ಹಾವೇರಿ – ನೂತನವಾಗಿ ನಿರ್ಮಾಣವಾದ ಶಾಲಾ ಕೊಠಡಿಗಳು ಮಕ್ಕಳ ಕಲಿಕೆಗೆ ಸದ್ಭಳಕೆಯಾಗಲಿ, ನಿರ್ವಹಣೆ ಅಚ್ಚುಕಟ್ಟಾಗಿರಲಿ. ನಮ್ಮ ಅವಧಿಯಲ್ಲಿ ಅತೀ ಹೆಚ್ಚಿನ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ ತೃಪ್ತಿ ನನಗಿದೆ. ಮುಂದಿನ ದಿನಗಳಲ್ಲಿ ಮತಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಮಹತ್ವದ ಬದಲಾವಣೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ಇಂದು ಕಳಗೊಂಡ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ಕೆಂಪೇಗೌಡ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಲಲಿತಾ ಶಂಬನಗೌಡ ಪಾಟೀಲ, KMF ನಿರ್ದೇಶಕರಾದ ಬಸವರಾಜ ಅರಬಗೊಂಡ, ರುದ್ರಯ್ಯ ಹಿರೇಮಠ, ಶಂಕ್ರಣ್ಣ ಮಾತನವರ, ಶಿವಬಸಣ್ಣ ಕುಳೆನೂರ, ವೀರೇಂದ್ರ ಶೆಟ್ಟರ, ಶ್ರೀಮತಿ ರೇಣುಕಾ ಸುರೇಶ ಕರಿಯಮ್ಮ ಪೂಜಾರ,ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ರೀಮತಿ ಚಂಪವ್ವ ಮಾಸಣಗಿ, ಶ್ರೀಮತಿ ಗಂಗವ್ವ ಹರಿಜನ, ಶೇಕಪ್ಪ ಕಾಶಂಬಿ ಹಾಗೂ ಗ್ರಾಮದ ಹಿರಿಯರಾದ ನಾಗಪ್ಪ ಕರಡೆರ, ಹನುಮಂತಪ್ಪ ಕರಡೆರ, ವಿಜಯ ಬಣಕಾರ, ಶ್ರೀಮತಿ ಪುಟ್ಟವ್ವ ಮಾಲತೇಶ ಹರಿಜನ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ ಮತ್ತು ಇಲಾಖಾ ಅಧಿಕಾರಿಗಳು ಜೊತೆಗಿದ್ದರು.