ತಾಳಿದ ಶಿವಯೋಗಿ ಸಿದ್ಧರಾಮೇಶ್ವರರ ಇತಿಹಾಸ ತನಗಾಗಿ ಏನು ಬಯಸದೇ ಸಾಮಾಜಿಕ ತ್ಯಾಗ, ಶುದ್ಧವಾದ ಭಕ್ತಿಯಿಂದ ಪೂಜಿಸುವವನಿಗೆ ದೇವರು ಪ್ರತ್ಯಕ್ಷನಾಗುತ್ತಾನೆ ಅಂಥವರ ಜೀವನ ಚರಿತ್ರೆ ಇಂದಿನ ಮನಕುಲಕ್ಕೆ ಸಂದೇಶ ನೀಡುವಂತಾಗಿದೆ ಎಂದು ಏಲೈಟ ಕಾಲೇಜಿನ ಕನ್ನಡ ಉಪನ್ಯಾಸಕ ಅಶೋಕ ಬಿರಾದಾರ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ 850 ನೆಯ ಜಯಂತ್ಯುತ್ಸವದಲ್ಲಿ ಅವರು ಉಪನ್ಯಾಸ ನೀಡಿ, ಮಹಾರಾಷ್ಟ್ರದ ಅಂದಿನ ಸೊನ್ನಲಗಿ ಇಂದಿನ ಸೊಲ್ಲಾಪುರದ ವಡ್ಡರ ಕುಲದ ರೈತ ಕುಟುಂಬದ ಮುದ್ದುಗೌಡ, ತಾಯಿ ಸುಗ್ಗಲೆದೇವಿಯ ವೃದ್ಧ ದಂಪತಿಗಳಿಗೆ ರೇವಣಸಿದ್ದೇಶ್ವರ ತಾನಾಗಿ ಮನೆಗೆ ಆಗಮಿಸಿ ಮಗನ ಪ್ರಾಪ್ತಿ ದಯಪಾಲಿಸಿದ್ದು ಸಾಮಾನ್ಯ ಜನರಂತೆ ಗರ್ಭ ದರಿಸದೇ ಕೆಲವೇ ತಿಂಗಳಲ್ಲಿ ಜನಿಸಿದ ಸಿದ್ದರಾಮೇಶ್ವರರು ಅಪರೂಪದ ಮಗನಾಗಿ ಜನಿಸಿದ ಧೂಳಿ ಮಹಾಂಕಾಳ ಹುಟ್ಟಿನಿಂದ ಮೂಕನಾಗಿ ದನಗಳನ್ನು ಕಾಯುತ್ತಿರುವ ಸಂದರ್ಭದಲ್ಲಿ ಮಲ್ಲಯ್ಯನ ದರ್ಶನ ಭಾಗ್ಯ ಪಡೆದು ಮಲ್ಲಯ್ಯನಿಗೆ ಉಣಬಡಿಸಲು ಶ್ರೀಶೈಲಕ್ಕೆ ಹೋಗಿ ಮಲ್ಲಯ್ಯನಿಂದಲೇ ಬರಮಾಡಿಕೊಂಡು ವರಪಡೆದ ಮಹಾಜ್ಞಾನಿ.

ಅಲ್ಲಿಂದ ದೇಶ ಸಂಚಾರ ಮಾಡುತ್ತ ಊರಿಗೊಂದು ಕೆರೆ, ದೇವಾಲಯಗಳನ್ನು ನಿರ್ಮಿಸುತ್ತ ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ  ನಿರ್ಮಿಸಿದ ಅನುಭವ ಮಂಟಪದಲ್ಲಿ ಸಮಕಾಲಿನ ಶರಣರಲ್ಲಿ ಸಿದ್ದರಾಮೇಶ್ವರರು ಕಾಯಕಯೋಗಿ ಎನಿಸಿಕೊಂಡು  ಮೂರನೇಯ ಅಧ್ಯಕ್ಷರಾಗಿ ಶರಣ ತತ್ವವನ್ನು ಮೈಗೂಡಿಸಿಕೊಂಡು ಗುರು ಚನ್ನಬಸವಣ್ಣನವರಿಂದ ಲಿಂಗ ದೀಕ್ಷೆ ಪಡೆದುಕೊಂಡು ಕಾಯಕದೊಂದಿಗೆ ವಚನ ಕ್ರಾಂತಿ ಮಾಡಿದ್ದರಿಂದ ಶಿವಯೋಗಿ ಸಿದ್ಧರಾಮೇಶ್ವರರ ಪವಾಡಕ್ಕೆ ಸೊನ್ನಲಾಪುರ ಮಹಾರಾಣಿ ಚಾಮಲಾದೇವಿ  ಲಿಂಗ ದೀಕ್ಷೆ ಪಡೆದುಕೊಂಡ ಇತಿಹಾಸ ಹೇಳುತ್ತದೆ.

- Advertisement -

ಸುಮಾರು 68 ಸಾವಿರ ವಚನಗಳನ್ನು ರಚಿಸಿ 770 ಅಮರಗಣಂಗಳಲ್ಲಿ ಜೀವಂತ ಸಮಾಧಿಯಾಗಿದ್ದವರು ಸಿದ್ದರಾಮೇಶ್ವರ ಅವರು ಮಾತ್ರ ಕಾರಣ ಅವರ ಬಿಟ್ಟುಹೋದ ತತ್ವ ಆದರ್ಶಗಳು ಮುಂದಿನ ಪೀಳಿಗೆಗೆ  ಪೂರಕವಾಗಬೇಕಲ್ಲದೆ ಕುಲಕಸುಬುನ್ನು ಬಿಡದೇ ಮುಂದುವರೆಸಿಕೊಂಡು ಹೋಗಿ ಎನ್ನುವ ಸಂದೇಶವನ್ನು ಮರೆಯಬಾರದು ಎಂದರು.

ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ,  ಬಸವಣ್ಣನವರ ಅನುಭವ ಮಂಟಪದಲ್ಲಿ ಮೂರನೇ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮನುಜ ಮನುಕುಲವನ್ನು ಉದ್ದಾರ ಮಾಡದೇ ಪ್ರಾಣಿ, ಪಶು ಪಕ್ಷಿಗಳಿಗಾಗಿ ಅರವಟ್ಟಿಗೆಗಳನ್ನು ನಿರ್ಮಿಸಿ ಚೆನ್ನಬಸವಣ್ಣನವರ ಪರಮ ಶಿಷ್ಯರಾಗಿ ಸಮಾಜವನ್ನು ವಚನಗಳ ಮೂಲಕ ಉದ್ಧಾರ ಮಾಡಿದ್ದಾರೆ. ಸಿದ್ದರಾಮೇಶ್ವರರು ಕಾಯಕಯೋಗಿಗಳು, ಕರ್ಮಯೋಗಿಗಳು ಅವರಂತೆ ಅವರ ಸಮುದಾಯದ ಯುವಪೀಳಿಗೆ ಇತಿಹಾಸವನ್ನು ಅರಿತು ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿ, ಇಂದಿನ ಯುವಜನತೆ ಧಾರ್ಮಿಕದೆಡೆಗೆ ಹೋಗದೇ ಆಧುನಿಕ ಜಗತ್ತಿನೆಡೆಗೆ ಹೋಗಿ ದಾರಿ ತಪ್ಪುತ್ತಿದ್ದಾರೆ. ಕಾರಣ ಶರಣರ ಚರಿತ್ರೆಗಳನ್ನು ಹಿಂದುರಿಗಿ ನೋಡಲು ನೈತಿಕ ಶಿಕ್ಷಣ ಅತ್ಯಗತ್ಯ ಎಂದರು.

- Advertisement -

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ, ಪುರಸಭೆ ನಾಮನಿರ್ದೇಶಿತ ಸದಸ್ಯ ಸುನಂದಾ ಯಂಪೂರೆ ವೇದಿಕೆ ಮೇಲಿದ್ದರು.

ಶಿರಸ್ತೆದಾರ ಜಿ.ಎಸ್.ರೋಡಗಿ, ಕಂದಾಯ ಇಲಾಖೆಯ ಎಸ್.ಎಂ.ತಾರನಾಳ, ಎಂ.ಎಂ.ಹಂಗರಗಿ, ಮಾಜಿ ಸೈನಿಕ ಶಬ್ಬೀರಪಟೇಲ ಬಿರಾದಾರ, ಕಾನಿಪ ಧ್ವನಿ ಅಧ್ಯಕ್ಷ ಪಂಡಿತ ಯಂಪೂರೆ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಶಿವಾನಂದ ಕಲಬುರ್ಗಿ, ಭೋವಿ ಸಮಾಜದ ಮುಖಂಡರಾದ ಶಿಕ್ಷಕ ಮುತ್ತಪ್ಪ ಪಾತ್ರೋಟಿ, ಭೀಮಾಶಂಕರ ಯಂಪೂರೆ, ದಿಲೀಪ ಆಲಕುಂಟೆ, ರವಿ ಚಾಕರೆ, ತಿರುಪತಿ ಬಂಡಿವಡ್ಡರ, ಬಸವರಾಜ ಬಂಡಿವಡ್ಡರ, ಮುತ್ತು ಆಲಕುಂಟೆ, ಪಿಂಟು ಇರಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಿಕ್ಷಕ ಶಂಕರ ಕಟ್ಟಿಮನಿ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ಸೋಂಫೂರ ನಿರೂಪಿಸಿದರು. ಶಿರಸ್ತೆದಾರ ಸುರೇಶ ಮ್ಯಾಗೇರಿ ಸ್ವಾಗತಿಸಿದರು. ಗಂಗಾಧರ ಸೋಮನಾಯಕ ವಂದಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group