spot_img
spot_img

ಮೋದಿಯವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡುವ ಸಂಕಲ್ಪ ಮಾಡೋಣ – ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಮೂಡಲಗಿ: ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಪ್ರತಿ ಮತಗಟ್ಟೆಗಳಲ್ಲಿ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ಅತಿ ಶಿಸ್ತಿನಿಂದ ಮಾಡುವಂತೆ ಶಾಸಕ ಮತ್ತು ಕ.ಹಾ.ಮ. ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಶನಿವಾರದಂದು ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಬಿಜೆಪಿ ಅರಭಾವಿ ಮಂಡಲ ಏರ್ಪಡಿಸಿದ್ದ “ಗಾಂವ-ಚಲೋ ಅಭಿಯಾನ”ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನರಿಗೆ ಹತ್ತಿರವಾಗುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಪ್ರಚಾರ ಪಡಿಸಲು ಅವರು ಕೋರಿದರು.

ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಗಾಂವ-ಚಲೋ ಅಭಿಯಾನವನ್ನು ಪ್ರತಿ ಮತಗಟ್ಟೆ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ. ಮತಗಟ್ಟೆಗಳ ಪ್ರಮುಖರು ಪ್ರತಿ ಮತಗಟ್ಟೆಗಳ ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ನಮ್ಮ ಪಕ್ಷವು ಅತಿ ಶಿಸ್ತು, ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಇಡೀ ವಿಶ್ವದಲ್ಲಿಯೇ ಬಿಜೆಪಿ ಅತಿ ಹೆಚ್ಚು ಪ್ರಾಥಮಿಕ ಸದಸ್ಯರನ್ನು ಹೊಂದುವ ಮೂಲಕ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಲ್ಲಿ ಪ್ರಪಂಚದಲ್ಲಿ ಬಲಿಷ್ಠ ಭಾರತವಾಗುತ್ತಿದೆ. ಇದಕ್ಕೆ ಮೋದಿಯವರು ಹಮ್ಮಿಕೊಂಡಿರುವ ಜನಪರ ಹಾಗೂ ಉತ್ತಮ ಯೋಜನೆಗಳೇ ಕಾರಣವೆಂದು ಹೇಳಿದರು.

- Advertisement -

ಪ್ರತಿ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸವನ್ನು ಮಾಡುವಂತಾಗಬೇಕು. ಪೇಜ್ ಪ್ರಮುಖರನ್ನು ನಿಯುಕ್ತಿಗೊಳಿಸಬೇಕು. ಜೊತೆಗೆ ಮತಗಟ್ಟೆಗಳಲ್ಲಿ ಸಮಿತಿ ಸಭೆಗಳನ್ನು ನಡೆಸಬೇಕು. ಈ ಮೂಲಕ ಮತಗಟ್ಟೆಗಳು ಸಕ್ರೀಯಗೊಳಿಸುವ ಮೂಲಕ ಕಾರ್ಯಕರ್ತರು ದುಡಿಯಬೇಕು. ನಮ್ಮದು ಕಾರ್ಯಕರ್ತರಿಗೆ ಗೌರವ ನೀಡುವ ಏಕಮೇವ ಪಕ್ಷವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತುಕ್ಕಾನಟ್ಟಿ ಗ್ರಾಮದ ಮನೆ-ಮನೆಗೆ ತೆರಳಿ ಮೋದಿ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ವಿತರಿಸಿದರು. ತುಕ್ಕಾನಟ್ಟಿ ಗ್ರಾಮದ 10 ರಿಂದ 18 ರವರೆಗಿನ ಒಟ್ಟು 09 ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತಗಟ್ಟೆಗಳ ಪ್ರಮುಖರೊಂದಿಗೆ ಲೋಕಸಭಾ ಚುನಾವಣೆಯ ಸಂಬಂಧವಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ತುಕ್ಕಾನಟ್ಟಿ ಗ್ರಾ.ಪಂ ಅಧ್ಯಕ್ಷೆ ಅಕ್ಕವ್ವ ಅರಭಾವಿ, ಪಿಕೆಪಿಎಸ್ ಅಧ್ಯಕ್ಷ ಸಿದ್ದಪ್ಪ ಹಮ್ಮಣವರ, ಅಜ್ಜಪ್ಪ ಮನ್ನಿಕೇರಿ, ಗುರುನಾಥ ಕಂಕಣವಾಡಿ, ಡಾ|| ವಸಂತ ನಾಯಿಕವಾಡಿ, ಸೋಮು ಹುಲಕುಂದ, ಯಲ್ಲಪ್ಪ ಹುಲಕುಂದ, ಗಂಗಾರಾಮ ಗುಡಗುಡಿ, ನಿಂಗಪ್ಪ ಮದುರ, ಕುಮಾರ ಮರ್ದಿ, ವೆಂಕಪ್ಪ ಗೋಡಿ, ಭೀಮಶಿ ಗದಾಡಿ, ಸಿದ್ದಪ್ಪ ಕೊಣ್ಣೂರ, ಭರಮಪ್ಪ ಹರಿಜನ, ಸಿದ್ದಪ್ಪ ಹುಲಕುಂದ ಯಮನಪ್ಪ ಗದಾಡಿ, ರವಿ ಗದಾಡಿ, ಸುನಂದಾ ಭಜಂತ್ರಿ ಅರಭಾವಿ ಮಂಡಲ ಬಿಜೆಪಿ ವಿವಿಧ ಮೋರ್ಚಾಗಳ ಅಧ್ಯಕ್ಷರು ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group